ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಆರ್ ಸಿಟಿಸಿಯಿಂದ ದುಬೈ ಪ್ರವಾಸದ ಪ್ಯಾಕೇಜ್

|
Google Oneindia Kannada News

ನವದೆಹಲಿ, ಜ.4 : ಇಂಡಿಯನ್ ರೈಲ್ವೆ ಕ್ಯಾಟೆರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್(ಐಆರ್ ಸಿಟಿಸಿ) ತನ್ನ ಸಾಂಪ್ರದಾಯಿಕ ರೈಲ್ವೆ ಟಿಕೆಟ್ ಬುಕಿಂಗ್ ಕೆಲಸದೊಂದಿಗೆ ಗ್ರಾಹಕರಿಗೆ ವಿದೇಶಿ ಪ್ರವಾಸದ ಸವಿಯನ್ನು ಬಡಿಸಲಿದೆ.

ವಿದೇಶದ ಆಯ್ದ ಪ್ರಮುಖ ಸ್ಥಳಗಳಿಗೆ ಪ್ರವಾಸ ಪ್ಯಾಕೇಜ್ ಸಿದ್ಧಪಡಿಸಿದೆ. ಐಆರ್ ಸಿಟಿಸಿಯ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಅಂದರೆ ಎರ್ನಾಕುಲಮ್, ಚೆನ್ನೈ ಮತ್ತು ಬೆಂಗಳೂರಿನ ಕಚೇರಿಗಳು ಪ್ರವಾಸ ಪ್ಯಾಕೇಜ್ ನೀಡಿಕೆಯನ್ನು ಆರಂಭಿಸಿವೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

air india

ಕೊಚ್ಚಿಯಿಂದ ದುಬೈಗೆ ಐಆರ್ ಸಿಟಿಸಿಯ ನಾಲ್ಕು ದಿನದ ಪ್ರವಾಸ ಪ್ಯಾಕೇಜ್ ಬಿಡುಗಡೆ ಮಾಡಿದೆ. ಮಲೇಷಿಯಾಕ್ಕೆ ತೆರಳುವ ಭಾಗ್ಯವನ್ನು ಒದಗಿಸಿದೆ. 24 ಜನರಿಗೆ ಪ್ರವಾಸ ಮಾಡಲು ಅವಕಾಶ ದೊರೆಯಲಿದೆ ಎಂದು ಐಆರ್ ಸಿಟಿಸಿ ಪ್ರಾದೇಶಿಕ ಅಧಿಕಾರಿ ರಾಜೀವ್ ಸದಾನಂದನ್ ತಿಳಿಸಿದ್ದಾರೆ.

ಮ್ಯಾಜಿಕಲ್ ದುಬೈ ಫೆಸ್ಟಿವಲ್ ಹೆಸರಿನ ಪ್ರವಾಸಕ್ಕೆ 44,155 ರೂ. ನಿಗದಿ ಪಡಿಸಲಾಗಿದೆ. ಇದು ಏರ್ ಇಂಡಿಯಾ ಟಿಕೇಟ್, ಪ್ರವಾಸದ ಖರ್ಚು, ತ್ರೀ ಸ್ಟಾರ್ ಹೊಟೇಲ್ ವಾಸ್ತವ್ಯ, ಊಟ ಮತ್ತು ಇತರ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.[ರೈಲು ಪ್ರಯಾಣಕ್ಕೆ ಹೊರಡುವ ಮುನ್ನ ಇದನ್ನೊಮ್ಮೆ ಓದಿ]

ಪ್ರವಾಸ ಮಾಡುವವರು ವಿಶ್ವದ ಅತಿ ಎತ್ತರದ ಕಟ್ಟಡವನ್ನು ಕಣ್ಣು ತುಂಬಿಕೊಳ್ಳಬಹುದು. ಅಲ್ಲದೇ ದುಬೈನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ದಿನ ಕಳೆಯಬಹುದು. ಸಫಾರಿಗೆ ತೆರಳುವ ಅವಕಾಶವೂ ಲಭ್ಯವಿದೆ.

ಜನವರಿ 23 ರಿಂದ ಆರಂಭವಾಗುವ ಪ್ರವಾಸಕ್ಕೆ ಐಆರ್ ಸಿಟಿಸಿ ಸಕಲ ಸಿದ್ಧತೆ ಮಾಡಿಕೊಂಡಿದ್ದು ಇದರ ಯಶಸ್ಸು ಆಧರಿಸಿ ಪ್ರಪಂಚದ ಇತರೇ ಪ್ರಮುಖ ಪ್ರವಾಸಿ ತಾಣಗಳಿಗೂ ಯೋಜನೆಯನ್ನು ವಿಸ್ತರಿಸುವ ಚಿಂತನೆಯಿದೆ. ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಉನ್ನತ ಮಟ್ಟದ ಸೇವೆ ನೀಡುವುದೇ ಪ್ರಮುಖ ಉದ್ದೇಶ ಎಂದು ಐಆರ್ ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Indian Railway Catering and Tourism Corporation Ltd. (IRCTC) has gone beyond its primary business as a rail ticketing portal and has ventured into international tours. The IRCTC, a government of India enterprise, which had been concentrating on inbound tours to various States, has started focusing on promoting trips to popular tourist spots abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X