ತತ್ಕಾಲ್ ಟಿಕೆಟ್ ಬುಕ್ಕಿಂಗ್ ಇನ್ನು ಸುಲಭ! IRCTC ಹೊಸ ವ್ಯವಸ್ಥೆಯಿಂದ ನಿಮಿಷಕ್ಕೆ 1.25 ಲಕ್ಷ ಟಿಕೆಟ್ ಬುಕ್

ತತ್ಕಾಲ್ ಟಿಕೆಟ್ ಬುಕ್ ಸಮಯದಲ್ಲಿ ಐಆರ್‌ಸಿಟಿಸಿ (IRCTC) ಆ್ಯಪ್ ನಿಧಾನವಾಗುವುದು, ಹ್ಯಾಂಗ್ ಆಗುವುದು ಅಥವಾ ಲಾಗ್‌ಔಟ್ ಆಗುವ ಸಮಸ್ಯೆಯಿಂದ ಬೇಸತ್ತಿದ್ದ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ರೈಲ್ವೆ ತನ್ನ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಅನ್ನು ಸಂಪೂರ್ಣವಾಗಿ ನವೀಕರಿಸುತ್ತಿದ್ದು, ಇದರ ಮೂಲಕ ಟಿಕೆಟ್ ಬುಕ್ಕಿಂಗ್ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಿಸಲಾಗುತ್ತಿದೆ.

ಹೊಸ ತಾಂತ್ರಿಕ ವ್ಯವಸ್ಥೆ ಜಾರಿಯಾದ ಬಳಿಕ ನಂತರ, ಪ್ರತಿ ನಿಮಿಷಕ್ಕೆ ಬುಕ್ ಮಾಡಬಹುದಾದ ಟಿಕೆಟ್‌ಗಳ ಸಾಮರ್ಥ್ಯವು ಬರೋಬ್ಬರಿ 1.25 ಲಕ್ಷಕ್ಕೆ ಹೊಂದಿರಲಿದೆ. ಪ್ರಸ್ತುತ ಈ ಸಾಮರ್ಥ್ಯ ಪ್ರತಿ ನಿಮಿಷಕ್ಕೆ ಕೇವಲ 25 ಸಾವಿರ ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಲು ಸಾಧ್ಯವಿದ್ದು, ಹೊಸ ವ್ಯವಸ್ಥೆಯು ಈ ವೇಗವನ್ನು ಐದು ಪಟ್ಟು ಹೆಚ್ಚಿಸಲಿದೆ. ಇದರಿಂದಾಗಿ ಗ್ರಾಹಕರಿಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯು ಇನ್ನಷ್ಟು ವೇಗವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಸಿಗಲಿದೆ.

IRCTC Tatkal Ticket Booking

ತತ್ಕಾಲ್ ಬುಕ್ಕಿಂಗ್ ವೇಳೆ ಸಮಸ್ಯೆಗೆ ಪರಿಹಾರ

ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಕೊನೆ ಕ್ಷಣದಲ್ಲಿ ಆ್ಯಪ್ ಸ್ಲೋ ಆಗಿ ಟಿಕೆಟ್ ಕೈತಪ್ಪಿ ಹೋಗುವ ಬೇಸರ ನಿಮಗೂ ಆಗಿದೆಯೇ? ಇನ್ಮುಂದೆ ಆ ಚಿಂತೆ ಬೇಡ. ಬೆಳಗ್ಗೆ 10 ಮತ್ತು 11 ಗಂಟೆಯ ಪೀಕ್ ಅವರ್‌ನಲ್ಲಿ ಸರ್ವರ್ ಮೇಲಾಗುತ್ತಿದ್ದ ಓವರ್ ಲೋಡ್ ಅನ್ನು ತಡೆಯಲು ರೈಲ್ವೆ ಇಲಾಖೆ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಿದೆ. ಈ ಹೊಸ ತಂತ್ರಜ್ಞಾನದಿಂದಾಗಿ ಸರ್ವರ್ ಹ್ಯಾಂಗ್ ಆಗುವ ಸಮಸ್ಯೆ ನಿವಾರಣೆಯಾಗಲಿದ್ದು, ಪ್ರಯಾಣಿಕರ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಅನುಭವ ಮತ್ತಷ್ಟು ಸುಲಭ ಮತ್ತು ವೇಗವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್ ಇಲ್ಲದೇ ರೈಲಲ್ಲಿ ಪಯಣಿಸಿದರೆ ದೊಡ್ಡ ಮೊತ್ತದ ದಂಡ, ಮಹಿಳೆಯರಿಗೆ ಕರುಣೆ ತೋರಿದ ಅಶ್ವಿನ್ ವೈಷ್ಣವ್
ಟಿಕೆಟ್ ಇಲ್ಲದೇ ರೈಲಲ್ಲಿ ಪಯಣಿಸಿದರೆ ದೊಡ್ಡ ಮೊತ್ತದ ದಂಡ, ಮಹಿಳೆಯರಿಗೆ ಕರುಣೆ ತೋರಿದ ಅಶ್ವಿನ್ ವೈಷ್ಣವ್

40 ವರ್ಷಗಳ ಡಿಜಿಟಲ್ ಸೇವೆಗೆ ಹೊಸ ರೂಪ

ರೈಲ್ವೆ ಸಚಿವಾಲಯದ ತಾಂತ್ರಿಕ ವಿಭಾಗವಾದ ಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ (CRIS) ಕಳೆದ ನಾಲ್ಕು ದಶಕಗಳಿಂದ ರೈಲ್ವೆಯ ಡಿಜಿಟಲ್ ಕ್ರಾಂತಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಸಾರ್ವಜನಿಕರ ಟಿಕೆಟ್ ಬುಕ್ಕಿಂಗ್ ವ್ಯವಸ್ತೆಯಿಂದ ಹಿಡಿದು ಸರಕು ಸಾಗಿಸುವ ರೈಲುಗಳ ನಿರ್ವಹಣೆಯವರೆಗೆ ಹಲವು ಡಿಜಿಟಲ್ ಸೇವೆಗಳನ್ನು ಅಭಿವೃದ್ಧಿಪಡಿಸಿರುವ ಸಂಸ್ಥೆ ಇದೀಗ ಅವುಗಳನ್ನು ಮತ್ತಷ್ಟು ಆಧುನಿಕ ಹಾಗೂ ಸುರಕ್ಷಿತಗೊಳಿಸುತ್ತಿದೆ.

'ರೈಲ್‌ಒನ್' ಸೂಪರ್ ಆ್ಯಪ್‌ಗೆ ಒತ್ತು

ಭಾರತೀಯ ರೈಲ್ವೆಯು ತನ್ನ ಮಹತ್ವಾಕಾಂಕ್ಷೆಯ ಹೊಸ 'ರೈಲ್‌ಒನ್' (RailOne) ಸೂಪರ್ ಆ್ಯಪ್ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದೆ. ಜೊತೆಗೆ, ಪ್ರಯಾಣಿಕರ ವೈಯಕ್ತಿಕ ಅಗತ್ಯತೆ ಹಾಗೂ ಆದ್ಯತೆಗಳಿಗೆ ತಕ್ಕಂತೆ ಅತ್ಯಾಧುನಿಕ ಸೇವೆಗಳನ್ನು ಒದಗಿಸಲು ರೈಲ್ವೆ ಇಲಾಖೆಯು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ಈ ಡಿಜಿಟಲ್ ಕ್ರಾಂತಿಯು ಪ್ರಯಾಣಿಕರ ಒಟ್ಟಾರೆ ಅನುಭವವನ್ನು ಮತ್ತಷ್ಟು ಸುಲಭಗೊಳಿಸಲಿದೆ.

ದೊಡ್ಡ ಬಂಡವಾಳ ಇರಲಿಲ್ಲ, ದೊಡ್ಡ ಕನಸಿತ್ತು! 4 ಯುವಕರ ಐಡಿಯಾ ಕೋಟ್ಯಾಂತರ ಭಾರತೀಯರ ಜೀವನಾಡಿ, ಸೆಳೆದಿದೆ ಗೂಗಲ್ ಗಮನ
ದೊಡ್ಡ ಬಂಡವಾಳ ಇರಲಿಲ್ಲ, ದೊಡ್ಡ ಕನಸಿತ್ತು! 4 ಯುವಕರ ಐಡಿಯಾ ಕೋಟ್ಯಾಂತರ ಭಾರತೀಯರ ಜೀವನಾಡಿ, ಸೆಳೆದಿದೆ ಗೂಗಲ್ ಗಮನ

ಸಿಆರ್‌ಐಎಸ್ ವ್ಯವಸ್ಥಾಪಕ ನಿರ್ದೇಶಕ ಜಿವಿಎಲ್ ಸತ್ಯಕುಮಾರ್ ಅವರ ಪ್ರಕಾರ, ರೈಲ್‌ಒನ್ ಆ್ಯಪ್‌ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ AI ತಂತ್ರಜ್ಞಾನದಿಂದ ಪ್ರಯಾಣಿಕರಿಗೆ ಇನ್ನಷ್ಟು ಸುಧಾರಿತ ಸೇವೆಗಳು ಲಭ್ಯವಾಗಲಿವೆ.

ಸೈಬರ್ ಭದ್ರತೆಗೂ ಆದ್ಯತೆ

ಹಬ್ಬದ ದಿನಗಳಲ್ಲಿ ಎದುರಾಗುವ ಪ್ರಯಾಣಿಕರ ಭಾರಿ ಒತ್ತಡವನ್ನು ದಕ್ಷತೆಯಿಂದ ನಿಭಾಯಿಸಲು ನೂತನ ವ್ಯವಸ್ಥೆಯಲ್ಲಿ ಸೈಬರ್ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಾಗಿದೆ. ಟಿಕೆಟ್ ಬ್ಲ್ಯಾಕ್ ಮಾಡಲು ಸೈಬರ್ ಕಿಡಿಗೇಡಿಗಳು ಬಳಸುವ ಅಕ್ರಮ ಸಾಫ್ಟ್‌ವೇರ್‌ಗಳಿಗೆ ಈ ಮೂಲಕ ಬ್ರೇಕ್ ಹಾಕಲಾಗಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸುಲಭ ಹಾಗೂ ಸುರಕ್ಷಿತ ಟಿಕೆಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ ರೈಲ್ವೆಯ ಹೊಸ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವಾಗ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಹತ್ತಾರು ಸಮಸ್ಯೆಗಳಿಗೆ ಈ ಹೊಸ ತಂತ್ರಜ್ಞಾನದ ಮೂಲಕ ಶಾಶ್ವತ ಪರಿಹಾರ ಸಿಗಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+