10 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 48 ಉಡಾವಣೆ ಯಶಸ್ವಿ

ಶ್ರೀಹರಿಕೋಟಾ, ಡಿಸೆಂಬರ್ 11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 50ನೇ ಪಿಎಸ್‌ಎಲ್‌ವಿ ರಾಕೆಟ್‌ಅನ್ನು ಬುಧವಾರ ಮಧ್ಯಾಹ್ನ 3.25ರ ವೇಳೆಯೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಅತ್ಯಾಧುನಿಕ ಗೂಢಚರ ಉಪಗ್ರಹ ರಿಸ್ಯಾಟ್-2ಬಿಆರ್1 ಸೇರಿದಂತೆ ಒಟ್ಟು ಹತ್ತು ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮೂಲಕ ಭೂ ಸರ್ವೇಕ್ಷಣೆಯ ರೇಡಾರ್ ಇಮೇಜಿಂಗ್ ಉಪಗ್ರಹ ರಿಸ್ಯಾಟ್-2ಬಿಆರ್1, 628 ಕೆ.ಜಿ. ತೂಕ ಹೊಂದಿದ್ದು, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣಾ ಕಾರ್ಯಗಳಂತಹ ವಿವಿಧ ಯೋಜನೆಗಳಿಗೆ ನೆರವಾಗಲಿದೆ.

ಈ ಉಪಗ್ರಹದೊಂದಿಗೆ ಒಂಬತ್ತು ವಿದೇಶಿ ಉಪಗ್ರಹಗಳು ಕೂಡ ಬಾಹ್ಯಾಕಾಶಕ್ಕೆ ಹಾರಿದವು. ಒಂಬತ್ತು ಉಪಗ್ರಹಗಳಲ್ಲಿ ಒಂದು ಇಸ್ರೇಲ್, ಒಂದು ಇಟಲಿ, ಒಂದು ಜಪಾನ್ ಮತ್ತು ಆರು ಅಮೆರಿಕದ ಉಪಗ್ರಹಗಳಿವೆ. ಈ ವಿದೇಶಿ ಉಪಗ್ರಹಗಳ ಉಡಾವಣೆಯು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್ಐಎಲ್) ವಾಣಿಜ್ಯ ಒಪ್ಪಂದಗಳ ಅಡಿಯಲ್ಲಿ ನಡೆದಿದೆ ಎಂದು ಇಸ್ರೋ ತಿಳಿಸಿದೆ.

ISRO Launched PSLV-C48 RISAT-2BR1 And 9 Foreign Satellites

ಭೂಸರ್ವೇಕ್ಷಣೆಯಲ್ಲಿ ಮಹತ್ವದ ಕಾರ್ಯನಿರ್ವಹಿಸುವ ಕಾರ್ಟೋಸ್ಯಾಟ್-3 ಉಪಗ್ರಹವನ್ನು ನವೆಂಬರ್ 27ರಂದು ಇಸ್ರೋ ಉಡಾವಣೆ ಮಾಡಿತ್ತು. ಇದರ ಜತೆಗೆ ಅಮೆರಿಕದ 13 ನ್ಯಾನೋ ಉಪಗ್ರಹಗಳನ್ನು ಕೂಡ ಉಡಾವಣೆ ಮಾಡಿತ್ತು. ನಂತರದ 14 ದಿನಗಳಲ್ಲಿಯೇ ಮತ್ತೊಂದು ಉಪಗ್ರಹ ಉಡಾವಣೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+