ಕೋಟ್ಯಂತರ ರೈಲ್ವೆ ಪ್ರಯಾಣಿಕರಿಗೆ ನಿರಾಳದ ಸಂಗತಿ ಇಲ್ಲಿದೆ

ಮುಂಬೈ, ಮೇ 05: ಭಾರತೀಯ ರೈಲ್ವೆಯ ಟಿಕೆಟ್ ಬುಕ್ಕಿಂಗ್ ವೆಬ್ ತಾಣ (ಐಆರ್ ಸಿಟಿಸಿ) ಹ್ಯಾಕ್ ಆಗಿದೆ ಒಂದು ಕೋಟಿಗೂ ಅಧಿಕ ಮಂದಿ ಪ್ರಯಾಣಿಕರ ವೈಯಕ್ತಿಕ ವಿವರಗಳು ಸೋರಿಕೆಯಾಗಿದೆ ಎಂಬ ಸುದ್ದಿ ಗುರುವಾರ ಆತಂಕ ಉಂಟು ಮಾಡಿತ್ತು. ಆದರೆ, ಐಆರ್ ಸಿಟಿಸಿ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿ 'ಯಾವುದೇ ರೀತಿಯಾಗಿಲ್ಲ, ಮಾಹಿತಿ ಕಳ್ಳತನ, ಸೋರಿಕೆ ಸುದ್ದಿ ಸುಳ್ಳು' ಎಂದು ಹೇಳಿದ್ದಾರೆ.

Indian Railway Catering and Tourism Corporation(IRCTC) ಭಾರತದ ಅತ್ಯಂತ ಜನಪ್ರಿಯ ಟಿಕೆಟ್ ಬುಕ್ಕಿಂಗ್ ತಾಣಗಳಲ್ಲಿ ಒಂದೆನಿಸಿದೆ.

IRCTC has not been hacked : PRO Sandip Dutta

ಈ ವೆಬ್ ತಾಣದ ಮೂಲಕ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು ತಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ. ಈ ವಿವರಗಳುಳ್ಳ ಪಿಎನ್ ಆರ್ ನಂಬರ್ ದುರ್ಬಳಕೆಯಾಗಿದೆ. ಎಲ್ಲಾ ಮಾಹಿತಿ ಕಳ್ಳರ ಪಾಲಾಗಿದೆ ಎಂಬ ಸುದ್ದಿ ಬಂದಿತ್ತು.

ಆದರೆ, ಇದೆಲ್ಲ ಸುಳ್ಳು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು, ಮುಂಬೈ ಸೈಬರ್ ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಐಆರ್ ಸಿಟಿಸಿ ವಕ್ತಾರ ಸಂದೀಪ್ ದತ್ತಾ ಹೇಳಿದ್ದಾರೆ.

ಪ್ರಯಾಣಿಕರು ತಮ್ಮ ಟಿಕೆಟ್ ಬುಕ್ಕಿಂಗ್ ಗೂ ಮುನ್ನ ತಮ್ಮ ಇ ಮೇಲ್, ಮನೆ ವಿಳಾಸ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಡ್ರೈವಿಂಗ್ ಲೈಸನ್ಸ್, ಬ್ಯಾಂಕ್ ಖಾತೆ ನಂಬರ್ ಮುಂತಾದ ದಾಖಲೆ ಒದಗಿಸಿರುತ್ತಾರೆ. ಹೀಗಾಗಿ ಮಾಹಿತಿ ಸೋರಿಕೆಯಾಗಿದ್ದರೆ ಏನು ಗತಿ ಎಂಬ ಆತಂಕ ಉಂಟಾಗಿತ್ತು.

ಐಆರ್​ಸಿಟಿಸಿ ವೆಬ್​ಸೈಟ್ ಗೆ ಉನ್ನತ ಗುಣಮಟ್ಟದ ಸುರಕ್ಷತಾ ಭದ್ರತೆ ಒದಗಿಸಲಾಗಿದೆ. ಹ್ಯಾಕಿಂಗ್ ಬಗ್ಗೆ ಮುಂಬೈ ಸೈಬರ್ ಸೆಲ್​ಗುಪ್ತಚರ ವಿಭಾಗಕ್ಕೆ ಮಾಹಿತಿ ನೀಡಲಾಗಿದ್ದು, ತನಿಖೆ ಮುಂದುವರೆದಿದೆ.


ಆದರೆ, ಐಆರ್ ಸಿಟಿಸಿ ಹ್ಯಾಕ್ ಬಗ್ಗೆ ಟ್ವಿಟ್ಟರ್ ನಲ್ಲಿ ಆತಂಕಕ್ಕಿಂತ ಕಾಮಿಡಿ ಟ್ವೀಟ್ ಗಳೇ ಅಧಿಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+