ಜಯಾ ತೆರಿಗೆ ಸಲ್ಲಿಕೆ ಮಾಡಿದ್ದು ಅಕ್ರಮ ಆಸ್ತಿ ಪ್ರಕರಣ ಮುಚ್ಚಿಹಾಕಲೆ?

Subscribe to Oneindia Kannada

ನವದೆಹಲಿ, ಮಾರ್ಚ್, 10: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ ಖುಲಾಸೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 15 ಕ್ಕೆ ಮುಂದೂಡಿದೆ.

ಕರ್ನಾಟಕದ ಪರ ವಾದ ಮಂಡಿಸಿದ ದುಶ್ಯಂತ ದಾವೆ ತಮ್ಮ ವಾದವನ್ನು ಗುರುವಾರ ಮಧ್ಯಾಹ್ನ 4 ಗಂಟೆಗೆ ಅಂತ್ಯ ಮಾಡಿದರು. [ಹೈಕೋರ್ಟ್ ವಿಶ್ಲೇಷಣೆ ಗೇಲಿ ಮಾಡಿದ ರಾಜ್ಯ ಸರ್ಕಾರ]

jayalalithaa

ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಕೆ ಮಾಡಿದ್ದು ಹೈ ಕೋರ್ಟ್ ತೆಗೆದುಕೊಂಡ ತೀರ್ಮಾನಗಳ ಲೋಪಗಳನ್ನು ದಾವೆ ಒಂದೊಂದಾಗಿ ಬಿಚ್ಚಿಟ್ಟಿದ್ದರು.

ಕರ್ನಾಟಕ ಮಂಡಿಸಿದ ವಾದದ ಪ್ರಮುಖ ಅಂಶಗಳು

* ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಜಯಲಲಿತಾ ಆದಾಯ ತೆರಿಗೆ ಸಲ್ಲಿಕೆ ಮಾಡಿದ್ದು ಕೇವಲ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಮುಚ್ಚಿಹಾಕುವುದಕ್ಕೆ ಎಂಬ ಪ್ರಶ್ನೆ ಮೂಡುತ್ತದೆ.[ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಟೈಮ್ ಲೈನ್]
* ನಾವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಲಿಖಿತವಾಗಿ ಸಲ್ಲಿಕೆ ಮಾಡಿದ್ದೇವೆ, ಹೈ ಕೋರ್ಟ್ ನೀಡಿದ ತೀರ್ಪಿನಲ್ಲಿರುವ ದೋಷಗಳನ್ನು ತೆರೆದಿಟ್ಟಿದ್ದೇವೆ.
* ದುಶ್ಯಂತ ದಾವೆ ನಂತರ ಬಿ ವಿ ಆಚಾರ್ಯ ರಾಜ್ಯದ ಪರವಾಗಿ ವಾದವನ್ನು ಮುಂದುವರಿಸಲಿದ್ದಾರೆ.
* ಜಯಲಲಿತಾ ಉಡುಗೊರೆ ಪಡೆದ ಕಂಪನಿಗಳು ಮತ್ತು ಗಿಫ್ಟ್ ಪಡೆದುಕೊಂಡಿದ್ದರ ಬಗ್ಗೆ ಆಚಾರ್ಯ ಬೆಳಕು ಚೆಲ್ಲಲಿದ್ದಾರೆ.

* ರಾಜ್ಯದ ಸಂಪೂರ್ಣ ವಾದವನ್ನು ಮಂಡಿಸಲು ಇನ್ನು ಮೂರು ದಿನ ಬೇಕು ಎಂದು ಆಚಾರ್ಯ ಕೇಳಿಕೊಳ್ಳಲಿದ್ದಾರೆ.
* ದುಶ್ಯಂತ ದಾವೆ ತಮ್ಮ ವಾದವನ್ನು ಮುಗಿಸಿದ್ದು ಮಂಡನೆ ಮಾಡಿದ್ದ ಎಲ್ಲ ವಿಚಾರಗಳಿಗೆ ಒಂದು ತಾರ್ಕಿಕ ಅಂತ್ಯ ಹೇಳಿದರು.
* ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 15 ಕ್ಕೆ ಮುಂದೂಡಿತು
* ರಾಜ್ಯ ಸರ್ಕಾರದ ಪರವಾಗಿ ಬಿ ವಿ ಆಚಾರ್ಯ ಮಾರ್ಚ್ 15 ರಂದು ವಾದ ಮಂಡನೆ ಮಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The supreme court has assured advocate Paramanath Kattariya of a hearing. He had raised a jurisdiction issue relating to the SC hearing the Jayalalithaa case. He has been told to file an interlocutory application before the court. Counsel for Karnataka, Dushyanth Dave tells the Supreme Court he will close his arguments relating to the disproportionate assets by 4 PM today.
Please Wait while comments are loading...