ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್ ಐಎಸ್ ನಂಟು, ಬೆಂಗಳೂರು ಮೂಲದ ವ್ಯಕ್ತಿ ತಪ್ಪಿತಸ್ಥ ಎಂದು ಘೋಷಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 19 : ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪ ಇದ್ದ ಅಬಿದ್ ಖಾನ್ ನನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ಕೋರ್ಟ್ ತಪ್ಪಿತಸ್ಥ ಎಂದು ಘೋಷಣೆ ಮಾಡಿದೆ.

ಚೆನ್ನೈನಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನಚೆನ್ನೈನಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ

ಶಿಕ್ಷೆ ಪ್ರಮಾಣವನ್ನು ಜುಲೈ ಇಪ್ಪತ್ತೊಂದನೇ ತಾರೀಕು ಪ್ರಕಟಿಸಲಾಗುವುದು. ಬೆಂಗಳೂರಿನಲ್ಲಿ ವಾಸವಿದ್ದ ಇಪ್ಪತ್ಮೂರು ವರ್ಷದ ಅಬಿದ್ ಖಾನ್ ಗೆ ಐಎಸ್ ಐಎಸ್ ಗೆ ಸೇರಿದ ನಾಲ್ಕು ಮಂದಿ ಜತೆಗೆ ನಂಟಿತ್ತು ಎಂಬ ಆರೋಪವಿತ್ತು. ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ.

ISIS operative from Bengaluru convicted by NIA court

ಕಳೆದ ವರ್ಷ ಮಾರ್ಚ್ ನಲ್ಲಿ ಆತ ಶ್ರೀಲಂಕಾಗೆ ತೆರಳಿದ್ದ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. ಆತ ಅಲ್ಲಿಂದ ಹಿಂತಿರುಗಿದ ಮೇಲೆ ಹಿಮಾಚಲಪ್ರದೇಶದ ಕುಲ್ಲುವಿನ ಚರ್ಚ್ ವೊಂದರಲ್ಲಿ ಅಡಗಿಕೊಂಡಿದ್ದ. ಈ ಸಂದರ್ಭದಲ್ಲಿ ನಾನಾ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ವ್ಯಕ್ತಿಗಳ ಜತೆ ಸಂಪರ್ಕದಲ್ಲಿದ್ದ.

ಉಗ್ರರಿಂದ ಮುಕ್ತಗೊಂಡ ಮೊಸುಲ್, 39 ಭಾರತೀಯರು ಎಲ್ಲಿ?ಉಗ್ರರಿಂದ ಮುಕ್ತಗೊಂಡ ಮೊಸುಲ್, 39 ಭಾರತೀಯರು ಎಲ್ಲಿ?

ಐಎಸ್ ಐಎಸ್ ಸಿದ್ಧಾಂತಗಳ ಪ್ರಚಾರಕ್ಕಾಗಿ ಕೆಲಸ ಮಾಡಲು ಹೊಸದಾಗಿ ಆರಂಭವಾಗಿರುವ ಜುನೂದ್-ಉಲ್-ಖಲೀಪಾ-ಫಿಲ್-ಹಿಂದ್ ಸಂಘಟನೆಯ ಸದಸ್ಯನಾಗಿ ಅಬಿದ್ ಖಾನ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

English summary
The NIA's special court held one Abid Khan guilty in a case relating to the Islamic State. The quantum of the sentence will be pronounced on July 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X