'ಬಿಜೆಪಿ ಕೇಂದ್ರ ಕಚೇರಿ ಮೇಲೆ ಬುಲ್ಡೋಜರ್, ಇಡೀ ದೇಶದ ಗಲಭೆ ನಿಲ್ಲುತ್ತದೆ' ಎಎಪಿ ಲೇವಡಿ

ನವದೆಹಲಿ ಏಪ್ರಿಲ್ 20: 'ಬಿಜೆಪಿ ಕೇಂದ್ರ ಕಚೇರಿ ಮೇಲೆ ಬುಲ್ಡೋಜರ್ ಹೋದರೆ ಇಡೀ ದೇಶದಲ್ಲಿ ಗಲಭೆ ನಿಲ್ಲುತ್ತದೆ' ಎಂದು ಜಹಾಂಗೀರ್ಪುರಿ ಹಿಂಸಾಚಾರದ ಬಗ್ಗೆ ಎಎಪಿ ಲೇವಡಿ ಮಾಡಿದೆ. ಇದರೊಂದಿಗೆ ಆಪ್ ಟ್ವಿಟ್ಟರ್ ನಲ್ಲಿ #BulldozeBJPHQ ಎಂಬ ಹೆಸರಿನಲ್ಲಿ ಅಭಿಯಾನ ನಡೆಸುತ್ತಿದೆ.

ಹನುಮ ಜಯಂತಿಯಂದು ದೆಹಲಿಯ ಜಹಾಂಗೀರಪುರಿ ಪ್ರದೇಶದಲ್ಲಿ ಹಿಂಸಾಚಾರ ನಡೆದಿದೆ. ಈ ವೇಳೆ ಎರಡು ಸಮುದಾಯದವರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಇದುವರೆಗೆ ಎರಡು ಡಜನ್‌ಗಿಂತಲೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಹಿಂಸಾಚಾರದ ನಂತರ ಬಿಜೆಪಿ ಆಡಳಿತದ ಉತ್ತರ ಮುನ್ಸಿಪಲ್ ಕಾರ್ಪೊರೇಷನ್ ಕೂಡ ಕಾರ್ಯರೂಪಕ್ಕೆ ಬಂದಿದೆ. ಜಹಾಂಗೀರ್ಪುರಿಯಲ್ಲಿ ಅಕ್ರಮವಾಗಿ ಕಟ್ಟಿಕೊಂಡ ಮನೆಗಳ ತೆರವು ಕಾರ್ಯಚರಣೆಕ್ಕೆ ಇಂದು ಮುಂದಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಅದನ್ನು ನಿಲ್ಲಿಸಲಾಗಿದ್ದರೂ, ಇದೀಗ ಆಮ್ ಆದ್ಮಿ ಪಕ್ಷವು ಈ ಘಟನೆಯ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

 Jahangirpuri Violence: Aap Is Outraged About the Jahangirpuri Violence

ಎಎಪಿ ಪೋಸ್ಟರ್ ಬಿಡುಗಡೆ ಮಾಡಿದ್ದು, ಅದರ ಮೇಲೆ ದೇಶವನ್ನು ಗಲಭೆಗೆ ಬಿಜೆಪಿ ತಳ್ಳಿದೆ. ವಿವಿಧ ರಾಜ್ಯಗಳು ಗಲಭೆಯ ಬೆಂಕಿಯಲ್ಲಿ ಉರಿಯುತ್ತಿವೆ. ಎಲ್ಲೆಡೆ ಗಲಭೆಗಳು ಬಿಜೆಪಿಯೊಂದಿಗೆ ನೇರ ಸಂಪರ್ಕ ಹೊಂದಿವೆ ಎಂದು ಬರೆಯಲಾಗಿದೆ. ಈ ಗಲಭೆಗಳನ್ನು ತಡೆಯಲು ಒಂದೇ ಒಂದು ಮಾರ್ಗವಿದೆ. ಅದೇನೆಂದರೆ 'ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬುಲ್ಡೋಜರ್ ಓಡಿಸಿ. ಇಡೀ ದೇಶದಲ್ಲಿ ಗಲಭೆ ನಿಲ್ಲುತ್ತದೆ' ಎಂದು ಎಎಪಿ ಲೇವಾಡಿ ಮಾಡಿದೆ.

 Jahangirpuri Violence: Aap Is Outraged About the Jahangirpuri Violence

ಅದೇ ಸಮಯದಲ್ಲಿ ಎಎಪಿ ಗೃಹ ಸಚಿವ ಅಮಿತ್ ಶಾ ಅವರನ್ನೂ ಗುರಿಯಾಗಿಸಿಕೊಂಡಿದೆ. ಮತ್ತೊಂದು ಟ್ವೀಟ್‌ನಲ್ಲಿ ಅಮಿತ್ ಶಾ 2020 ರಲ್ಲಿ ದೆಹಲಿಯನ್ನು ಸುಟ್ಟರು ಮತ್ತು ಅದೇ ರೀತಿ 2022 ರಲ್ಲಿ ದೇಶವನ್ನು ಸುಡುತ್ತಾರೆ ಎಂದು ಪಕ್ಷವು ಬರೆದಿದೆ. ದೆಹಲಿಯನ್ನು ಸುಡುವವರು ಒಬ್ಬರೇ, ಇದರಿಂದ ಅಮಿತ್ ಶಾ ಮನೆಯಲ್ಲಿ ಬುಲ್ಡೋಜರ್ ಓಡಿಸಬೇಕು ಎಂದಿದೆ. ಇದರೊಂದಿಗೆ ಆಪ್ ಟ್ವಿಟ್ಟರ್ ನಲ್ಲಿ #BulldozeBJPHQ ಎಂಬ ಹೆಸರಿನಲ್ಲಿ ಅಭಿಯಾನ ನಡೆಸುತ್ತಿದೆ.

 Jahangirpuri Violence: Aap Is Outraged About the Jahangirpuri Violence

ಇದೇ ವೇಳೆ ಆಮ್ ಆದ್ಮಿ ಪಕ್ಷದ ನಾಯಕ ಅತಿಶಿ ಮಾತನಾಡಿ, ದೇಶಾದ್ಯಂತ ಗಲಭೆಗಳು ನಡೆಯುತ್ತಿವೆ. ಎಲ್ಲೆಲ್ಲೂ ಗೂಂಡಾಗಿರಿ, ಗಾಸಿಪ್ ಹಬ್ಬುತ್ತಿದೆ. ಈ ಎಲ್ಲ ಗಲಭೆಗಳನ್ನು ಬಿಜೆಪಿ ಮಾಡುತ್ತಿದೆ. ನಾವು ಗ್ಯಾರಂಟಿ ಕೊಡುತ್ತೇವೆ ಬಿಜೆಪಿ ಕೇಂದ್ರ ಕಚೇರಿಗೆ ಬುಲ್ಡೋಜರ್‌ಗಳನ್ನು ಹಾರಿಸಲಾಗುತ್ತದೆ. ಆಗ ಇಡೀ ದೇಶದ ಗಲಭೆ ನಿಲ್ಲುತ್ತದೆ. ಇನ್ನು ಅಮಿತ್ ಶಾ ಮನೆಗೆ ಬುಲ್ಡೋಜರ್ ಹೋದ ದಿನ ಈ ದೇಶದ ಗಲಭೆ ನಿಲ್ಲುತ್ತದೆ ಎಂದರು. ಗಲಭೆ ಎಬ್ಬಿಸಲು ಬಿಜೆಪಿ ದೇಶಾದ್ಯಂತ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ನೆಲೆಸುವಂತೆ ಮಾಡಿದೆ. ಬಿಜೆಪಿಯ ಬಳಿ ಮುಂದಿನ ಗಲೆಭೆ ಎಲ್ಲಿ ನಡೆಯುತ್ತದೆ ಮತ್ತು ಯಾರು ನಡೆಸುತ್ತಾರೆ ಎನ್ನುವ ಪಟ್ಟಿ ಇದೆ ಎಂದು ವಾಗ್ದಾಳಿ ಮಾಡಿದ್ದಾರೆ.

Recommended Video

      ಕ್ರಿಕೆಟ್ ಸ್ಟೇಡಿಯಂನಲ್ಲೂ KGF ಹವಾ: RCB ಗೆ ಚಿಯರ್ಸ್ ಮಾಡಿದ ಸಂಜಯ್ ದತ್ ಮತ್ತು ರವೀನಾ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+