ಜಮ್ಮು ಕಾಶ್ಮೀರದಲ್ಲಿನ ಕಲ್ಲೆಸೆತಕ್ಕೆ ಕಾರಣ ಇದು ಇರಬಹುದೆ?
ಜಮ್ಮು ಕಾಶ್ಮೀರ, ಜನವರಿ 22: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮೇಲೆ ನಡೆಯುವ ಕಲ್ಲು ತೂರಾಟಕ್ಕೂ ಅಲ್ಲಿನ ನಿರುದ್ಯೋಗಕ್ಕೂ ಬಹಳ ಹತ್ತಿರದ ಸಂಬಂಧ ಎಂಬುದು ಸಾಮಾಜಿಕ ಚಿಂತಕರ ವಾದ. ಈಗ ಹೊರ ಬಿದ್ದಿರುವ ಅಂಕಿ ಅಂಶಗಳ ಪ್ರಕಾರ ಆ ವಾದ ಸತ್ಯವೂ ಇದ್ದಂತಿದೆ.
ಜಮ್ಮು ಕಾಶ್ಮೀರದಲ್ಲಿ ಸರ್ಕಾರಿ ವೆಬ್‌ಸೈಟ್‌ಗೆ ಒಟ್ಟು 87650 ಜನ ವಿದ್ಯಾವಂತ ನಿರುದ್ಯೋಗಿಗಳ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ, ಜ.ಕಾಶ್ಮೀರದ ಕಾರ್ಮಿಕ ಸಚಿವರೇ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇಷ್ಟು ಜನ ನಿರೋದ್ಯೋಗಿಗಳು ಸ್ವಯಂಪ್ರೇರಿತವಾಗಿ ನೊಂದಾವಣಿ ಮಾಡಿಕೊಂಡಿದ್ದು, ನೊಂದಾವಣಿ ಮಾಡಿಕೊಳ್ಳದವರ ಸಂಖ್ಯೆ ಇನ್ನೂ ಸಾಕಷ್ಟಿದೆ, ರಾಜ್ಯದ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಲಕ್ಷಕ್ಕಿಂತಲೂ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಯುವಕರು ಕಲ್ಲು ತೂರಾಟ, ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕೆ ಅಲ್ಲಿನ ನಿರುದ್ಯೋಗವೇ ಪ್ರಮುಖ ಕಾರಣ ಎಂದು ಹಿಂದಿನಿಂದಲೂ ಚರ್ಚೆ ನಡೆಯುತ್ತಿದ್ದು, ಇದೀಗ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯೇ ಲಕ್ಷಕ್ಕೂ ಹೆಚ್ಚಿರುವುದು ಆತಂಕಕ್ಕೆ ಈಡು ಮಾಡಿದೆ.
ಈ ಹಿಂದೆ ಖಾಸಗಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಕಲ್ಲು ತೂರಾಟ ನಡೆಸಲು ಹಣ ಪಡೆಯುತ್ತಿರುವುದಾಗಿ, ಕಲ್ಲು ತೂರದಿದ್ದರೆ ಸಂಸಾರ ನಡೆಸುವುದು ಕಷ್ಟ ಎಂಬುದಾಗಿ ಹಲವು ಯುವಕರು ಹೇಳಿದ್ದು ಬಹಿರಂಗವಾಗಿತ್ತು.












Click it and Unblock the Notifications