ಬೇರೆಯವರ ಆಸ್ತಿ ಬಗ್ಗೆ ಜಯಾ ಯಾಕೆ ಲೆಕ್ಕ ಕೊಡಬೇಕು?

Subscribe to Oneindia Kannada

ಬೆಂಗಳೂರು, ಏಪ್ರಿಲ್, 05: ಸುಪ್ರೀಂ ಕೋರ್ಟ್ ನಲ್ಲಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ಮುಂದುವರಿದಿದ್ದು ಜಯಾ ಪರವಾಗಿ ವಾದ ಮಂಡನೆ ಮಾಡಲಾಗುತ್ತಿದೆ.

ತಮಿಳುನಾಡು ಮುಖ್ಯಮಂತ್ರಿ ಪರವಾಗಿ ಎಲ್. ನಾಗೇಶ್ವರರಾವ್ ವಾದ ಮಂಡನೆ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು ಜಯಲಲಿತಾ ಎಲ್ಲಿಯೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ದಾಖಲೆಗಳಿಲ್ಲ ಎಂದು ವಾದ ಮಂಡಿಸಿದ್ದಾರೆ.'[ತಮಿಳುನಾಡು ಚುನಾವಣೆಗೆ ಮುನ್ನ ಜಯಾ ಕೇಸ್ ತೀರ್ಪು?]

jayalalithaa


ನಾಗೇಶ್ವರರಾವ್ ಜಯಾ ಪರವಾಗಿ ಮಂಡಿಸಿದ ವಾದ

* ಇದೊಂದು ದುರುದ್ದೇಶ ಪೂರಿತ ಮತ್ತು ರಾಜಕೀಯ ಪ್ರೇರಿತ ಪ್ರಕರಣ

* ಇತರರ ಆಸ್ತಿ ಬಗ್ಗೆ ಜಯಲಲಿತಾ ಯಾಕೆ ದಾಖಲೆ ಸಲ್ಲಿಕೆ ಮಾಡಬೇಕು?

* ಜಯಲಲಿತಾ ಮತ್ತು ಶಶಿಕಲಾ ಮಧ್ಯೆ ಹಣ ರವಾನೆಯಾದ ಬಗ್ಗೆ ಯಾವ ದಾಖಲೆಗಳು ಇಲ್ಲ. ಅಲ್ಲದೇ ಇಳವರಸಿ ಮತ್ತು ಸುಧಾಕರನ್ ಈ ಪ್ರಕರಣಕ್ಕೆ ಸಂಬಂಧವೇ ಪಡುವುದಿಲ್ಲ.

* ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ ಮಾತ್ರಕ್ಕೆ ಅಕ್ರಮ ಆಸ್ತಿ ಇತ್ತು ಎಂದು ವಾದ ಮಾಡುತ್ತಿರುವುದಕ್ಕೆ ಆಧಾರವೇ ಇಲ್ಲ

* ಇಡೀ ಪ್ರಕರಣವನ್ನು ನನ್ನ ಕಕ್ಷಿದಾರರಿಗೆ ವಿರುದ್ಧವಾದ ರೀತಿಯಲ್ಲ ಬಿಂಬಿಸಲಾಗಿಎದೆ.

* ಆಸ್ತಿ ಹೊಂದಿದ್ದಕ್ಕೆ ಮೂಲಗಳನ್ನು ತೋರಿಸಿದ ಮೇಲೆ ಅದು ಹೇಗೆ ಅಕ್ರಮ ಆಸ್ತಿ ಆಗಲು ಸಾಧ್ಯ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jayalalithaa DA case in Supreme Court: Jayalalithaa cannot be made to explain the assets or acquirement of property by others, L Nageshwar Rao arguing on behalf of the Tamil Nadu CM says. This is a politically motivated case. There has been a deliberate attempt to over-value the properties.
Please Wait while comments are loading...