• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಪೂರೈಕೆ ಬಗ್ಗೆ ಮುಖ್ಯ ಸೂಚನೆ

|

ನವದೆಹಲಿ, ಮಾರ್ಚ್ 27: ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಪೂರೈಕೆಗೆ ದೇಶದಲ್ಲಿ ಯಾವುದೇ ಸಮಸ್ಯೆ ಆಗದಂತೆ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಇಂಡಿಯನ್ ಆಯಿಲ್ ಕಂಪೆನಿಯ ನಿರ್ದೇಶಕ (ಮಾರ್ಕೆಟಿಂಗ್) ಗುರ್ಮಿತ್ ಸಿಂಗ್ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ಯಾವುದೇ ಕೊರತೆ ಇಲ್ಲ. ನಮ್ಮ ಎಲ್ಲ ಸ್ಥಳಗಳಲ್ಲಿ ಮಾಮೂಲಿನಂತೆ ಕಾರ್ಯ ನಿರ್ವಹಣೆ ಆಗುತ್ತಿದೆ. ಈ ಅಗತ್ಯ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಎಲ್ ಪಿಜಿ ಸಿಲಿಂಡರ್ ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೋ ಅಥವಾ ಗಾಬರಿಯಿಂದ ಬುಕ್ಕಿಂಗ್ ಮಾಡುವುದೋ ಅಗತ್ಯ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ವೈರಾಣು ಚಿಕಿತ್ಸೆಗಾಗಿ ಅಗತ್ಯ ಬರುವುದರಿಂದ ಆಸ್ಪತ್ರೆಗಳಿಗೆ ಹಾಗೂ ಆರೋಗ್ಯ ಸೇವಾ ಕೇಂದ್ರಗಳಿಗೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಪೂರೈಕೆ ಆಗುತ್ತಿದೆ. ವೈದ್ಯಕೀಯ ಆಮ್ಲಜನಕದ ಸಂಗ್ರಹ ಹಾಗೂ ಸಾಗಾಟಕ್ಕೆ ತಕ್ಷಣ ಲೈಸೆನ್ಸ್ ವಿತರಿಸಲು ಸೂಚನೆ ನೀಡಲಾಗಿದೆ.

ಅದರ ಜತೆಗೆ ವೈಸ್ಯಕೀಯ ಅಗತ್ಯದ ಆಮ್ಲಜನಕ, ನೈತ್ರೋಸ್ ಆಕ್ಸೈಡ್ ಉತ್ಪಾದನೆ ಮತ್ತು ಸಾಗಾಟಕ್ಕೆ ಅವಕಾಶ ನೀಡುವಂತೆ ರಾಜ್ಯಗಳ ಗೃಹ ಸಚಿವಾಲಯಕ್ಕೆ ಸೂಚಿಸಲಾಗಿದೆ. ಈಗ ಆರ್ಥಿಕ ವರ್ಷದ ಕೊನೆಯಲ್ಲಿ ಇದ್ದರೂ ಆಮ್ಲಜನಕದ ಸಂಗ್ರಹ ಮತ್ತು ಸಾಗಾಟದ ಲೈಸೆನ್ಸ್ ಗಳು ಈಗಾಗಲೇ ಪಡೆದಿರುವವರದು ರದ್ದು ಮಾಡುವುದಿಲ್ಲ ಎಂದು ತಿಳಿಸಲಾಗಿದೆ.

English summary
During the time of lock down on the backdrop of Corona outrage, here is an important announcement about petrol, diesel, LPG supply by IOC director.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X