ಮೋದಿಗೆ ಗಿಫ್ಟ್ ನೀಡಲು ಬಂದ ಇಸ್ರೇಲ್ ಪ್ರಧಾನಿ

Posted By:
Subscribe to Oneindia Kannada

ನವದೆಹಲಿ, ಜನವರಿ 14:ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಾಗೂ ಅವರ ಪತ್ನಿ ನಾಲ್ಕು ದಿನಗಳ ಪ್ರವಾಸಕ್ಕಾಗಿ ಭಾನುವಾರದಂದು ಭಾರತಕ್ಕೆ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ, ಇಸ್ರೇಲ್ ಪ್ರಧಾನಿ ಅವರನ್ನು ಬರ ಮಾಡಿಕೊಂಡಿದ್ದಾರೆ.

ಪ್ರವಾಸದ ವೇಳೆ ಬೆಂಜಮಿನ್ ನೇತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಲಿದ್ದಾರೆಪ್ರಧಾನಿ ಮೋದಿ ಹಾಗೂ ನೇತನ್ಯಾಹು ಅವರು ತೀನ್ ಮೂರ್ತಿ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಲಿದ್ದಾರೆ. ನೂರು ವರ್ಷಗಳ ಕೆಳಗೆ ಹೈಫಾ ಯುದ್ಧದಲ್ಲಿ ಸೆಣಸಿ ಪ್ರಾಣತೆತ್ತ ಭಾರತದ ಸೇನಾ ತುಕಡಿಯ ಯೋಧರರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ.

ಭಾನುವಾರ ರಾತ್ರಿಯಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ದಂಪತಿಗಳಿಗೆ ಮೋದಿ ಅವರು ವಿಶೇಷ ಔತಣ ಕೂಟ ಏರ್ಪಡಿಸಿದ್ದಾರೆ. ನಂತರ ಉಭಯ ನಾಯಕರು ವ್ಯಾಪಾರ, ಕೃಷಿ ತಂತ್ರಜ್ಞಾನ, ರಕ್ಷಣಾ ಇಲಾಖೆ ಸೇರಿದಂತೆ ಅನೇಕ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Israeli PM Benjamin Netanyahu arrives in India

ಜುಲೈನಲ್ಲಿ ಇಸ್ರೇಲಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿ ಈ ಜೀಪ್ ವೀಕ್ಷಿಸಿದ್ದರು. ಜತೆಗೆ ಈ ಜೀಪ್ ನಲ್ಲಿ ಡ್ರೈವ್ ಹೋಗಿ ಮೆಚ್ಚಿಕೊಂಡಿದ್ದರು.

"ಗಾಲ್ ಮೊಬೈಲ್ ವಾಟರ್ ಡಿಸಾಲಿನೇಷನ್ ಮತ್ತು ಪ್ಯೂರಿಫಿಕೇಶನ್ ಜೀಪ್'ನ್ನು ಅವರು ಮೋದಿಗೆ ಉಡುಗೊರೆಯಾಗಿ ನೀಡಲಿದ್ದಾರೆ.

1,11,000 ಅಮೆರಿಕನ್ ಡಾಲರ್ ಬೆಲೆಬಾಳುವ ಜೀಪ್ ಇದಾಗಿದೆ. ಈ ಜೀಪ್ ಸಮುದ್ರದ ನೀರನ್ನು ಶುದ್ದೀಕರಿಸುವುದಲ್ಲದೆ, ಇತರ ಕೊಳಚೆ ನೀರನ್ನು ಶುದ್ದೀಕರಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ದಿನಕ್ಕೆ 20,000 ಲೀಟರ್ ಸಮುದ್ರದ ನೀರು ಹಾಗೂ 80,000 ಲೀಟರ್ ಕೊಳಚೆ ನೀರನನ್ನು ಶುದ್ಧೀಕರಿಸುವ ಸಾಮರ್ಥ್ಯ ಈ ಜೀಪಿಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Israeli Prime Minister Benjamin Netanyahu arrived in India on Sunday on a six-day visit during which both the strategic partners will aim to further expand ties on a range of key areas including defence and trade, as per reports.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ