ಬಿಹಾರ ರೈಲು ದುರಂತಕ್ಕೆ ಪಾಕಿಸ್ತಾನದ ಐಎಸ್ಐ ಕೈವಾಡ

By: ಮೈತ್ರೇಯಿ ಬೊರುಹಾ
Subscribe to Oneindia Kannada

ಬಿಹಾರ, ಜನವರಿ 19: ರಾ (ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್) ಮತ್ತು ಎನ್ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಬಿಹಾರ ರೈಲು ದುರಂತದಲ್ಲಿ ಪಾಕಿಸ್ತಾನ ಐಎಸ್ಐ ಕೈವಾಡವನ್ನು ಪತ್ತೆ ಹಚ್ಚಿದ್ದಾರೆ. ಶಂಕಿತ ಮೂವರು ಐಎಸ್ಐ ಏಜೆಂಟರನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ರೈಲು ದುರಂತಕ್ಕೂ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಏಜೆಂಟರಿಗೂ ಸಂಪರ್ಕ ಇರುವ ಸುಳಿವುಗಳು ಸಿಕ್ಕಿವೆ ಎನ್ನಲಾಗಿದೆ.

2016ರ ನವೆಂಬರ್ 20ರಂದು ಬಿಹಾರ-ಪಟ್ನಾ ಎಕ್ಸ್ ಪ್ರೆಸ್ ರೈಲು ದುರಂತಕ್ಕೀಡಾಗಿತ್ತು. ಈ ದುರಂತದ ತನಿಖೆ ಕೈಗೊಂಡಿದ್ದ ಬಿಹಾರ ಪೊಲೀಸರು ಘಟನೆಯಲ್ಲಿ ಐಎಸ್ಐ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.[ಪಾಟ್ನಾ- ಇಂದೋರ್ ರೈಲು ದುರಂತ: ಪಾಕ್ ಕೈವಾಡ]

ISI's train terror: Probe leads are positive say R&AW, NIA

ಇದೀಗ ಎನ್ಐಎ ಮತ್ತು ರಾ ಆಧಿಕಾರಿಗಳು ಮೋತಿ ಪಾಸ್ವಾನ್, ಉಮಾ ಶಂಕರ್ ಪಟೇಲ್ ಮತ್ತು ಮುಖೇಶ್ ಯಾದವ್ರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇವರೆಲ್ಲಾ ನೇಪಾಳದಲ್ಲಿರುವ ಐಎಸ್ಐ ನಾಯಕ ಬ್ರಜೇಶ್ ಗಿರಿಯ ನಿರ್ದೇಶನದ ಮೇರೆಗೆ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ಒನ್ ಇಂಡಿಯಾ ಜತೆ ಮಾತನಾಡಿರುವ ಎನ್ಐಎ ಅಧಿಕಾರಿಯೊಬ್ಬರು, ವಿಚಾರಣೆ ವೇಳೆ ಪ್ರಮುಖ ಸುಳಿವುಗಳು ಸಿಕ್ಕಿರುವುದಾಗಿ ಹೇಳಿದ್ದಾರೆ. ಬೇರೆ ರೈಲು ದುರಂತಗಳಿಗೂ ಈ ವ್ಯಕ್ತಿಗಳಿಗೂ ಸಂಬಂಧ ಇದೆಯಾ ಎಂಬುದನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.[ದೀಪಾವಳಿ : ನೈಋತ್ಯ ರೈಲ್ವೆಯಿಂದ ಪಾಂಡಿಚೇರಿಗೆ ವಿಶೇಷ ರೈಲು]

ವಿಚಾರಣೆ ವೇಳೆ ಶಂಕಿತರು ಇನ್ನಿಬ್ಬರ ಹೆಸರನ್ನು ಬಾಯ್ಬಿಟ್ಟಿದ್ದು, ಗಜೇಂದ್ರ ಶರ್ಮ ಮತ್ತು ರಾಕೇಶ್ ಯಾದವ್ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗಿದೆ. ತನಿಖಾ ದಳ ಐಎಸ್ಐ ಜಾಲ ಭೇದಿಸಲು ಬ್ರಿಜೇಶ್ ಗಿರಿಯನ್ನು ಬಂಧಿಸಬೇಕಾಗಿದೆ. ಆದರೆ ಗಿರಿ ನೇಪಾಳದಲ್ಲಿ ಅಡಗಿಕುಳಿತಿದ್ದಾನೆ. ಹೀಗಾಗಿ ಈತನನ್ನು ಹಿಡಿಯಲು ಭಾರತೀಯ ಅಧಿಕಾರಿಗಳು ನೇಪಾಳದ ಅಧಿಕಾರಿಗಳನ್ನು ಈಗಾಗಲೇ ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ.[ಚಿಂತೆ ಬಿಡಿ, ಇನ್ಮುಂದೆ ರೈಲ್ವೆಗಳಲ್ಲಿ ಕ್ಯಾಪ್ಟನ್ ಇರುತ್ತಾರೆ..!]

ಐಎಸ್ಐ ಇದೇ ರೀತಿ ದೇಶದಾದ್ಯಂತ ರೈಲು ಅವಘಡಗಳನ್ನು ನಡೆಸಲು ಯೋಜನೆ ರೂಪಿಸಿತ್ತು ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A team of the Research and Analysis Wing which along with the National Investigation Agency questioned three suspected ISI agents in connection with a Bihar train mishap case have got some positive leads.
Please Wait while comments are loading...