IRCTC ಆಹಾರದ ಗುಣಮಟ್ಟಕ್ಕೆ AI ಕಣ್ಗಾವಲು: 800ಕ್ಕೂ ಹೆಚ್ಚು ಅಡುಗೆಮನೆಗಳ ಮೇಲೆ ನಿಗಾ

ರೈಲು ಪ್ರಯಾಣಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟ ಮತ್ತು ಸ್ವಚ್ಚತೆಯನ್ನು ಮತ್ತಷ್ಟು ಸುಧಾರಿಸಲು ಭಾರತೀಯ ರೈಲ್ವೆ ಇಲಾಖೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಕೃತಕ ಬುದ್ದಿಮತ್ತೆ ಆಧಾರಿತ ಮೇಲ್ವಿಚಾರಣ ವ್ಯವಸ್ಥೆಯನ್ನು ವ್ಯಾಪಕವಾಗಿ ವಿಸ್ತರಿಸಿದೆ. ದೇಶಾದ್ಯಂತ ರೈಲ್ವೆಗೆ ಆಹಾರ ತಯಾರಿಸುವ 800ಕ್ಕೂ ಹೆಚ್ಚು ಅಡುಗೆಮನೆಗಳಲ್ಲಿ 2,394 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಆಹಾರ ಸಂಬಂಧಿತ ದೂರುಗಳನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. 2025-26ನೇ ಸಾಲಿನಲ್ಲಿ ಐಆರ್‌ಸಿಟಿಸಿ ರೈಲು ಪ್ರಯಾಣಿಕರಿಗೆ ಸುಮಾರು 60 ಕೋಟಿ ಊಟಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಆಹಾರದ ಸ್ವಚ್ಛತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು AI ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

9 ರೀತಿಯ ಸ್ವಚ್ಛತಾ ಕ್ರಮಗಳ ಮೇಲೆ ನಿಗಾ

AI ಆಧಾರಿತ ಈ ವ್ಯವಸ್ಥೆ ಅಡುಗೆ ಮನೆಗಳಲ್ಲಿ ಸ್ವಚ್ಚತೆಗೆ ಸಂಬಂಧಿಸಿದ ಒಂಬತ್ತು ಪ್ರಮುಖನಾದ ಅಂಶಗಳನ್ನು ಗುರುತಿಸುತ್ತದೆ. ತಲೆ ಕೂದಲನ್ನು ಮುಚ್ಚುವ ಹೇರ್‌ನೇಟ್ ಹಾಕಿರುವುದು, ಪಾರದರ್ಶಕವಾದ ಕೈಗವಸುಗಳು ಹಾಕುವುದು, ನೆಲ ಒರೆಸುವ ಮತ್ತಯ ಸ್ವಚ್ಚಗೊಳಿಸುವ ವಿಧಾನಗಳು ಸರಿಯಾಗಿದೆಯಾ, ನೊಣಗಳು, ಇಲಿಗಳು ಅಥವಾ ಜಿರಳೆಗಳ ಉಪಸ್ಥಿತಿ ಇದೆಯೇ ಎಂಬುದನ್ನು ಈ ವ್ಯವಸ್ಥೆ ಪತ್ತೆ ಹಚ್ಚುತ್ತದೆ.

IRCTC

ಐಆರ್‌ಸಿಟಿಸಿ ಅಧಿಕಾರಿಗಳು ಹೇಳುವ ಪ್ರಕಾರ, ಕ್ಯಾಮೆರಾಗಳಿಗೆ ಜೋಡಿಸಲಾದ AI ವ್ಯವಸ್ಥೆ ಅಸ್ವಚ್ಚ ಚಟುವಟಿಕೆಗಳನ್ನು ತಕ್ಷಣವೇ ಗುರುತಿಸಿ ಸಂಬಂಧಿತ ಅಡುಗೆ ಮನೆಯ ವ್ಯವಸ್ಥಾಪಕರಿಗೆ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ. ಸಮಸ್ಯಯನ್ನು ತಕ್ಷಣ ಸರಿಪಡಿಸದಿದ್ದರೆ ಅಡು ಮೇಲಧಿಕಾರಿಗಳ ಗಮನ್ನಕ್ಕೆ ಹೋಗುತ್ತದೆ. ಈ ವ್ಯವಸ್ಥೆಯು ಎರಡು ಗಂಟೆಗಳ ಒಳಗೆ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳಬಹುದುದಾಗಿದೆ.

ದಿನಕ್ಕೆ ಅಂದಾಜು 350 ಎಚ್ಚರಿಕೆ ಸಂದೇಶ

ಅಧಿಕಾರಿಗಳ ಮಾಹಿತಿಯ ಪ್ರಕಾರ, ಅಡುಗೆ ಮಾಡುವ ಸಿಬ್ಬಂದಿ ಹೆಚ್ಚಾಗಿ ಹೇರ್‌ನೆಟ್ ಧರಿಸದೇ ಇರುವುದು ಅತ್ಯಂತ ಸಾಮಾನ್ಯವಾದ ಉಲ್ಲಂಘನೆಯಾಗಿದೆ. ಪ್ರತಿದಿನ ಸರಾಸರಿ 350 ಎಚ್ಚರಿಕೆ ಸಂದೇಶಗಳು ಅಥವಾ ನ್ಯೂನತೆ ಟಿಕೆಟ್ಟುಗಳು ಸೃಷ್ಟಿಯಾಗುತ್ತವೆ. ಕಳೆದ ಒಂದು ತಿಂಗಳಲ್ಲಿ 13,550 ಟಿಕೆಟ್‌ಗಳು ದಾಖಲಾಗಿವೆ.ಉತ್ತರ ವಲಯದಲ್ಲಿ ಅತಿ ಹೆಚ್ಚು 4,123 ಪ್ರಕರಣಗಳು ದಾಖಲಾಗಿದ್ದರೆ, ಪೂರ್ವ ವಲಯದಲ್ಲಿ 3,205, ಪಶ್ಚಿಮ ವಲಯದಲ್ಲಿ 2,687, ದಕ್ಷಿಣ ಮಧ್ಯ ವಲಯದಲ್ಲಿ 2,226 ಮತ್ತು ದಕ್ಷಿಣ ವಲಯದಲ್ಲಿ 1,309 ಪ್ರಕರಣಗಳು ದಾಖಲಾಗಿವೆ.

ಗೋಲ್ಡನ್ ಚಾರಿಯಟ್‌ನಲ್ಲಿ ಪ್ರವಾಸ ಈಗ ಮತ್ತಷ್ಟು ಅಗ್ಗ: ಐಆರ್‌ಸಿಟಿಸಿಯಿಂದ 20% ದರ ರಿಯಾಯಿತಿ
ಗೋಲ್ಡನ್ ಚಾರಿಯಟ್‌ನಲ್ಲಿ ಪ್ರವಾಸ ಈಗ ಮತ್ತಷ್ಟು ಅಗ್ಗ: ಐಆರ್‌ಸಿಟಿಸಿಯಿಂದ 20% ದರ ರಿಯಾಯಿತಿ

ಹವಾಮಾನ ಬದಲಾವಣೆಯ ವೇಳೆ ಹೆಚ್ಚು ಸವಾಲು

ಋತುಮಾನ ಬದಲಾವಣೆಯ ಸಮಯದಲ್ಲಿ ಆಹಾರದ ಗುಣಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀಳುವುದರಿಂದ ಇದೇ ಅವಧಿಯಲ್ಲಿ ಹೆಚ್ಚಿನ ದೂರುಗಳು ಬರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. AI ವ್ಯವಸ್ಥೆಯ ಪರಿಣಾಮಕಾರಿ ದೋಷ ಪ್ರಮಾಣ ಸುಮಾರು 10% ಇದೆ. ಕೆಲವೊಮ್ಮೆ ತಪ್ಪಾಗಿ ಉಲ್ಲಂಘನೆಗಳನ್ನು ಗುರುತಿಸುವ ಸಂದರ್ಭಗಳೂ ಎದುರಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉದಾಹರಣೆಗೆ, ಅಡುಗೆ ಸಿಬ್ಬಂದಿ ಹೇರ್‌ನೆಟ್ ಧರಿಸಿದ್ದರೂ ಅದು ಸ್ವಲ್ಪ ಮೇಲಕ್ಕೆ ಸರಿದಿದ್ದರೆ, AI ಅದನ್ನು ಉಲ್ಲಂಘನೆ ಎಂದು ಗುರುತಿಸಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

IRCTC

ಕಳಪೆ ಗುಣಮಟ್ಟದ ಆಹಾರ ಪೂರೈಕೆಗೆ ಕಠಿಣ ಕ್ರಮ

ಇತ್ತೀಚೆಗೆ ಪಾಟ್ನಾ-ಟಾಟಾನಗರ್ ವಂದೇ ಭಾರತ್ ರೈಲಿನಲ್ಲಿ ಕಳಪೆ ಗುಣಮಟ್ಟದ ಮೊಸರು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವಾಲಯವು ಐಆರ್‌ಸಿಟಿಸಿಗೆ ರೂ.10 ಲಕ್ಷ ದಂಡ ವಿಧಿಸಿತ್ತು. ಅಲ್ಲದೆ, ಆಹಾರ ಪೂರೈಕೆ ಮಾಡುತ್ತಿದ್ದ ಗುತ್ತಿಗೆದಾರ ಸಂಸ್ಥೆಯ ಮೇಲೂ ರೂ.50 ಲಕ್ಷ ದಂಡವನ್ನು ವಿಧಿಸಲಾಗಿತ್ತು.

IRCTC ಗುಡ್ ನ್ಯೂಸ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ ಈಗ ಇನ್ನಷ್ಟು ಸುಲಭ
IRCTC ಗುಡ್ ನ್ಯೂಸ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ ಈಗ ಇನ್ನಷ್ಟು ಸುಲಭ

2025ರ ಜುಲೈನಲ್ಲಿ ರಾಜ್ಯಸಭೆಗೆ ಸಲ್ಲಿಸಲಾದ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರೈಲು ಪ್ರಯಾಣಿಕರಿಂದ 19,000ಕ್ಕೂ ಹೆಚ್ಚು ಆಹಾರ ಸಂಬಂಧಿತ ದೂರುಗಳು ದಾಖಲಾಗಿವೆ. ಈ ಪೈಕಿ 3,137 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ.

2023-24ರಲ್ಲಿ 7,026 ದೂರುಗಳು ದಾಖಲಾಗಿದ್ದರೆ, 2024-25ರಲ್ಲಿ ಅದು 6,645ಕ್ಕೆ ಇಳಿಕೆಯಾಗಿದೆ. ಆದರೆ 2020-21ರಲ್ಲಿ ದಾಖಲಾಗಿದ್ದ ಕೇವಲ 253 ದೂರುಗಳಿಗೆ ಹೋಲಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ.

AI ಆಧಾರಿತ ನಿಗಾ ವ್ಯವಸ್ಥೆಯ ಮೂಲಕ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಮತ್ತಷ್ಟು ಸುಧಾರಿಸಿ ಪ್ರಯಾಣಿಕರ ವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನು ಐಆರ್‌ಸಿಟಿಸಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+