ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ 'ಬದಲಿ' ಉಪಗ್ರಹ ಯಶಸ್ವಿ ಉಡಾವಣೆ

By Sachhidananda Acharya
|
Google Oneindia Kannada News

ಶ್ರೀಹರಿಕೋಟಾ (ಆಂಧ್ರ ಪ್ರದೇಶ), ಏಪ್ರಿಲ್ 12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಯಶಸ್ವಿಯಾಗಿ 'ಐಆರ್ ಎನ್ಎಸ್ಎಸ್-1ಐ' ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 'ಐಆರ್ ಎನ್ಎಸ್ಎಸ್-1ಐ' ಉಪಗ್ರಹವನ್ನು ಹೊತ್ತ ಉಡಾವಣಾ ವಾಹಕ ಪಿಎಸ್ಎಲ್ ವಿ-ಸಿ ಇಂದು ಮುಂಜಾನೆ 4.04 ಕ್ಕೆ ನಭಕ್ಕೆ ಚಿಮ್ಮಿತು.

ಇಸ್ರೋ ಸಂಪರ್ಕ ಕಳೆದುಕೊಂಡ ಜಿಎಸ್‌‌ಎಟಿ-6ಎ ಉಪಗ್ರಹಇಸ್ರೋ ಸಂಪರ್ಕ ಕಳೆದುಕೊಂಡ ಜಿಎಸ್‌‌ಎಟಿ-6ಎ ಉಪಗ್ರಹ

ಉಡಾವಣೆಯಾದ ಕೆಲವೇ ಹೊತ್ತಲ್ಲಿ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಘೋಷಿಸಿದೆ.

ISRO successfully launches replacement navigation satellite

ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್ ಎನ್ಎಸ್ಎಸ್)ನ 'ಐಆರ್ ಎನ್ಎಸ್ಎಸ್ - 1ಎ' ಉಪಗ್ರಹಕ್ಕೆ ಬದಲಿ ಉಪಗ್ರಹವಾಗಿ ಇಂದಿನ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

'ಐಆರ್ ಎನ್ಎಸ್ಎಸ್ - 1ಎ'ನ ಅಟೋಮಿಕ್ ಕ್ಲಾಕ್ ಕೈಕೊಟ್ಟಿತ್ತು. ಹೀಗಾಗಿ ಉಪಗ್ರಹ ವ್ಯರ್ಥವಾಗಿತ್ತು. ಆದರೆ ಇದಕ್ಕೆ ಬದಲಿಯಾಗಿ 'ಐಆರ್ ಎನ್ಎಸ್ಎಸ್ - 1ಎಚ್' ಉಪಗ್ರಹವನ್ನು 2017ರ ಆಗಸ್ಟ್ ನಲ್ಲಿ ಉಡಾವಣೆ ಮಾಡಲಾಗಿತ್ತು. ಆದರೆ ಇದು ಉಡಾವಣೆ ವಿಫಲವಾದ ಹಿನ್ನಲೆಯಲ್ಲಿ ಉಪಗ್ರಹ ಸಮುದ್ರದಲ್ಲಿ ಬಿದ್ದಿತ್ತು. ಹೀಗಾಗಿ ಮತ್ತೊಂದು ಬದಲಿ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

ಭಾರತದ ಸ್ವತಂತ್ರ ನ್ಯಾವಿಗೇಷನ್ (ಪಥದರ್ಶಕ) ವ್ಯವಸ್ಥೆಯನ್ನು ಹೊಂದಲು 7 ಉಪಗ್ರಹಗಳು ಅಗತ್ಯವಾಗಿವೆ. ಈ ಯೋಜನೆಯ ಭಾಗವಾಗಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

English summary
Indian Space Research Organisation (ISRO) on Thursday successfully launched the Indian Regional Navigation Satellite System-1I or IRNSS-1I from Satish Dhawan Space Centre on Sriharikota Island.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X