ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ

|
Google Oneindia Kannada News

Recommended Video

Surgical Strike 2: ಒಂದೂವರೆ ನಿಮಿಷದಲ್ಲಿ ಮುಗಿದ ಆ ಆಪರೇಷನ್ ಬಗ್ಗೆ ತಿಳಿಯಬೇಕಾದ 10 ಸಂಗತಿ| Oneindia Kannada

ಮಸೂದ್ ಅಜರ್ ನ ಭಾವಮೈದುನ ನೋಡಿಕೊಳ್ಳುತ್ತಿದ್ದ ಜೈಶ್-ಇ-ಮೊಹ್ಮದ್ ನೆಲೆಯನ್ನು ಭಾರತೀಯ ವಾಯುಸೇನೆ ಮಂಗಳವಾರ ನಸುಕಿನಲ್ಲಿ ಹೊಸಕಿ ಹಾಕಿದೆ. ನಿದ್ರೆಯಲ್ಲಿದ್ದರೇನೋ, ನೂರಾರು ಉಗ್ರರ ಮೇಲೆ ಸಾವಿರ ಕೇಜಿಯ ಬಾಂಬ್ ಬಿದ್ದು, ನೆಗೆದು ಬಿದ್ದಿದ್ದಾರೆ. ಪುಲ್ವಾಮಾದಲ್ಲಿ ಜೈಶ್ ನಿಂದ ಉಗ್ರ ದಾಳಿ ನಡೆದ ಎರಡು ವಾರಕ್ಕೆ ಭಾರತ ನೀಡಿದ ಉತ್ತರ ಇದು.

ಉಗ್ರಗಾಮಿ ಆತ್ಮಾಹುತಿ ದಾಳಿಯಲ್ಲಿ ಸಿಆರ್ ಪಿಎಫ್ ನ ನಲವತ್ತು ಮಂದಿ ಹುತಾತ್ಮರಾದರು. ಅದರ ಪ್ರತೀಕಾರವಾಗಿ ನಡೆದ ದಾಳಿಯಿದು. ಈಗಿನ ದಾಳಿಯ ಪ್ರಮುಖ ಹತ್ತು ಅಂಶಗಳು ಇಲ್ಲಿವೆ.

* ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಎಂಬತ್ತು ಕಿಲೋಮೀಟರ್ ದೂರವಿರುವ ಬಲಾಕೋಟ್ ನಲ್ಲಿ ವಾಯು ದಾಳಿ ನಡೆಸಿ, ಅಂದಾಜು ಮುನ್ನೂರು ಉಗ್ರರನ್ನು ಕೊಲ್ಲಲಾಗಿದೆ ಎಂದು ಸರಕಾರದ ಮೂಲಗಳು ಹೇಳಿವೆ.

* ಭಾರತೀಯ ವಾಯು ಸೇನೆಯ ಹನ್ನೆರಡು ಮಿರಾಜ್ 2000-5 IN ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿ, ನಸುಕಿನ 3.30ರ ಸುಮಾರಿಗೆ ಹೋಗಿವೆ. ಲೇಸರ್ ಮಾರ್ಗದರ್ಶಿ 1000 Kg ಬಾಂಬ್ ಗಳಲ್ಲಿ ಗುರಿಯ ಮೇಲೆ ಸುರಿದು ಬಂದಿವೆ.

ಇಡೀ ಜಗತ್ತಿಗೆ ಭಾರತ ಹೇಳಿದ Non-Military pre-emptive action, ಹಾಗಂದರೇನು? ‌ಇಡೀ ಜಗತ್ತಿಗೆ ಭಾರತ ಹೇಳಿದ Non-Military pre-emptive action, ಹಾಗಂದರೇನು? ‌

* ಉಗ್ರಗಾಮಿಗಳಿಗೆ ಹೆಚ್ಚಿನ ತರಬೇತಿ ನೀಡುವ ಕ್ಯಾಂಪ್ ಆಗಿದ್ದ ಬಲಾಕೋಟ್ ನಲ್ಲಿ ಇಸ್ರೇಲ್ ನಿರ್ಮಿತ ಸ್ಪೈಸ್/ಕ್ರಿಸ್ಟಲ್ ಮೇಜ್ ದೂರಗಾಮಿ ಬಾಂಬ್ ಗಳನ್ನು ಬಳಸಿ, ಉಗ್ರ ನೆಲೆಯನ್ನು ನಾಮಾವಶೇಷ ಮಾಡಲಾಗಿದೆ.

Mirage 2000

* ಇಡೀ ಕಾರ್ಯಾಚರಣೆ ಒಂದೂವರೆ ನಿಮಿಷದಲ್ಲಿ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಸಣ್ಣ ಹಾನಿಯೂ ಇಲ್ಲದಂತೆ ಎಲ್ಲ ವಿಮಾನಗಳು ವಾಪಸಾಗಿವೆ.

* ಪಾಕಿಸ್ತಾನದಲ್ಲಿ ಜೈಶ್-ಇ-ಮೊಹ್ಮದ್ ನ ಅತಿ ದೊಡ್ಡ ತರಬೇತಿ ಕೇಂದ್ರ ಇದ್ದದ್ದು ಬಲಾಕೋಟ್ ನಲ್ಲಿ. ಮಸೂದ್ ಅಜರ್ ನ ಭಾವಮೈದುನ ಯೂಸೂಫ್ ಅಜರ್ ಅದನ್ನು ನಡೆಸುತ್ತಿದ್ದ. ಆತ್ಮಾಹುತಿ ಬಾಂಬರ್ ಗಳ ಪಾಲಿಗೆ ತರಬೇತಿಯ ಮುಖ್ಯ ಸ್ಥಳವೇ ಇದಾಗಿತ್ತು.

* ಭಾರತೀಯ ಗುಪ್ತಚರ ಸಂಸ್ಥೆಯು ಗುರಿಯನ್ನು ಗುರುತಿಸಿತು ಎಂದು ಭಾರತ ಸರಕಾರ ಹೇಳಿದೆ. ಮತ್ತು ಆ ಸ್ಥಳ ನಾಗರಿಕರು ಇದ್ದ ಸ್ಥಳದಿಂದ ಬಹಳ ದೂರು ಇತ್ತು.

'ಮಸೂದ್ ಅಜರ್ ಭಾವಮೈದುನ ನಿಗಾದಲ್ಲಿದ್ದ ಜೈಶ್ ಕ್ಯಾಂಪ್ ಉಡೀಸ್''ಮಸೂದ್ ಅಜರ್ ಭಾವಮೈದುನ ನಿಗಾದಲ್ಲಿದ್ದ ಜೈಶ್ ಕ್ಯಾಂಪ್ ಉಡೀಸ್'

* ಜೈಶ್-ಇ-ಮೊಹ್ಮದ್ ಸಂಘಟನೆಯಿಂದ ಇನ್ನಷ್ಟು ದಾಳಿಗಳಾಗಬಹುದು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿತ್ತು. ಅದಕ್ಕಾಗಿ ಫಿದಾಯಿನ್ ದಾಳಿಕೋರರನ್ನು ಬಲಾಕೋಟ್ ಕ್ಯಾಂಪ್ ನಲ್ಲಿ ತಯಾರು ಮಾಡಲಾಗುತ್ತಿತ್ತು ಎಂದು ಸರಕಾರ ಹೇಳಿದೆ.

* ಭಾರೀ ಅಪಾಯದ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಪ್ರೀಮೆಂಪ್ಟಿವ್ ದಾಳಿ ಅಗತ್ಯವಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.

* 1971ರ ನಂತರ ಇದೇ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಹೋಗಿ, ಭಾರತೀಯ ವಾಯುಸೇನೆ ದಾಳಿ ನಡೆಸಿದೆ.

English summary
In a "non-military, pre-emptive" strike by the Indian Air Force across the Line of Control, a major terror camp of the Jaish-e-Mohammed was destroyed, the government said today. The camp was managed by Jaish-e-Mohammed chief Masood Azhar's brother-in-law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X