ಕಾಶ್ಮೀರದಲ್ಲಿ ಎನ್ಕೌಂಟರ್, ಮೂವರು ಹಿಜ್ಬುಲ್ ಉಗ್ರರ ಹತ್ಯೆ

Subscribe to Oneindia Kannada

ಶೋಫಿಯಾನ್, ಅಕ್ಟೋಬರ್ 9: ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ನ ಗಾಟಿಪೊರಾದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಮೂವರು ಹಿಜ್ಬುಲ್ ಉಗ್ರರು ಹತ್ಯೆಯಾಗಿದ್ದಾರೆ.

ಖಚಿತ ಮಾಹಿತಿಯ ಮೇಲೆ ಶೋಫಿಯಾನ್ ನಲ್ಲಿ ಭದ್ರತಾ ಪಡೆಗಳು ಇಂದು ಮಧ್ಯಾಹ್ನದ ನಂತರ ಕಾರ್ಯಾಚರಣೆ ಆರಂಭಿಸಿದ್ದವು. ಸ್ಥಳದಲ್ಲಿ ಒಟ್ಟು ನಾಲ್ಕು ಉಗ್ರರು ಅಡಗಿಕೊಂಡಿದ್ದರು. ಈ ವೇಳೆ ಕಾರ್ಯಾಚರಣೆಯಲ್ಲಿ ಮೂರು ಉಗ್ರರು ಕೊಲೆಯಾಗಿದ್ದಾರೆ.

J&K: Two terrorists gunned down, encounter underway in Shopian

ಸ್ಥಳದಲ್ಲಿ ಓರ್ವ ಉಗ್ರನ ಹೆಣವನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಎರಡು ಶಸ್ತ್ರಾಸ್ತ್ರಗಳನ್ನೂ ಜಪ್ತಿ ಮಾಡಲಾಗಿದೆ. ಎನ್ಕೌಂಟರ್ ವೇಳೆ ಆರಂಭದಲ್ಲೇ ಇಬ್ಬರು ಉಗ್ರರು ಗುಂಡಿಗೆ ಬಲಿಯಾಗಿದ್ದರು. ಮೂರನೇ ಉಗ್ರನಿಗೆ ಶರಣಾಗಲು ಭದ್ರತಾ ಪಡೆಗಳು ಸೂಚಿಸಿದ್ದವು. ಆದರೆ ಆತ ನಿರಾಕರಿಸಿ ಗುಂಡಿಗೆ ಬಲಿಯಾಗಿದ್ದಾನೆ.

ಇನ್ನೂ ಎನ್ಕೌಂಟರ್ ಮುಂದುವರಿದಿದ್ದು ಇನ್ನೂ ಓರ್ವ ಉಗ್ರ ಸ್ಥಳದಲ್ಲಿ ಅಡಗಿಕೊಂಡಿದ್ದಾನೆ.

ಇಂದು ಮುಂಜಾನೆ ನಡೆದ ಮತ್ತೊಂದು ಎನ್ಕೌಂಟರ್ ನಲ್ಲಿ ಜೈಷ್ ಎ ಮೊಹಮ್ಮದ್ ಕಮಾಂಡರ್ ಖಾಲಿದ್ ನನ್ನು ಸೇನೆ ಹೊಡೆದುರುಳಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two terrorists were gunned down by the security forces in Gatipora village of Jammu and Kashmir's Shopian district on Monday, said reports.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ