ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಸಚಿವ ಮಲ್ಲಾರೆಡ್ಡಿ ಹಾಗೂ ಕುಟುಂಬಸ್ಥರ ನಿವಾಸಗಳಲ್ಲಿ ಐಟಿ ದಾಳಿ

|
Google Oneindia Kannada News

ಹೈದರಾಬಾದ್‌, ನವೆಂಬರ್‌ 22: ತೆಲಂಗಾಣ ಕಾರ್ಮಿಕ ಕಾರ್ಮಿಕ ಸಚಿವ ಹಾಗೂ ಟಿಆರ್‌ಎಸ್‌ ನಾಯಕ ಮಲ್ಲಾರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆದಿದೆ.

ಆದಾಯ ತೆರಿಗೆ ಅಧಿಕಾರಿಗಳು ಕಾರ್ಮಿಕ ಸಚಿವ ಮಲ್ಲಾರೆಡ್ಡಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ತೆರಿಗೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಲ್ಲಾ ರೆಡ್ಡಿ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗಿದೆ. ಮಲ್ಲಾ ರೆಡ್ಡಿ ಅವರು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರ ಸಂಪುಟದಲ್ಲಿ ಎರಡನೇ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಕೇಂದ್ರ ಸರ್ಕಾರಿ ಸಂಸ್ಥೆಯಾದ ಆಧಾಯ ತೆರಿಗೆ ಇಲಾಖೆಯಿಂದ ಈಗ ಶೋಧ ನಡೆಸಲಾಗಿದೆ.

ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೆ ದಾಳಿಯಿಂದ 1,300 ಕೋಟಿ ರೂಪಾಯಿ ಕಪ್ಪು ಹಣ ಪತ್ತೆರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೆ ದಾಳಿಯಿಂದ 1,300 ಕೋಟಿ ರೂಪಾಯಿ ಕಪ್ಪು ಹಣ ಪತ್ತೆ

ನವೆಂಬರ್‌ 9ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗ್ರಾನೈಟ್‌ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಸಚಿವ ಗಂಗೂಲ ಕಮಲಾಕರ್ ಅವರಿಗೆ ಸಂಬಂಧಿಸಿದ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ತೆಲಂಗಾಣ ರಾಜ್ಯದಲ್ಲಿ ಗ್ರಾನೈಟ್ ವಹಿವಾಟಿನಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆಗಾಗಿ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ಅಕ್ರಮ ಹಣ ವರ್ಗಾವಣೆಯ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಿದೆ.

IT raid at residences of Telangana minister Mallareddy and family members

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ 40 ಜನರ ತಂಡಗಳ ಏಕಕಾಲಕ್ಕೆ ಮಲ್ಲಾರೆಡ್ಡಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಹಾಗೂ ರಿಯಲ್‌ ಎಸ್ಟೇಟ್‌ ಕಂಪೆನಿಗಳಲ್ಲಿ ಶೋಧ ನಡೆಸಿದ್ದವು. ಮಲ್ಲಾರೆಡ್ಡಿ ಕಾಲೇಜುಗಳ ಬ್ಯಾಂಕ್‌ ಖಾತೆಗಳಿಗೆ ಸಂದಾಯವಾಗಿರುವ ಕ್ರಾಂತಿ ಎಂಬ ಬ್ಯಾಂಕ್‌ನಲ್ಲಿ ಸಂಸ್ಥೆ ಇಟ್ಟಿರುವ ಹಣದ ಬಗ್ಗೆಯೂ ಶೋಧ ನಡೆಸಲಾಗಿದೆ.

ಗಾಯತ್ರಿ ಶಾಂತೇಗೌಡ ತಿರುಪತಿ ಪ್ರವಾಸದಲ್ಲಿರುವ ವೇಳೆ ಐಟಿ ದಾಳಿ: ಹೆಚ್ಚಿದ ಅನುಮಾನಗಾಯತ್ರಿ ಶಾಂತೇಗೌಡ ತಿರುಪತಿ ಪ್ರವಾಸದಲ್ಲಿರುವ ವೇಳೆ ಐಟಿ ದಾಳಿ: ಹೆಚ್ಚಿದ ಅನುಮಾನ

ಐಟಿ ಅಧಿಕಾರಿಗಳು ದಾಳಿ ಆರಂಭಿಸಿದಾಗ ಸಚಿವರು ಅವರ ನಿವಾಸದಲ್ಲೇ ಇದ್ದರು. ಸಿಎಂಆರ್‌ ಕಾಲೇಜುಗಳ ಅಧ್ಯಕ್ಷರಾಗಿರುವ ಮಲ್ಲಾರಡ್ಡಿ ಅವರ ಸಹೋದರ ಗೋಪಾಲರೆಡ್ಡಿ ಓಡಿಹೋಗಲು ಪ್ರಯತ್ನಿಸಿದರು. ಆದರೆ ಅಧಿಕಾರಿಗಳು ಅವರನ್ನು ತಡೆದು ಶೋಧ ಮುಂದುವರಿಸಿದರು. ಬೋಯಿನಪಲ್ಲಿ ಹಾಗೂ ಕೊಂಪಲ್ಲಿಯಲ್ಲಿರುವ ಸಚಿವ ಮಲ್ಲಾರೆಡ್ಡಿ ಅವರ ನಿವಾಸ ಹಾಗೂ ಮೇಡ್ಚಲ್‌ ಬಳಿಯ ಇತರ ಕೆಲವು ಸ್ಥಳಗಳಲ್ಲಿ ಐಟಿ ಶೋಧ ನಡೆಸಿದೆ. ಸಚಿವ ಮಲ್ಲಾರೆಡ್ಡಿ ಅವರ ಅಳಿಯ ಮಲಕಜಗಿರಿಯಿಂದ ಲೋಕಸಭೆಗೆ ಸ್ಪರ್ಧಿಸಿ 2019ರ ಚುನಾವಣೆಯಲ್ಲಿ ರೇವಂತ್ ರೆಡ್ಡಿ ಅವರ ವಿರುದ್ಧ ಸೋತಿದ್ದರು.

English summary
The Income Tax Department on Tuesday searched the residences of Telangana Labor Minister and TRS leader Mallareddy and his family members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X