ಜಯಾ ಕೇಸ್: ಹೈಕೋರ್ಟ್ ವಿಶ್ಲೇಷಣೆ ಗೇಲಿ ಮಾಡಿದ ಸರ್ಕಾರ!

Subscribe to Oneindia Kannada

ನವದೆಹಲಿ, ಫೆಬ್ರವರಿ, 24: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಒಂದೆಡೆ 68 ನೇ ಜನ್ಮದಿನದ ಸಂಭ್ರಮದಲ್ಲಿದ್ದರೆ ಇನ್ನೊಂದೆಡೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಜಯಾ ಅವರನ್ನು ಖುಲಾಸೆ ಮಾಡಿದ್ದರೂ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೆಲ್ಮನವಿ ಸಲ್ಲಿಕೆ ಮಾಡಿದೆ. ಮೇಲ್ಮನವಿಯ ಪರವಾಗಿ ರಾಜ್ಯ ಸರ್ಕಾರ ವಾದ ಮಂಡಿಸುತ್ತಿದೆ.

ನ್ಯಾಯಮೂರ್ತಿ ಪಿ ಸಿ ಘೋಷ್ ಮತ್ತು ಅಮಿತವ ರಾಯ್ ನೇತೃತ್ವದ ಪೀಠ ಅರ್ಜಿ ವಿಚಾರಣೆ ಮಾಡುತ್ತಿದೆ. ಕರ್ನಾಟಕ ಸರ್ಕಾರದ ಪರ ದುಷ್ಯಂತ ದಾವೆ ವಾದ ಮಂಡಿಸುತ್ತಿದ್ದು ಎರಡನೇ ದಿನ ಅಂದರೆ ಬುಧವಾರವೂ ನ್ಯಾಯಾಲಯದ ಎದುರು ಹಲವಾರು ವಿಚಾರಗಳನ್ನು ಮಂಡಿಸಿದರು.[ಗಡಿಬಿಡಿಯಲ್ಲಿ ಕುಮಾರಸ್ವಾಮಿ ಜಯಾ ಕೇಸಿಗೆ ಮೊಳೆ ಹೊಡೆದರೆ?]

1 ರು. ವೇತನ ಪಡೆಯುತ್ತಿದ್ದವರ ಬಳಿ 66 ಕೋಟಿ ಆಸ್ತಿ ಹೇಗೆ ಬಂತು? ನ್ಯಾಯಮೂರ್ತಿ ಕುಮಾರಸ್ವಾಮಿ ತರಾತುರಿಯಲ್ಲಿ ಜಯಲಲಿತಾ ಆಸ್ತಿ ಪ್ರಕರಣಕ್ಕೆ ತೆರೆ ಎಳೆದರೆ? ಎಂದು ಪ್ರಶ್ನೆ ಮಾಡಿದ್ದ ದುಷ್ಯಂತ ದಾವೆ ಬುಧವಾರ ಮಂಡಿಸಿದ ವಿಚಾರಗಳನ್ನು ಮುಂದೆ ನೋಡಿ... ನಾಳೆ ಸಹ ಕರ್ನಾಟಕದ ಪರವಾಗಿ ವಾದ ಮಂಡನೆಯಾಗಲಿದೆ.

 ಇದು ಭ್ರಷ್ಟಾಚಾರದ ಪ್ರಕರಣ

ಇದು ಭ್ರಷ್ಟಾಚಾರದ ಪ್ರಕರಣ

ಇದು ಆದಾಯ ತೆರಿಗೆ ಸಂಬಂಧಿಸಿದ ಪ್ರಕರಣ ಎಂದು ಭಾವಿಸಿದರೆ ತಪ್ಪಾಗುತ್ತದೆ. ಇದೊಂದು ಪಕ್ಕಾ ಭ್ರಷ್ಟಾಚಾರದ ಪ್ರಕರಣ. ಕರ್ನಾಟಕ ಹೈಕೋರ್ಟ್ ನಲ್ಲಿ ನಡೆದ ವಾದಗಳು ಕೆಲವೊಮ್ಮೆ ಹಾದಿ ತಪ್ಪಿವೆ.

ಅಕ್ರಮಕ್ಕೆ ಜಯಾ ಆಶ್ರಯದಾತಳೆ?

ಅಕ್ರಮಕ್ಕೆ ಜಯಾ ಆಶ್ರಯದಾತಳೆ?

ಬಹು ಬೆಲೆಬಾಳುವ ವಸ್ತುಗಳನ್ನು ಅಥವಾ ಗಿಫ್ಟ್ ಗಳನ್ನು ಜಯಲಲಿತಾ ಇಟ್ಟುಕೊಂಡಿದ್ದು ಸತ್ಯ ಎಂದು ಸಾಬೀತಾಗಿದೆ. ರಾಜಕಾರಣಿಗಳು ಇಂಥ ಗಿಫ್ಟ್ ಗಳನ್ನು ಇಟ್ಟುಕೊಂಡರೆ ಲೆಕ್ಕ ನೀಡಬೇಕಾಗುತ್ತದೆ ಎಂಬ ಕಾನೂನು ಇದೆ.

ಮಾಹಿತಿ ಹಕ್ಕಿನಡಿ ಇಲ್ಲ

ಮಾಹಿತಿ ಹಕ್ಕಿನಡಿ ಇಲ್ಲ

ಯಾವ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕಿನ ಅಡಿ ಬರುವುದಿಲ್ಲ. ಇದು ಸಹ ಜಯಲಲಿತಾ ಅವರ ಆಸ್ತಿ ಇದ್ದಕ್ಕಿದ್ದಂತೆ ಶರವೇಗದಲ್ಲಿ ಹೆಚ್ಚಾಗಲು ಕಾರಣವಾಯಿತು.

ಧನ್ಯವಾದ ಹೇಳಬೇಕು

ಧನ್ಯವಾದ ಹೇಳಬೇಕು

ಪ್ರಕರಣ ಮತ್ತು ಜಯಲಲಿತಾ ಅವರಿಗೆ ಧನ್ಯವಾದ ಹೇಳಬೇಕು. ಯಾಕೆಂದರೆ ಮುಂದೆ ಈ ಬಗೆಯ ಪ್ರಕರಣಗಳು ದಾಖಲಾದರೆ ಯಾವ ಗೊಂದಲಗಳು ಏರ್ಪಡದಂತೆ ತೀರ್ಪು ನೀಡಲು ಸಾಧ್ಯವಾಗುತ್ತದೆ. ಸುಪ್ರಿಂ ಈ ಬಗ್ಗೆ ಗಮನ ಹರಿಸಲಿದೆ ಎಂಬ ನಂಬಿಕೆ ಇದೆ.

ದಿಕ್ಕು ತಪ್ಪಿಸುವ ಯತ್ನ

ದಿಕ್ಕು ತಪ್ಪಿಸುವ ಯತ್ನ

ಭ್ರಷ್ಟಾಚಾರದ ಪ್ರಕರಣವನ್ನು ಆದಾಯ ತೆರಿಗೆ ಪ್ರಕರಣ ಎಂದು ಪರಿಗಣಿಸಿ ದಿಕ್ಕು ತಪ್ಪಿಸುವ ವ್ಯವಸ್ಥಿತ ಪ್ರಯತ್ನ ಮಾಡಲಾಗಿದೆ. 1996 ರಲ್ಲಿ ಪ್ರಕರಣ ದಾಖಲಾಗಿದ್ದರೆ 1998 ರಲ್ಲಿ ಜಯಲಲಿತಾ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದರು. ಇದಲ್ಲಿಯೂ ಸಹ ಸಾಕಷ್ಟು ಗೊಂದಲಗಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The arguments advanced by senior advocate Dushyanth Dave in the J Jayalalithaa disproportionate assets case pointed towards the various errors made by the Karnataka High Court which acquitted the Tamil Nadu Chief Minister.
Please Wait while comments are loading...