Tirupati: ಪಾರ್ಟಿ, ಫಂಕ್ಷನ್ ಬಿಟ್ಟು ತಿರುಮಲ ದೇವಸ್ಥಾನದತ್ತ ಹೆಜ್ಜೆ ಹಾಕಿದ ಬಾಲಿವುಡ್ ಸೆಲೆಬ್ರಿಟಿಗಳು
ದೀಪಾವಳಿ ಇಂದಿನಿಂದ ಆರಂಭವಾಗಿದೆ. ಸೆಲೆಬ್ರಿಟಿಗಳು ಕೂಡ ಹಬ್ಬದ ಆರಂಭದ ದಿನ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಸಾಂಪ್ರದಾಯಿಕ ಉಡುಗೆಯಲ್ಲಿ ಮುಂಚುತ್ತಿದ್ದಾರೆ. ದೇಶದೆಲ್ಲೆಡೆ ಇಂದು ಧನತೇರಸ್ ಆಚರಣೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ದಿನ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ತಿರುಪತಿಯಲ್ಲಿ ಧನತೇರಸ್ ಪೂಜೆಯನ್ನು ಮಾಡಿದರು. ಇದಕ್ಕಾಗಿ ಕೆಲ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿತ್ತು.
ಈ ಹಬ್ಬದ ಋತುವಿನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ತಿರುಪತಿಯಲ್ಲಿಂದು ಕರಣ್ ಜೋಹರ್ ಅವರು ಹಮ್ಮಿಕೋಂಡಿದ್ದ ಪೂಜೆಗೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಭಾಗವಹಿಸಿದ್ದರು. ಈ ವೇಳೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಲೆಹೆಂಗಾ ಧರಿಸುವ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ.

ಇಂದು ತಿರುಪತಿಯಲ್ಲಿ ನಿರ್ಮಾಪಕ ಕರಣ್ ಜೋಹರ್ ಅವರು ಧನತೇರಸ್ ಪೂಜೆಯನ್ನು ಮಾಡಿದರು. ಈ ಬೆಳಕಿನ ಹಬ್ಬವನ್ನು ಆಚರಿಸಲು ಕೆಲ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ ನೇರಳೆ ಬಣ್ಣದ ಹಾಫ್ ಸೀರೆಯನ್ನು ಧರಿಸುವ ಮೂಲಕ ಜಾನ್ವಿ ಆಕರ್ಷಕವಾಗಿ ಕಾಣಿಸಿಕೊಂಡರು.
ಕುತೂಹಲಕಾರಿಯಾಗಿ ನಟಿ ತನ್ನ ವದಂತಿಯ ಗೆಳೆಯ ಶಿಖರ್ ಪಹಾರಿಯಾ ಅವರೊಂದಿಗೆ ಆಗಸ್ಟ್‌ನಲ್ಲಿ ಆಂಧ್ರಪ್ರದೇಶದ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಹಿಂದೆ ಧರಿಸಿದ್ದ ಲೆಹೆಂಗಾವನ್ನು ಮರುಬಳಕೆ ಮಾಡಿದ್ದಾರೆ.
ನಟಿ ಜಾನ್ವಿಯೊಂದಿಗೆ ಆಕೆಯ ಸಹೋದರಿ ಖುಷಿ ಕಪೂರ್ ಕೂಡ ದೇವಸ್ಥಾನಕ್ಕೆ ಆಗಮಿಸಿದ್ದರು. ಅವರು ಗುಲಾಬಿ ಬಣ್ಣದ ಹಾಫ್ ಸೀರೆಯನ್ನು ಧರಿಸಿದ್ದರು. ಅದನ್ನು ಕೂಡ ಮರುಬಳಕೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ಮತ್ತೊಂದು ತಿರುಪತಿ ಪ್ರವಾಸದ ಸಮಯದಲ್ಲಿ ಜಾನ್ವಿ ಇದನ್ನು ಧರಿಸಿದ್ದರು.

ಖುಷಿ ಕಪೂರ್ ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಮೂಲಕ ತನ್ನ ಕನಸಿನ ಚೊಚ್ಚಲ ಸಿನಿ ಪ್ರವೇಶವನ್ನು ಮಾಡಲು ಸಿದ್ಧರಾಗಿದ್ದಾರೆ. ಇದರಲ್ಲಿ ಸುಹಾನಾ ಖಾನ್, ಅಗಸ್ತ್ಯ ನಂದಾ, ಅದಿತಿ ಸೈಗಲ್, ವೇದಂಗ್ ರೈನಾ, ಯುವರಾಜ್ ಮೆಂಡಾ ಮತ್ತು ಮಿಹಿರ್ ಅಹುಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮತ್ತೊಂದೆಡೆ ಸುಧಾಂಶು ಸರಿಯಾ ನಿರ್ದೇಶನದ 'ಉಲಾಜ್' ಚಿತ್ರದಲ್ಲಿ ಜಾನ್ವಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಜಾನ್ವಿ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಜೂನಿಯರ್ ಎನ್‌ಟಿಆರ್ ಅವರ ಸಿನಿಮಾದ ಭಾಗವಾಗಲಿದ್ದಾರೆ.
ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮ ಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಇಂದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಬುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.
ತಿರುಪತಿ ಬಾಲಾಜಿ ದೇವಾಲಯವು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಲಕ್ಷಾಂತರ ಜನ ನಿತ್ಯ ತಿರುಪತಿಗೆ ಭೇಟಿ ನೀಡುತ್ತಾರೆ. ಇಲ್ಲಿ ಭಕ್ತರು ತಮ್ಮೆಲ್ಲಾ ಇಚ್ಚೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.












Click it and Unblock the Notifications