ISRO Mission: ಇಸ್ರೋಗೆ ಮೊದಲ ಯಶಸ್ಸು, ಯಶಸ್ವಿಯಾಗಿ ರಾಕೆಟ್ ಉಡಾವಣೆ!

ಇಸ್ರೋ ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಸಾಧನೆ ಮಾಡಿದೆ, ಅಂತರಿಕ್ಷದಲ್ಲಿ ತಾನು ಮತ್ತೊಮ್ಮೆ ಅದೆಷ್ಟು ಶಕ್ತಿಶಾಲಿ ಅನ್ನೋದನ್ನು ಕೂಡ ' ಇಸ್ರೋ' ಇದೀಗ ಪ್ರಪಂಚದ ಪ್ರತಿಯೊಂದು ದೇಶಕ್ಕೂ ಮನವರಿಕೆ ಮಾಡಿಕೊಟ್ಟಿದೆ. ಡಾಕಿಂಗ್ & ಅನ್‌ಡಾಕಿಂಗ್‌ ಕಾರ್ಯದ ಮೊದಲ ಭಾಗವಾಗಿ, ರಾಕೆಟ್ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದೆ ನಮ್ಮ ಇಸ್ರೋ ಸಂಸ್ಥೆ. ಈ ಮೂಲಕ ಹೊಸ ಇತಿಹಾಸ ಬರೆಯಲು ಮೊದಲ ಹೆಜ್ಜೆ ಇಟ್ಟಿದೆ ಇಸ್ರೋ!

ಹೌದು ಅಂತರಿಕ್ಷದಲ್ಲಿ 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್, ಅನ್‌ಡಾಕಿಂಗ್‌ ನಡೆಸಲು 'ಇಸ್ರೋ' ವಿಜ್ಞಾನಿಗಳು ಉಪಗ್ರಹ ಉಡಾವಣೆ ಮಾಡಿದ್ದಾರೆ. ಬಾಹ್ಯಾಕಾಶದಲ್ಲಿ ಮಾನವರ ಸಹಾಯವೇ ಇಲ್ಲದೆ 2 ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಕೂಡಿಸುವುದು ಹಾಗೂ ಬೇರೆ ಮಾಡುವ ಕೆಲಸವನ್ನ ಇಸ್ರೋ ಭೂಮಿ ಮೇಲಿಂದಲೇ ನಡೆಸಲಿದೆ. ರಾತ್ರಿ 10 ಗಂಟೆಗೆ ಸರಿಯಾಗಿ 'ಇಸ್ರೋ' ವಿಜ್ಞಾನಿಗಳ ತಂಡವು, 2 ಉಪಗ್ರಹ ಉಡಾವಣೆ ಮಾಡಿದೆ. ಈ ಮೂಲಕ ಇಸ್ರೋ ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪುವ ನಿರೀಕ್ಷೆಯಲ್ಲಿದ್ದು, ಮೊದಲ ಹೆಜ್ಜೆಯಲ್ಲಿ ಭರ್ಜರಿ ಯಶಸ್ಸು ಪಡೆದಿದೆ.

ISRO Spadex Mission Successfully Launched From Sriharikota

ಭಾರತದ ಮೊದಲ ಹೆಜ್ಜೆ ಸಕ್ಸಸ್!

ಬಾಹ್ಯಾಕಾಶ ಅಧ್ಯಯನ ನಡೆಸುವುದು ಒಂದು ದೊಡ್ಡ ಸಾಧನೆ, ಯಾಕಂದ್ರೆ ಬಾಹ್ಯಾಕಾಶ ಕ್ಷೇತ್ರ ಇಡೀ ಜಗತ್ತಿನಲ್ಲೇ ಅತಿದೊಡ್ಡ ಕ್ಷೇತ್ರವಾಗಿದೆ. ಹೀಗೆ ಬಾಹ್ಯಾಕಾಶ ಎಂಬ ಅಂತ್ಯ ಇಲ್ಲದ ಜಾಗದಲ್ಲಿ ಭಾರತದ ಹೆಮ್ಮೆ 'ಇಸ್ರೋ' ಸಂಸ್ಥೆ ಬಹುದೊಡ್ಡ ಸಾಧನೆ ಮಾಡಿದೆ. ಹೀಗಿದ್ದಾಗ 'ಇಸ್ರೋ' ಇಂದು ಬಾಹ್ಯಾಕಾಶದಲ್ಲಿ 'ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್' ನೆಡಸಲು ಸಜ್ಜಾಗಿದೆ, ಇದಕ್ಕಾಗಿ 2 ಉಪಗ್ರಹ ಉಡಾವಣೆ ಮಾಡಿದೆ ಇಸ್ರೋ. ಶ್ರೀಹರಿಕೋಟ ಉಡಾವಣಾ ಕೇಂದ್ರವೇ ಈ ಪ್ರಮುಖ ಕ್ಷಣಕ್ಕೆ ಸಾಕ್ಷಿಯಾಗಿತ್ತು.

ಭಾರತ ನೆಲದಲ್ಲಿ ಕಟ್ಟಿ ಬೆಳೆಸಿ, ಇಂದು ಜಾಗತಿಕವಾಗಿ ಕೂಡ ದೊಡ್ಡ ಹೆಸರು ಮಾಡಿರುವ ನಮ್ಮ 'ಇಸ್ರೋ' ಸಂಸ್ಥೆ ಕಂಡರೆ 'ನಾಸಾ' ವಿಜ್ಞಾನಿಗಳು ಕೂಡ ಎದ್ದು ನಿಂತು ಸಲ್ಯೂಟ್ ಹೊಡೆಯುತ್ತಾರೆ. ಯಾಕಂದ್ರೆ ಇಸ್ರೋ ಸಾಧನೆಗೆ ಖುದ್ದು ನಾಸಾ ವಿಜ್ಞಾನಿಗಳು ಕೂಡ ತಲೆ ಬಾಗಿದ್ದು, ಭಾರತದ ಕಾರ್ಯಕ್ಕೆ ಗ್ರೇಟ್ ಅಂತಾ ಹೇಳುತ್ತಿದ್ದಾರೆ. ಈಗಾಗಲೇ 2024 ರಲ್ಲಿ ಹಲವು ಸಾಧನೆ ಮಾಡಿರುವ 'ಇಸ್ರೋ' ಸಂಸ್ಥೆ ಇದೀಗ 2024ರ ಕೊನೆಯಲ್ಲಿ ಕೂಡ ಭಾರಿ ದೊಡ್ಡ ಸಾಧನೆಗೆ ಸಜ್ಜಾಗಿದೆ.

ಹಲವು ವರ್ಷಗಳ ಶ್ರಮಕ್ಕೆ ಫಲ!

ಈ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳು ಹತ್ತಾರು ವರ್ಷಗಳಿಂದ ಬೆವರು ಹರಿಸಿ ದುಡಿದಿದ್ದರು, ಅಲ್ಲದೆ ಹಲವು ಪ್ರಯೋಗ ಕೂಡ ನಡೆಸಲಾಗಿತ್ತು. ಕೋಟಿ ಕೋಟಿ ರೂಪಾಯಿ ಖರ್ಚು ಕೂಡ ಮಾಡಲಾಗಿತ್ತು. ಈ ಪ್ರಯೋಗದ ಪರಿಣಾಮ ಮುಂದೆ ಭಾರತಕ್ಕೆ ಅಂತರಿಕ್ಷಕ್ಕೆ ಮನುಷ್ಯರನ್ನು ಕೊಂಡೊಯ್ಯಲು ಸಹಾಯ ಆಗಲಿದ್ದು, ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೂ ಭಾರತಕ್ಕೆ ಸಹಾಯ ಆಗಲಿದೆ. ಜನವರಿ 7 ರಂದು ಅಂತಿಮ ಹಂತದ ಪ್ರಯೋಗ ನಡೆಯಲಿದೆ. ಅಂದೇ ಬಾಹ್ಯಕಾಶ ನೌಕೆಗಳನ್ನು ಜೋಡಿಸುವ & ಬೇರೆ ಮಾಡುವ ಪ್ರಯೋಗ ನಡೆಯಲಿದೆ. ಇದೀಗ ಇಸ್ರೋ ವಿಜ್ಞಾನಿಗಳು ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಕೂರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+