ಅನಂತ್ ನಾಗ್ ನಲ್ಲಿ ಭಯೋತ್ಪಾದಕರ ದಾಳಿ, ಇಬ್ಬರು ಯೋಧರು ಹುತಾತ್ಮ
ಅನಂತ್ ನಾಗ್, ಜೂನ್ 3: ಜಮ್ಮು-ಕಾಶ್ಮೀರದ ಅನಂತ್ ನಾಗ್ ನಲ್ಲಿ ಸೇನೆಯ ವಾಹನಗಳ ಮೇಲೆ ಉಗ್ರರ ದಾಳಿ ನಡೆದಿದ್ದು, ಇಬ್ಬರು ಯೋಧರು ಹುತಾತ್ಮನಾಗಿ, ನಾಲ್ವರಿಗೆ ಗಾಯಗಳಾಗಿವೆ. ಉಧಂಪುರ್ ನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಕೃಷ್ಣಾ ಘಾಟಿ ವಲಯದಲ್ಲಿ ಪಾಕಿಸ್ತಾನ ಸೇನೆಯು ಶನಿವಾರ ಅಪ್ರಚೋದಿತ ದಾಳಿ ಆರಂಭಿಸಿದೆ. ಇದಕ್ಕೂ ಮುಂಚೆ ಪೂಂಛ್ ವಲಯದಲ್ಲಿ ಪಾಕ್ ಸೇನೆ ದಾಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.[ಕಾಶ್ಮೀರದ ಟಾಪ್ 12 ಭಯೋತ್ಪಾದಕರ ಪಟ್ಟಿ ಬಹಿರಂಗ]

ಈ ಮಧ್ಯ ಭಾರತೀಯ ಸೇನೆ ಮೇಲೆ ಅನಂತ್ ನಾಗ್ ನ ಖಾಜಿಗುಂಡ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು, ಆರು ಮಂದಿ ಸೈನಿಕರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಜಮ್ಮು-ಕಾಶ್ಮೀರದ ಪೂಂಛ್ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ನಡೆಸಿದ ದಾಳಿಯಲ್ಲಿ ಕನಿಷ್ಠ ಒಬ್ಬ ನಾಗರಿಕ ಹಾಗೂ ಐದರಿಂದ ಆರು ಯೋಧರು ಗಾಯಗೊಂಡಿದ್ದಾರೆ.[ಭಾರತ ಸೇನೆಯಿಂದ ಪ್ರತೀಕಾರ, 6 ಪಾಕ್ ಸೈನಿಕರ ಸಾವು]
ಶುಕ್ರವಾರ ರಾತ್ರಿ ಹನ್ನೊಂದು ಗಂಟೆಯಿಂದ ಕದನ ವಿರಾಮವನ್ನು ಉಲ್ಲಂಘಿಸಿ ಪಾಕಿಸ್ತಾನ ದಾಳಿಯನ್ನು ನಡೆಸುತ್ತಿದೆ. ಇದಕ್ಕೂ ಮುನ್ನ ಗುರುವಾರ ಕೃಷ್ಣ ಘಾಟಿ ವಲಯದಲ್ಲಿ ನಡೆದ ಪಾಕ್ ನ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ನಾಗರಿಕರಿಗೆ ಗಾಯಗಳಾಗಿದ್ದವು. ಸಣ್ಣ ಶಸ್ತ್ರಾಸ್ತ್ರಗಳು, ಮಾರ್ಟರ್ ಗಳನ್ನು ಬಳಸಿ ಜಮ್ಮು-ಕಾಶ್ಮೀರದ ನೌಶೆರಾ ಮತ್ತು ಕೃಷ್ಣಾ ಘಾಟಿಯಲ್ಲಿ ದಾಳಿ ನಡೆಸಿದ್ದು, ಅದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.












Click it and Unblock the Notifications