ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಕಗಳ ನಿರೀಕ್ಷೆ ನಂತರ ಸೈನಿಕರಿಗೆ ಸಿಗಲಿದೆ ಬುಲೆಟ್ ಪ್ರೂಫ್ ಹೆಲ್ಮೆಟ್

|
Google Oneindia Kannada News

ನವದೆಹಲಿ, ಜನವರಿ 18: ಪ್ರಾಣ ಒತ್ತೆಯಿಟ್ಟು ದೇಶ ಕಾಯುವ ಯೋಧರಿಗೆ ರಕ್ಷಣೆ ನೀಡುವಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಭಾರತೀಯ ಸೇನೆ, ಮುಂಬರುವ ದಿನಗಳಲ್ಲಿ ಗುಂಡು ನಿರೋಧಕ ಅತ್ಯಾಧುನಿಕ ವಿಶ್ವದರ್ಜೆಯ ಹೆಲ್ಮೆಟ್ ಗಳನ್ನು ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.[ಬಿಎಸ್ಎಫ್ ಆಯ್ತು, ಈಗ ಅರೆಸೇನಾ ಪಡೆಯ ಹುಳುಕು ಜಗಜ್ಜಾಹೀರು]

ನೂತನ ಮಾದರಿಯ ಹೆಲ್ಮೆಟ್ ಗಳನ್ನು ತಯಾರಿಸಲು ಕಾನ್ಪುರದ ಎಂಕೆಯು ಕಂಪನಿಗೆ ಅಧಿಕೃತ ಆದೇಶ ನೀಡಲಾಗಿದ್ದು, ಒಟ್ಟು 1 ಲಕ್ಷದ 58 ಸಾವಿರ ಹೊಸ ಹೆಲ್ಮೆಟ್ ಗಳನ್ನು ತಯಾರಿಸಿಕೊಡಲು ಸೂಚಿಸಲಾಗಿದೆ. ಇದಕ್ಕಾಗಿ, 170 ಕೋಟಿಯಿಂದ 180 ಕೋಟಿ ರು.ಗಳಷ್ಟು ಹಣವನ್ನು ನೀಡಲು ಸೇನೆ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಎಂಕೆಯು ಕಂಪನಿಯು ವಿಶ್ವ ನಾನಾ ದೇಶಗಳ ಸೇನೆಗಳಿಗೆ ರಕ್ಷಣಾ ಪರಿಕರಗಳನ್ನು ತಯಾರಿಸಿ ರವಾನಿಸುತ್ತದೆ.[ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ಯೋಧನ ವಿರುದ್ಧ ಬಿಎಸ್ಎಫ್ ಕಿಡಿ]

Jawans to get upgraded modern helmets

ಹೊಸ ಹೆಲ್ಮೆಟ್ ನ ವೈಶಿಷ್ಟ್ಯಗಳು
- ಈ ಹೆಲ್ಮೆಟ್ ಗಳು 9 ಮಿಲಿಮೀಟರ್ ಹತ್ತಿರದಿಂದ ಹೊಡೆದ ಬುಲೆಟ್ ನ ರಭಸವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿವೆ.
- ಬಳಸಲು ಬಲು ಹಗರ ಹಾಗೂ ಆರಾಮದಾಯಕ
- ನೈಟ್ ಬೈನಾಕ್ಯುಲರ್ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳು
- ಮೈಕ್ ಹೊಂದಿದ್ದು, ದೂರ ಸಂಪರ್ಕ ಸಾಧನಗಳ ಅಳವಡಿಕೆ

ಮೂರು ವರ್ಷ ಕಾಯಬೇಕು!
ಅತ್ಯಾಧುನಿಕವಾಗಿರುವ ಈ ಹೆಲ್ಮೆಟ್ ಗಳನ್ನು ಸೈನಿಕರು ಪಡೆಯಬೇಕೆಂದರೆ ಇನ್ನೂ 3 ವರ್ಷ ಕಾಯಬೇಕು. ಈ ಅವಧಿಯೊಳಗೇ ಈ ಹೆಲ್ಮೆಟ್ ಗಳನ್ನು ತಯಾರಿಸಿಕೊಡುವಂತೆ ಭಾರತೀಯ ಸೇನೆ ಎಂಕೆಯು ಕಂಪನಿಯನ್ನು ಕೇಳಿಕೊಂಡಿದೆ. ಆದರೂ, ಸದ್ಯಕ್ಕಂತೂ ಈ ಹೆಲ್ಮೆಟ್ ಗಳು ಲಭ್ಯವಿಲ್ಲ.

Jawans to get upgraded modern helmets

ದಶಕದ ಹಿಂದೆ ವಿದೇಶಿ ಹೆಲ್ಮೆಟ್
ಸುಮಾರು ಒಂದು ದಶಕದ ಹಿಂದೆ ಇಸ್ರೇಲ್ ನಿರ್ಮಿತ ಹೆಲ್ಮೆಟ್ ಗಳನ್ನು ಭಾರತೀಯ ಯೋಧರಿಗಾಗಿ ತರಿಸಲಾಗಿತ್ತು. ಅವುಗಳನ್ನು ರೈನ್ ಇನ್ ಫೋರ್ಸ್ ಮೆಂಟ್ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿತ್ತು. ಆದರೆ, ಅವುಗಳನ್ನು ಹಿರಿಯ ಅಧಿಕಾರಿಗಳಿಗೆ ಮಾತ್ರ ನೀಡಿದ್ದರಿಂದಾಗಿ, ಹಲವಾರು ಸೈನಿಕರು ಅವುಗಳಿಂದ ವಂಚಿತರಾಗಿದ್ದರು.[ಗಂಡನ ಹುಡುಕಿಕೊಡಿ ಅಂದ ಬಿಎಸ್ಎಫ್ ಯೋಧನ ಪತ್ನಿ]

Jawans to get upgraded modern helmets

ಇದಾದ ನಂತರ, ಸ್ವದೇಶಿ ನಿರ್ಮಿತ ಹೆಲ್ಮೆಟ್ ಗಳನ್ನು ತಯಾರಿಸಿ ನೀಡಲಾಗಿತ್ತಾದರೂ, ಅವು ತುಂಬಾ ಭಾರವಾಗಿದ್ದಿದುದರಿಂದ, ಯುದ್ಧದ ಸಂದರ್ಭಗಳಲ್ಲಿ ಅವುಗಳನ್ನು ಉಪಯೋಗಿಸುವುದು ದುಸ್ತರವಾಗುತ್ತಿತ್ತು. ಹಾಗಾಗಿ, ಅವುಗಳ ಬಳಕೆಯನ್ನು ಕೈಬಿಡಲಾಯಿತು. ಆದರೆ, ಅವು ಯಾವುವೂ ಅತ್ಯಾಧುನಿಕ ಹೆಲ್ಮೆಟ್ ಗಳಾಗಿರಲಿಲ್ಲ. ಹಾಗಾಗಿ, ಅತ್ಯಾಧುನಿಕ, ವಿಶ್ವದರ್ಜೆಯ ಹೆಲ್ಮೆಟ್ ಗಳನ್ನು ಒದಗಿಸಿಬೇಕೆಂಬುದು ಸೈನಿಕರ ದಶಕಗಳ ಬೇಡಿಕೆಯಾಗಿದ್ದು, ಈಗ ಅದು ಈಡೇರುವ ಸಂದರ್ಭ ಒದಗಿಬಂದಿದೆ.

Jawans to get upgraded modern helmets

ಒನ್ ಇಂಡಿಯಾ ಕಾಳಜಿ
ಸೈನಿಕರು ಈ ದೇಶದ ಆಸ್ತಿ. ಅವರ ರಕ್ಷಣೆ ಪ್ರತಿಯೊಂದು ಸರ್ಕಾರದ ಹೊಣೆ. ಇದರಲ್ಲಿ ರಾಜಕೀಯ ಸಲ್ಲ. ಇತ್ತೀಚೆಗಷ್ಟೇ ಗಡಿ ಕಾಯುವ ಯೋಧರ ಬವಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸಿವೆ. ಅದರ ಬೆನ್ನಲ್ಲೇ ದಶಕಗಳಿಂದ ಬಾಕಿಯಿದ್ದ ಹೆಲ್ಮೆಟ್ ಬೇಡಿಕೆ ಈಡೇರಿಸಲು ಸರ್ಕಾರ ಹೊರಟಿರುವುದು ಯೋಧ ಬದುಕಿಗೊಂದು ಆಶಾಕಿರಣ ಮೂಡಿದಂತಾಗಿದೆ. ಇದರ ಬಗ್ಗೆ ನೀವೇನೆನ್ನುತ್ತೀರಿ? ನಿಮ್ಮ ಅನಿಸಿಕೆಯನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ಗಳಲ್ಲಿ ಬರೆಯಿರಿ.

English summary
In a bid to provide better protection for their soldiers, the Indian Army has decided to equip its jawans with world-class modern helmets, said reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X