ಕಾಶ್ಮೀರದಲ್ಲಿ ಮತ್ತೆ ಗಡಿ ನುಸುಳಲು ಯತ್ನಿಸಿದ 5 ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರ, ಜೂನ್ 9: ಜಮ್ಮು ಮತ್ತು ಕಾಶ್ಮೀರದ ಉರಿ ಭಾಗದಲ್ಲಿ ಗಡಿ ನುಸುಳಲು ಯತ್ನಿಸಿದ ಐವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ.
ಉರಿ ಭಾಗದಲ್ಲಿ ಈ ಘಟನೆ ನಡೆದಿದ್ದು ಪಾಕಿಸ್ತಾನದಿಂದ ಭಾರತದ ಗಡಿ ನುಸುಳಲು ಯತ್ನಿಸಿದ ಉಗ್ರರ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ. ಇನ್ನೂ ಹಲವು ಉಗ್ರರು ಗಡಿ ನುಸುಳಲು ಯತ್ನಿಸಿರಬಹುದು ಎಂದುಕೊಳ್ಳಲಾಗಿದ್ದು ಇತರರಿಗಾಗಿ ಹುಡುಕಾಟ ಮುಂದುವರಿದಿದೆ.
[ಗೋಡೆ ಹಿಂದೆ ಅವಿತವರ ಪತ್ತೆಗೆ ಸೇನೆಯಿಂದ ಹೊಸ ಆಯುಧ 'ದಿವ್ಯಚಕ್ಷು']

ಈ ಮೂಲಕ ಕಳೆದ ಮೂರು ದಿನಗಳಲ್ಲಿ ಒಟ್ಟು 12 ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ.
ಡಿಸೆಂಬರ್ ಗೂ ಮೊದಲು ಕಾಶ್ಮೀರ ಕಣಿವೆಯಲ್ಲಿರುವ ಉಗ್ರರನ್ನೆಲ್ಲಾ ಹೊಡೆದುರುಳಿಸಬೇಕು ಎಂದು ಸೇನೆ ಡೆಡ್ಲೈನ್ ಹಾಕಿಕೊಂಡಿದ್ದು ಅದರಂತೆ ಉಗ್ರರ ಬೇಟೆಯಲ್ಲಿ ನಿರತವಾಗಿದೆ. ಇನ್ನು ಇತ್ತೀಚೆಗೆ ಸರಕಾರವೂ ಸೇನೆಗೆ ಕಾಶ್ಮೀರ ಕಣಿವೆಯಲ್ಲಿ ಕಾರ್ಯಚರಿಸಲು ಪೂರ್ತಿ ಸ್ವಾತಂತ್ರ್ಯ ನೀಡಿದೆ.
[48 ಗಂಟೆಗಳಲ್ಲಿ 7 ಉಗ್ರರ ಹತ್ಯೆ, 6 ಗಡಿ ನುಸುಳುವಿಕೆ ಯತ್ನ ವಿಫಲ]
ಇನ್ನು ಒಟ್ಟಾರೆ ಈ ವರ್ಷ 23 ಗಡಿ ನುಸುಳುವ ಪ್ರಯತ್ನಗಳನ್ನು ತಡೆಯಲಾಗಿದ್ದು 39 ನುಸುಳುಕೋರರನ್ನು ಸೇನೆ ಹೊಡೆದುರುಳಿಸಿದಂತಾಗಿದೆ.












Click it and Unblock the Notifications