ಭಾರತೀಯ ಸೇನೆಯಿಂದ ಕಾಶ್ಮೀರದಲ್ಲಿ ಮೂರನೇ ದಿನವೂ ಕಾರ್ಯಾಚರಣೆ
ಶ್ರೀನಗರ, ಫೆಬ್ರವರಿ 13: ಜಮ್ಮು ಕಾಶ್ಮೀರದ ಶ್ರೀನಗರದ ಕರಣ್ ನಗರದಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಇಲ್ಲಿ ನಿರಂತರವಾಗಿ ದಾಳಿ ನಡೆಯುತ್ತಿದೆ.
ಪೆ.11 ಭಾನುವಾರದಂದು ಇಲ್ಲಿನ ಸುಂಜ್ವನ್ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಟ್ಟು 5 ಸೈನಿಕರು ಹುತಾತ್ಮರಾಗಿದ್ದರು. ನಂತರ ಫೆ.12 ನಡೆದ ದಾಳಿಯಲ್ಲಿ ಮತ್ತೋರ್ವ ಸೈನಿಕ ಹುತಾತ್ಮರಾಗಿದ್ದರು.
#WATCH J&K: Encounter underway between security forces and terrorists in Srinagar's Karan Nagar (Visuals deferred by unspecified time) pic.twitter.com/sECH5chjMJ
— ANI (@ANI) February 13, 2018
ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿರುವ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ತನ್ನ ತಪ್ಪಿಗೆ ಪಾಕಿಸ್ತಾನ ತಕ್ಕ ಶಿಕ್ಷೆ ಅನುಭವಿಸಲಿದೆ ಎಂದು ಗುಡುಗಿದ್ದಾರೆ.













Click it and Unblock the Notifications