50 ದಿನಕ್ಕೆ ಕಾಶ್ಮೀರದಲ್ಲಿ 26 ಸೈನಿಕರು ಹುತಾತ್ಮ, 22 ಉಗ್ರರ ಹತ್ಯೆ
2010ರ ನಂತರ ಇದೇ ಮೊದಲ ಬಾರಿಗೆ 2017ರಲ್ಲಿ ಕೇವಲ 50 ದಿನಗಳಲ್ಲಿ 22 ಉಗ್ರರನ್ನು ಭಾರತೀಯ ಸೇನಾ ಪಡೆಗಳು ಹೊಡೆದುರುಳಿಸಿವೆ. ಆದರೆ ಇದೇ ವೇಳೆ 26 ಸೈನಿಕರೂ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು, ಫೆಬ್ರವರಿ 19: 2010ರ ನಂತರ ಇದೇ ಮೊದಲ ಬಾರಿಗೆ 2017ರಲ್ಲಿ ಕೇವಲ 50 ದಿನಗಳಲ್ಲಿ 22 ಉಗ್ರರನ್ನು ಭಾರತೀಯ ಸೇನಾ ಪಡೆಗಳು ಹೊಡೆದುರುಳಿಸಿವೆ. ಆದರೆ ಇದೇ ವೇಳೆ 26 ಸೈನಿಕರೂ ಪ್ರಾಣ ಕಳೆದುಕೊಂಡಿದ್ದಾರೆ.
ಕಾಶ್ಮೀರದಲ್ಲಿ ಈ ಬಾರಿ ಹಿಮಪಾತ ಹೆಚ್ಚಾದ ಹಿನ್ನಲೆಯಲ್ಲಿ ಓರ್ವ ಅಧಿಕಾರಿ ಸೇರಿ 20 ಸೈನಿಕರು ಹಿಮ ಕುಸಿತಕ್ಕೆ ಜೀವ ಕಳೆದುಕೊಂಡಿದ್ದಾರೆ. ಇನ್ನುಳಿದ 6 ಜವಾನರು ಉಗ್ರರ ಜತೆಗಿನ ಕಾದಾಟದಲ್ಲಿ ಅಸುನೀಗಿದ್ದಾರೆ.[ಉಗ್ರರು ಒಳನುಳಲು ತೋಡಿದ್ದ 20 ಅಡಿ ಸುರಂಗ ಪತ್ತೆ ಹಚ್ಚಿದ ಬಿಎಸ್ ಎಫ್]
2017ರ ಜನವರಿ ಒಂದರಿಂದ ಕಾಶ್ಮೀರದಲ್ಲಿ ಒಟ್ಟು 50 ಕಾರ್ಯಾಚರಣೆಗಳನ್ನು ಸೇನೆ ನಡೆಸಿದೆ. ಇದರಲ್ಲಿ 22 ಜನ ಸಾವನ್ನಪ್ಪಿದ್ದರೆ ಮೂವರು ಸೆರೆ ಸಿಕ್ಕಿದ್ದಾರೆ. ಇದೇ ವೇಳೆ ಬಂಡುಕೋರರಿಗೆ ಮಾಹಿತಿಗಳನ್ನು ನೀಡುತ್ತಿದ್ದ ಹಲವರನ್ನೂ ಸೇನೆ ಬಂಧಿಸಿದೆ.

ಕಳೆದ ವರ್ಷ ಹಿಜ್ಬುಲ್ಲಾ ಮುಜಾಹಿದ್ದೀನ್ ಬಂಡುಕೋರ ಬುರ್ಹಾನ್ ವನಿ ಸಾವಿನ ನಂತರ ಸುಮಾರು 100 ಯುವಕರು ಬಂಡುಕೋರ ಸಂಘಟನೆಗಳನ್ನು ಸೇರಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.[ಜಮ್ಮು ಕಾಶ್ಮೀರ ಬಂಡಿಪೋರಾ ಎನ್ಕೌಂಟರ್, 3 ಸೈನಿಕರು ಹುತಾತ್ಮ]
ಇತ್ತೀಚೆಗೆ ಸಾವನ್ನಪ್ಪಿರುವ ಉಗ್ರರು ವನಿ ಸಾವಿನ ನಂತರ ಕಳೆದ 6 ತಿಂಗಳಲ್ಲಿ ರೈಫಲ್ ಕೈಗೆತ್ತಿಕೊಂಡವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರರು ಬಂಡುಕೋರ ಸಂಘಟನೆ ಸೇರುವುದನ್ನು ತಡೆಯಲು ಸೇನೆ ಈ ಮಿಂಚಿನ ಕಾರ್ಯಾಚರಣೆಗಳನ್ನು ನಡೆಸಿದೆ.
2010ರಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಒಟ್ಟು 38 ಸೈನಿಕರು ಸಾವನ್ನಪ್ಪಿದ್ದರೆ ಈ ವರ್ಷ 22 ಜನ ಸಾವನ್ನಪ್ಪಿದ್ದಾರೆ. ಇನ್ನು 2015 ಮತ್ತು 16ರಲ್ಲಿ ತಲಾ 18 ಉಗ್ರರು ಸಾವನ್ನಪ್ಪಿದ್ದರು.
ಇತ್ತೀಚೆಗೆ ಅಂದರೆ ಫೆಬ್ರವರಿ 12ರಂದು ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರಿನಲ್ಲಿ 4 ಸೈನಿಕರು ಅಸುನೀಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.











Click it and Unblock the Notifications