ದೇಶದಾದ್ಯಂತ ಆಭರಣ ಮಳಿಗೆ ಮೇಲೆ ದಾಳಿಗೆ ಐಟಿ ಸಿದ್ಧತೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 22: 500, 1000 ರುಪಾಯಿ ನೋಟುಗಳನ್ನು ರದ್ದು ಮಾಡಿದ ಘೋಷಣೆ ಬಂದ ನಂತರ, ಹಲವರು ಧಾವಿಸಿದ್ದು ಜ್ಯುವೆಲ್ಲರಿ ಮಳಿಗೆಗಳಿಗೆ. ಕಪ್ಪು ಹಣ ಇರುವವರು ತಮ್ಮ ಹಳೇ ನೋಟುಗಳಿಗೆ ಚಿನ್ನ ಖರೀದಿಸಿಬಿಡೋಣ ಎಂದು ಆಭರಣ ಮಳಿಗೆಗಳಿಗೆ ನುಗ್ಗಿದರು. ಅದೇ ವೇಳೆ ಹಲವು ಚಿನ್ನಾಭರಣ ಮಾರಾಟಗಾರರು ಒಂದು ಆಟ ಹೂಡಿದರು. ಚಿನ್ನವನ್ನು ಹೆಚ್ಚಿನ ಬೆಲೆಗೆ ಮಾರತೊಡಗಿದರು.

ಆದರೆ, ಇದು ಆದಾಯ ತೆರಿಗೆ ಇಲಾಖೆ ಗಮನಕ್ಕೆ ಬಂದಿತು. ಜ್ಯುವೆಲ್ಲರಿ ಮಳಿಗೆಗಳ ಮೇಲೆ ದಾಳಿಗಳನ್ನು ಮಾಡಲಾಯಿತು. ಹಲವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂತು. ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಗ್ರಾಹಕರಿಂದ ಪಡೆಯಬೇಕು ಎಂಬ ನಿಯಮ ಕೂಡ ಉಲ್ಲಂಘಿಸಿದ್ದರು. ಆದ್ದರಿಂದಲೆ ಸರಕಾರ, ಚಿನ್ನ ಖರೀದಿ ವೇಳೆ ಗ್ರಾಹಕರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಬೇಕು ಎಂಬ ನಿಯಮ ಮಾಡಿತು.[ಚೆನ್ನೈ: ಆಭರಣ ಮಳಿಗೆಗಳ ಮೇಲೆ ಆದಾಯ ತೆರಿಗೆ ದಾಳಿ]

IT eyes jewelers selling gold at higher rates to black money hoarders

ಆದಾಯ ತೆರಿಗೆ ಅಧಿಕಾರಿಯೊಬ್ಬರು ಒನ್ಇಂಡಿಯಾ ಜತೆ ಮಾತನಾಡಿ, ಹಲವು ನಿಯಮ ಉಲ್ಲಂಘನೆಗಳು ಗಮನಕ್ಕೆ ಬಂದಿವೆ. ಹಲವು ಆಭರಣ ಮಾರಾಟಗಾರರು ನಿಯಮ ಮೀರಿದ್ದಾರೆ. ಜನರ ಗಾಬರಿಯನ್ನು ಬಂಡವಾಳ ಮಾಡಿಕೊಂಡ ಹಲವು ಮಾರಾಟಗಾರರು ಹೆಚ್ಚಿನ ಬೆಲೆಗೆ ಚಿನ್ನ ಮಾರಿರುವುದು ಗಮನಕ್ಕೆ ಬಂದಿದೆ. ಹಲವು ಪ್ರಕರಣಗಳಲ್ಲಿ ಪ್ಯಾನ್ ಕಾರ್ಡ್ ಮಾಹಿತಿಯೇ ಕೇಳಿಲ್ಲ ಎಂದು ತಿಳಿಸಿದ್ದಾರೆ.[ಚಿನ್ನಾಭರಣ ಅಂಗಡಿ ಸಿಸಿಟಿವಿ ಫೂಟೇಜ್ ಮೇಲೂ ಐಟಿ ಕಣ್ಣು]

ದೇಶದಾದ್ಯಂತ ಇರುವ ಹಲವು ಆಭರಣ ಮಳಿಗೆಗಳ ಮೇಲೆ ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆ ಯೋಜನೆ ರೂಪಿಸಿದೆ. ಒಂದು ವೇಳೆ ಗ್ರಾಹಕರಿಂದ ಪ್ಯಾನ್ ಕಾರ್ಡ್ ಮಾಹಿತಿ ಪಡೆದಿಲ್ಲ ಅಂದರೆ ಸಿಕ್ಕಾಪಟ್ಟೆ ವಿವರಣೆ ನೀಡಬೇಕಾಗುತ್ತದೆ. ಹೆಚ್ಚಿನ ಬೆಲೆಗೆ ಚಿನ್ನ ಮಾರಾಟ ಮಾಡಿದ್ದಾರಾ ಎಂಬುದನ್ನು ಪರಿಶೀಲಿಸುತ್ತೇವೆ. ಒಂದು ವೇಳೆ ತಪ್ಪು ಕಂಡುಬಂದಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ತೆರಿಗೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IT department is planning a series of raids across the country at jewelers stores. If the jeweler has not taken the PAN details of a customer, then he would have a lot of explaining to do.
Please Wait while comments are loading...