CJP 'ಜೈಲ್ ಭರೋ ಆಂದೋಲನ' ಆರಂಭ; ಹೋರಾಟದ ಪ್ರಮುಖ ಕಾರಣ ತಿಳಿಸಿದ ಅಭಿಜೀತ್ ದೀಪ್ಕೆ
ಮುಂಬೈ: ಕಾಕ್ರೋಚ್ ಜನತಾ ಪಾರ್ಟಿ (CJP) ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ 'ಜೈಲ್ ಭರೋ ಆಂದೋಲನ'ಕ್ಕೆ ಇಂದು ಶುಕ್ರವಾರ ಮುಂಬೈನ ಶಿವಾಜಿ ಉದ್ಯಾನದಲ್ಲಿ ಚಾಲನೆ ನೀಡಿತು. ಈ ಮೂಲಕ ಮತ್ತೊಂದು ದೊಡ್ಡ ಹೋರಾಟವನ್ನು ಸಿಜೆಪಿ ಆರಂಭಿಸಿದೆ. ಈ ಆಂದೋಲನದ ಅಸಲಿ ಕಾರಣ ಕೇವಲ ಚುನಾವಣಾಧಿಕಾರಿ ಆಡಳಿತ ವೈಖರಿ, ಎಸ್‌ಐ ಆರ್ ಸಂಬಂಧ ಅಷ್ಟೇನಾ? ತಮ್ಮ ಹೋರಾಟದ ಕಾರಣಗಳನ್ನು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿಳಿಸಿದ್ದಾರೆ.
ಸಿಜೆಪಿಯು ಇತ್ತೀಚೆಗೆ ಚುನಾವಣಾ ಆಯೋಗದೊಳಗಿನ ಆಂತರಿಕ ಭಿನ್ನಾಭಿಪ್ರಾಯ, ಆರೋಪಗಳ, ಆಡಳಿತ ವೈಖರಿಯು ತನಿಖೆಯಿಂದ ಬಹಿರಂಗಗೊಂಡಿತ್ತು. ಅಲ್ಲಿಂದ ಪ್ರತಿಭಟನೆಯ ಎಚ್ಚರಿಕೆ ನೀಡುತ್ತಾ ಬಂದಿದ್ದ ಸಿಜೆಪಿ ಇದೀಗ ಮುಂಬೈನಲ್ಲಿ ಪ್ರತಿಭಟನೆ ಆರಂಭಿಸಿದೆ. ಆದರೆ ಇದು ಸಿಇಸಿ ವಿರುದ್ಧದ ಹೋರಾಟ ಮಾತ್ರವಲ್ಲ. ಸುದ್ದಿಗೋಷ್ಠಿಯಲ್ಲಿ ಅಭಿಜಿತ್ ಡಿಪ್ಕೆ ಹೇಳಿದ್ದೇನು?

ಅಭಿಜಿತ್ ಡಿಪ್ಕೆ ಅವರು, ಬಿಜೆಪಿಯು 2024ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿನ 48 ಲೋಕಸಭಾ ಸೀಟುಗಳ ಪೈಕಿ ಕೇವಲ 09 ಸೀಟು ಗೆದ್ದಿದೆ. ಬಳಿಕ ಆರು ತಿಂಗಳ ಅಂತರದಲ್ಲಿ ಜರುಗಿದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಜನ ಸ್ವೀಕರಿಸಿದ ರೀತಿಯಲ್ಲಿ ಫಲಿತಾಂಶ ಹೊರ ಬಿದ್ದಿತ್ತು. ಈ ಬದಲಾವಣೆ ಆಗಿದ್ದೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ಹೇಳಿದಂತೆ ಚುನಾವಣೆ ಆಯೋಗ ನಡೆದುಕೊಂಡಿದೆ ಎಂದು ಆರೋಪಿಸಿದ ಅವರು, ಈ ಕಾರಣಗಳಿಂದಲೇ ನಾವು ಮುಂಬೈನಿಂದ ಹೋರಾಟ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಮಹಾರಾಷ್ಟ್ರದಿಂದ ದೆಹಲಿಯ ಸಿಂಹಾಸನ ರಕ್ಷಣೆ!
"ದೆಹಲಿಯ ಸಿಂಹಾಸನವನ್ನೂ ರಕ್ಷಿಸುವುದು ನನ್ನ ಮಹಾರಾಷ್ಟ್ರ' ಎಂದು ದೀಪ್ಕೆ ಮರಾಠಿ ಭಾಷೆಯಲ್ಲಿ ಹೇಳಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂಬತ್ತು ಸೀಟು, ಅದರ ಮೈತ್ರಿ ಪಕ್ಷಗಳಾದ ಶಿವಸೇನೆ (7) ಮತ್ತು ಎನ್‌ಸಿಪಿ (1) ಜೊತೆಗೂಡಿ 'ಮಹಾಯುತಿ' ಸ್ಥಾಪಿಸಿಕೊಂಡಿತು. ಬಳಿಕ ಅವರ ಮೈತ್ರಿಕೂಟದ ಸೀಟುಗಳ ಸಂಖ್ಯೆ 17ಕ್ಕೆ ಹೆಚ್ಚಿತು. ಇತ್ತ 'ಮಹಾ ವಿಕಾಸ್ ಅಘಾಡಿ' (ಕಾಂಗ್ರೆಸ್ 13, ಶಿವಸೇನೆ (ಯುಬಿಟಿ) 9 ಮತ್ತು ಎನ್‌ಸಿಪಿ 8) ಒಟ್ಟು 30 ಸೀಟು ಪಡೆದುಕೊಂಡಿತ್ತು ಎಂದು ವಿವರಿಸಿದರು.
ನಂತರ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿ 132 ಸೀಟು ಪಡೆದು ದೊಡ್ಡ ಪಕ್ಷವಾಗಿ ಬೇರೂರಿತು. ಅದರಲ್ಲಿ ಮೈತ್ರಿ ಪಕ್ಷ ಶಿವಸೇನೆಗೆ 57, ಎನ್‌ಸಿಪಿ (41) ಜೊತೆಗೂಡಿ, ರಾಜ್ಯ ವಿಧಾನಸಭೆಯ ಒಟ್ಟು 288 ಸ್ಥಾನಗಳ ಪೈಕಿ 'ಮಹಾಯುತಿ'ಯು 230 ಸ್ಥಾನ ಗೆದ್ದು ಅಧಿಕಾರ ಹಿಡಿಯಿತು. ವಿಪಕ್ಷಗಳ ಮೈತ್ರಿ ಪಕ್ಷಗಳ ಎಲ್ಲ ಸೀಟು ಸೇರಿ ಒಟ್ಟು 46ಕ್ಕೆ ಕುಸಿಯಿತು. ಇದೆಲ್ಲ ನೋಡಿದರೆ ರಾಹುಲ್ ಗಾಂಧಿ ಅವರು ಮಾಡು ಮತಗಳ್ಳತನ ಆರೋಪ ನಿಜವಾಗಿದೆ ಎಂದರು.
ಅಂದಿನ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಭಾರತೀಯ ಚುನಾವಣಾ ಆಯೋಗದ (ECI) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ 'ಮತ ಕಳ್ಳತನ' ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ದೂರಿದರು. ಚುನಾವಣೆ ಪಾರದರ್ಶಕವಾಗಿಲ್ಲ, ಅವ್ಯವಸ್ಥೆಯಿಂದ ಕೂಡಿದೆ ಎಂದು ಹೇಳಿದ್ದರು.
ಗಾಂಧಿ ಜಯಂತಿ ದಿನ ಹೋರಾಟ ಆರಂಭ?
ಇಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಸಿಜೆಪಿಗೆ ಅನುಮತಿ ನೀಡಲಿಲ್ಲ. ಅಂದು ಬ್ರಿಟಿಷರ ವಿರುದ್ಧ ಹೋರಾಡಿದ್ದ ಮಹಾತ್ಮ ಗಾಂಧಿ ಅವರಿಗೂ ಬ್ರಿಟಿಷರು ಅನುಮತಿ ನೀಡಿರಲಿಲ್ಲ. ನಮಗೂ ಅದೇ ರೀತಿ ಆಗಿದೆ. ಹೀಗಾಗಿ ಮಹತ್ಮಾ ಗಾಂಧಿ ಜಯಂತಿಯಂದು ಪ್ರತಿಭಟನೆ ಆರಂಭಿಸಲು ನಿರ್ಧರಿಸಿದೆವು ಎಂದು ತಿಳಿಸಿದರು.


Click it and Unblock the Notifications
