ಜಮ್ಮು ಮತ್ತು ಕಾಶ್ಮೀರ: ಸೈನಿಕನಿಗೆ ಕಲ್ಲಿನಿಂದ ಹೊಡೆದು ಸಾಯಿಸಿದ ದುಷ್ಕರ್ಮಿ ಯುವಕರು
ಶ್ರೀನಗರ, ಅಕ್ಟೋಬರ್ 26: ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರ ಗುಂಪಿನಿಂದ ಕಲ್ಲೇಟಿಗೆ ಒಳಗಾಗಿ ತೀವ್ರ ಗಾಯಗೊಂಡಿದ್ದ ಸೈನಿಕ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಗುರುವಾರ ಗಡಿ ರಸ್ತೆ ಸಂಸ್ಥೆಗೆ (ಬಿಆರ್‌ಒ) ಭದ್ರತೆ ಒದಗಿಸುವ ಸಲುವಾಗಿ ನಿಯೋಜಿಸಲಾಗಿದ್ದ ತ್ವರಿತ ಪ್ರತಿಕ್ರಿಯಾ ತಂಡದಲ್ಲಿ ಸಿಪಾಯಿ ರಾಜೇಂದ್ರ ಸಿಂಗ್ ಕೂಡ ಸೇರಿದ್ದರು. ಸಂಜೆ ಆರು ಗಂಟೆ ಸುಮಾರಿಗೆ ಅನಂತ್‌ನಾಗ್ ಬೈಪಾಸ್ ಸಮೀಪ ಹಾದುಹೋಗುವಾಗ ಕಿಡಿಗೇಡಿ ಯುವಕರು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಘಟನೆಯಲ್ಲಿ ರಾಜೇಂದ್ರ ಸಿಂಗ್ ಅವರ ತಲೆಗೆ ಕಲ್ಲು ಬಡಿದು ತೀವ್ರ ಗಾಯವಾಗಿತ್ತು. ಕೂಡಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸೇನಾ ಶಿಬಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವಿಪರೀತ ರಕ್ತಸ್ರಾವ ಮತ್ತು ಆಳವಾದ ಗಾಯದಿಂದಾಗಿ ಅವರು ಶುಕ್ರವಾರ ಕೊನೆಯುಸಿರೆಳೆದರು.
Three Army Jawans martyred in the Kashmir valley today. While two Army Jawans were killed in Counter-terror Ops in Sopore and Tral, 22 year old Sepoy Rajendra Singh was killed in an attack by coward stone pelters at Anantnag trijunction when he was providing security to BRO. 🇮🇳 pic.twitter.com/5spSum9STo
— Aditya Raj Kaul (@AdityaRajKaul) 26 October 2018
ಉತ್ತರಾಖಂಡದ ಬಡೇನಾ ಗ್ರಾಮದ ನಿವಾಸಿಯಾಗಿರುವ ರಾಜೇಂದ್ರ ಸಿಂಗ್, 2016ರಲ್ಲಿ ಸೇನೆ ಸೇರಿದ್ದರು.
ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಇಬ್ಬರು ಯೋಧರು ಕೂಡ ಶುಕ್ರವಾರ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.












Click it and Unblock the Notifications