ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶದಲ್ಲಿ ತನ್ನದೇ ನಿಲ್ದಾಣ ಸ್ಥಾಪಿಸಲಿದೆ ಇಸ್ರೋ

|
Google Oneindia Kannada News

ನವದೆಹಲಿ, ಜೂನ್ 13: ಬಾಹ್ಯಾಕಾಶ ಲೋಕದಲ್ಲಿ ಅನೇಕ ಮಹತ್ವದ ಸಾಧನೆಗಳನ್ನು ಮಾಡುತ್ತಿರುವ ಇಸ್ರೋ, 2022ರ ವೇಳೆಗೆ ಬಾಹ್ಯಾಕಾಶಕ್ಕೆ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ ರವಾನಿಸಲಿದೆ.

2022ರ ವೇಳೆಗೆ ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇಸ್ರೋ ಬಾಹ್ಯಾಕಾಶಕ್ಕೆ ತನ್ನ ಮೊದಲ ಮಾನವ ಸಹಿತ ಯೋಜನೆ ಕಳುಹಿಸಲಿದೆ ಎಂದು ಕೇಂದ್ರ ಅಣು ಶಕ್ತಿ ಹಾಗೂ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಗುರುವಾರ ತಿಳಿಸಿದರು.

ಹೆಮ್ಮೆಯ ಚಂದ್ರಯಾನ 2: ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೋಹೆಮ್ಮೆಯ ಚಂದ್ರಯಾನ 2: ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೋ

ಪ್ರಥಮ ಮಾನವ ಸಹಿತ ಗಗನಯಾನಕ್ಕಾಗಿ ಗಗನಯಾನ ರಾಷ್ಟ್ರೀಯ ಸಲಹಾ ಸಮಿತಿ ಎಂಬ ಅದಕ್ಕೆಂದೇ ಮೀಸಲಾದ ವಿಶೇಷ ಘಟಕವೊಂದನ್ನು ರಚಿಸಲಾಗಿದೆ. ಇದು ಯೋಜನೆಯ ರೂಪುರೇಷೆ ಮತ್ತು ಸಿದ್ಧತೆಗಳ ಮೇಲೆ ನಿಗಾವಹಿಸಲಿದೆ ಎಂದು ಅವರು ಹೇಳಿದರು. ಈ ಯೋಜನೆಯು ಬೇಗನೆ ಸಿದ್ಧವಾದರೆ, ಮಾನವ ಸಹಿತ ಗಗನಯಾನ 2022ಕ್ಕೂ ಮುನ್ನವೇ ನಡೆಯಬಹುದು ಎಂದು ಹೇಳಿದರು.

10 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಗಗನಯಾನದಲ್ಲಿ 2-3 ಗಗನ ಯಾತ್ರಿಗಳು ಭಾಗವಹಿಸಲಿದ್ದಾರೆ. ಅವರಿಗೆ ಭಾರತದಲ್ಲಿಯೇ ತರಬೇತಿ ನೀಡಲಾಗುತ್ತದೆ.

ಬಾಹ್ಯಾಕಾಶದಲ್ಲಿ ಭಾರತದ ನಿಲ್ದಾಣ

ಬಾಹ್ಯಾಕಾಶದಲ್ಲಿ ಭಾರತದ ನಿಲ್ದಾಣ

ನಾಸಾದಂತೆಯೇ ಭಾರತ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಬಾಹ್ಯಾಕಾಶದಲ್ಲಿ ತನ್ನದೇ ಪ್ರತ್ಯೇಕವಾದ ನಿಲ್ದಾಣವನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ. ಶಿವನ್ ತಿಳಿಸಿದರು.

ಮಾನವ ಸಹಿತ ಬಾಹ್ಯಾಕಾಶ ಯೋಜನೆ ನಡೆಸಿದ ಬಳಿಕ ನಾವು ಗಗನಯಾನ ಯೋಜನೆಗಳಲ್ಲಿ ಸುಸ್ಥಿರತೆ ಕಂಡುಕೊಳ್ಳಬೇಕಿದೆ. ಈ ಕಾರಣಕ್ಕಾಗಿ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.

ಜುಲೈ 15ರಂದು ಚಂದ್ರಯಾನ-2

ಜುಲೈ 15ರಂದು ಚಂದ್ರಯಾನ-2

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2, 2019ರ ಜುಲೈ 15ರಂದು ಉಡಾವಣೆಯಾಗಲಿದೆ. ಅದು ಸೆಪ್ಟೆಂಬರ್ ವೇಳೆಗೆ ಚಂದ್ರನ ಅಂಗಳ ಮುಟ್ಟಲಿದೆ. ಇದು ಚಂದ್ರಯಾನ-1ರ ವಿಸ್ತೃತ ಯೋಜನೆಯಾಗಿದ್ದು, ತನ್ನೊಟ್ಟಿಗೆ ರೋವರ್ ಒಂದನ್ನು ಕರೆದೊಯ್ಯಲಿದೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.

ಚಂದ್ರಯಾನ-2ಕ್ಕೆ ಮುಹೂರ್ತ ನಿಗದಿಪಡಿಸಿದ ಇಸ್ರೋ ಚಂದ್ರಯಾನ-2ಕ್ಕೆ ಮುಹೂರ್ತ ನಿಗದಿಪಡಿಸಿದ ಇಸ್ರೋ

ಹತ್ತು ಮಂದಿಗೆ ಐಎಎಫ್ ತರಬೇತಿ

ಹತ್ತು ಮಂದಿಗೆ ಐಎಎಫ್ ತರಬೇತಿ

ಬಾಹ್ಯಾಕಾಶ ಯಾನದ ಯೋಜನೆಗೆ ಭಾರತೀಯ ವಾಯು ಪಡೆ (ಐಎಎಫ್) ಎರಡು ತಿಂಗಳಲ್ಲಿ ಹತ್ತು ಮಂದಿ ಸೂಕ್ತ ಸಿಬ್ಬಂದಿಯನ್ನು ಆಯ್ದು ಅವರನ್ನು ಪರೀಕ್ಷೆಗೆ ಒಳಪಡಿಸಲಿದೆ. ಬೆಂಗಳೂರಿನಲ್ಲಿರುವ ಇಸ್ರೋದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ ಸಿಬ್ಬಂದಿಯ ತರಬೇತಿಗಾಗಿ ಐಎಎಫ್‌ ಜತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಐಎಎಫ್ ಹತ್ತು ಸಿಬ್ಬಂದಿಯನ್ನು ಈ ಯೋಜನೆಗೆ ಸಿದ್ಧಪಡಿಸಿ ತೋರಿಸಲಿದೆ. ಇದು ಇನ್ನು ಒಂದೆರಡು ತಿಂಗಳಲ್ಲಿ ನಡೆಯಲಿದೆ. ಈ ಹತ್ತು ಮಂದಿಯಲ್ಲಿ ಇಸ್ರೋ ಮೂರು ಮಂದಿಯನ್ನು ಮಾನವ ಸಹಿತ ಗಗನಯಾನಕ್ಕೆ ಆಯ್ಕೆ ಮಾಡಲಿದೆ ಎಂದು ಶಿವನ್ ತಿಳಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಯೋಜನೆ

ಮೇಕ್ ಇನ್ ಇಂಡಿಯಾ ಯೋಜನೆ

ಚಂದ್ರಯಾನ 2 ಯೋಜನೆಯು ಸಂಪೂರ್ಣವಾಗಿ 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ನಡೆಯಲಿದೆ. ಮಾನವ ಸಹಿತ ಗಗನಯಾನವು 2022ರ ಆಗಸ್ಟ್ ವೇಳೆಗೆ ಉಡಾವಣೆಯಾಗುವ ನಿರೀಕ್ಷೆಯಿದ್ದರೂ ಅದಕ್ಕೂ ಮೊದಲೇ ನಡೆಯಬಹುದು. ನಾಸಾ 2024ರಲ್ಲಿ ಚಂದ್ರ ಉಪಗ್ರಹಕ್ಕೆ ಮೊದಲ ಬಾರಿಗೆ ಮಹಿಳೆ ಸೇರಿದಂತೆ ಮಾನವರನ್ನು ಕಳುಹಿಸುವ ಯೋಜನೆ ಹಾಕಿಕೊಂಡಿದೆ. ಇಸ್ರೋದ ಮಾನವ ಸಹಿತ ಗಗನಯಾನದಲ್ಲಿಯೂ ಮಹಿಳಾ ಗಗನಯಾತ್ರಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಇಸ್ರೋದಿಂದ ರಿಸ್ಯಾಟ್-2ಬಿ ರೆಡಾರ್ ಉಪಗ್ರಹ ಉಡಾವಣೆ ಯಶಸ್ವಿ ಇಸ್ರೋದಿಂದ ರಿಸ್ಯಾಟ್-2ಬಿ ರೆಡಾರ್ ಉಪಗ್ರಹ ಉಡಾವಣೆ ಯಶಸ್ವಿ

English summary
ISRO Chief K Sivan said that, India is planning to launch its own space station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X