ಗುಜರಾತಿನಲ್ಲಿ ಆರಂಭವಾಗಲಿದೆ ಇಸ್ಲಾಮಿಕ್ ಬ್ಯಾಂಕ್

Subscribe to Oneindia Kannada

ಅಹಮದಾಬಾದ್, ಫೆಬ್ರವರಿ 3: ಸದ್ಯದಲ್ಲೇ ಸೌದಿ ಅರೇಬಿಯಾ ಮೂಲದ ಇಸ್ಲಾಮಿಕ್ ಡೆವಲಪ್ಮೆಂಟ್ ಬ್ಯಾಂಕ್ ಭಾರತದಲ್ಲೂ ಕಾರ್ಯಾಚರಣೆ ಆರಂಭಿಸಲಿದೆ. ಗುಜರಾತಿನಲ್ಲಿ ತನ್ನ ಮೊದಲ ಶಾಖೆಯನ್ನು ಬ್ಯಾಂಕ್ ತೆರೆಯಲಿದೆ.

ಕಳೆದ ವರ್ಷ ಏಪ್ರಿಲ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುಎಇಗೆ ಪ್ರವಾಸ ತೆರಳಿದ ಸಂದರ್ಭ ಭಾರತದ ಎಕ್ಸಿಮ್ ಬ್ಯಾಂಕ್ ಮತ್ತು ಇಸ್ಲಾಮಿಕ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದ್ದವು. ಅದರಂತೆ ಇದೀಗ ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಲ್ ಆರಂಭವಾಗಲಿದೆ.[ಇಸ್ಲಾಂ ವಿರುದ್ಧದ ಹೇಳಿಕೆಗೆ ಅನಂತ್ ವಿರುದ್ಧ ಮುಸ್ಲಿಮರು ಕೆಂಡ]

Islamic banking will start in Gujarat: What is this concept about

ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ಈಗಿರುವ ಬ್ಯಾಂಕುಗಳಲ್ಲೇ ಇಸ್ಲಾಮಿಕ್ ವಿಂಡೋ ಅಥವಾ ಶರಿಯಾ ಬ್ಯಾಂಕಿಂಗ್ (ಮುಸ್ಲಿಮರಿಗಾಗಿಯೇ ಪ್ರತ್ಯೇಕ ಬ್ಯಾಂಕಿಂಗ್ ಸೇವೆ) ಸೇವೆ ನೀಡುವ ಬಗ್ಗೆ ಯೋಚನೆ ನಡೆಸಿತ್ತು. ಮುಸ್ಲಿಮ್ ಧರ್ಮೀಯರಿಗೆ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿತ್ತು. ಈ ಮೂಲಕ ಧಾರ್ಮಿಕ ಕಾರಣಗಳಿಗೆ ಬ್ಯಾಂಕಿಂಗ್ ಕ್ಷೇತ್ರದಿಂದ ದೂರವೇ ಉಳಿದ ಜನರನ್ನು ಬ್ಯಾಂಕಿಂಗ್ ಕ್ಷೇತ್ರದತ್ತ ಆಕರ್ಷಿಸುವುದು ರಿಸರ್ವ್ ಬ್ಯಾಂಕಿನ ಯೋಜನೆಯಾಗಿತ್ತು.[ಮತ್ತೆ ಪತ್ನಿಯೊಂದಿಗಿನ ಚಿತ್ರ ಹಾಕಿ ವಿರೋಧಿಗಳಿಗೆ ಶಮಿ ತಿರುಗೇಟು]

ಸದ್ಯ ರಿಸರ್ವ್ ಬ್ಯಾಂಕ್ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಸದ್ಯದಲ್ಲೇ ಇಸ್ಲಾಮಿಕ್ ಡೆವಲಪ್ಮೆಂಟ್ ಬ್ಯಾಂಕ್ ಮಾತ್ರ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Saudi Arabia based Islamic Development Bank will start its operations from Gujarat soon.
Please Wait while comments are loading...