• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ವಿಟ್ಟರಲ್ಲಿ ಹುಲಿ, ಹುಲಿ, ಹೆಬ್ಬುಲಿ, ದೈತ್ಯಬೆಕ್ಕಿಗೊಂದು ದಿನ

By Mahesh
|

ಬೆಂಗಳೂರು, ಜುಲೈ 29: ಟ್ವಿಟ್ಟರ್, ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಇಂದು ಹುಲಿ, ಹುಲಿ, ಹೆಬ್ಬುಲಿ, ದೈತ್ಯಬೆಕ್ಕಿನದ್ದೇ ಆರ್ಭಟ. ವ್ರಾಘ್ಯರಾಜನಿಗಾಗಿ ಈ ದಿನ ಮೀಸಲು. ಹುಲಿಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇಂದು ಅಂತಾರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತಿದೆ.

ರಷ್ಯಾದ ಸೇಂಟ್ ಪೀಟರ್ ಬರ್ಗ್ ಹುಲಿ ಸಮಿತಿ 2010 ಜುಲೈ 29 ಅನ್ನು ಅಂತಾರಾಷ್ಟ್ರೀಯ ಹುಲಿದಿನವನ್ನಾಗಿ ಆಚರಿಸುವ ಸಂಕಲ್ಪ ಮಾಡಲಾಯಿತು. ಜುಲೈ 29 ಅನ್ನೇ ಆರಿಸಿಕೊಂಡಿದ್ದು ಏಕೆ ಎಂಬುದಕ್ಕೆ ಯಾವುದೇ ಸ್ಪಷ್ಟಕಾರಣಗಳಿಲ್ಲ.

ಜಂಗಲ್ ಡೈರಿ: ಪ್ರಾಣಿ ಜಗತ್ತಿನ ಉಳಿವು-ಅಳಿವಿನ ನಿತ್ಯ ಹೋರಾಟ

ಹುಲಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶಕ್ಕೆ ಯಾವ ದಿನವಾದರೇನು? ಜುಲೈ 29 ಒಂದು ಸಾಂಕೇತಿಕ ದಿನವಷ್ಟೇ ಎಂಬುದು ಈ ಹುಲಿ ಸಮಿತಿಯ ಪ್ರತಿಕ್ರಿಯೆ.

ಟೈಗರ್ ನಾಮಾಂಕಿತ ಐದು ಹುಲಿಯ ಹೆಜ್ಜೆ ಗುರುತುಗಳು

ಪ್ಯಾಂಥೆರಾ ಟೈಗ್ರಿಸ್ ಎಂಬ ವೈಜ್ಞಾನಿಕ ಹೆಸರು ಪಡೆದ ಹುಲಿ ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಎಂಬ ಕುಟುಂಬಕ್ಕೆ ಸೇರಿದ ಜೀವಿ. 13 ಅಡಿ ಉದ್ದ 300 ಕೆಜಿವರೆಗೂ ತೂಗಬಹುದಾದ ಈ ಹುಲಿಗಳ ಪೈಕಿ ಭಾರತದ ಬಂಗಾಳಿ ಹುಲಿಗಳಿಗೆ ಹೆಚ್ಚಿನ ಮಹತ್ವವಿದೆ. ಆಹಾರ ಸರಪಳಿಯನ್ನು ಭದ್ರವಾಗಿಡುವಲ್ಲಿ ಪ್ರಮುಖ ಸ್ಥಾನ ಹೊಂದಿರುವ ಹುಲಿಗಳು ಪ್ರತಿ ಕಾಡಿನ ಆಕರ್ಷಣೆ ಎನ್ನಿಸಿವೆ.

ವಿಶ್ವದಲ್ಲಿ ಭಾರತಕ್ಕೇ ಅಗ್ರಸ್ಥಾನ!

ವಿಶ್ವದಲ್ಲಿ ಭಾರತಕ್ಕೇ ಅಗ್ರಸ್ಥಾನ!

ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ. 70 ರಷ್ಟು ಹುಲಿಗಳು ಭಾರತದಲ್ಲೇ ಇವೆ. 2010 ರ ಹುಲಿಗಣತಿಯ ಪ್ರಕಾರ ಭಾರತದಲ್ಲಿದ್ದ ಹುಲಿಗಳ ಸಂಖ್ಯೆ1,706. ಆದರೆ 2014 ರ ಹುಲಿಗಣತಿಯ ಪ್ರಕಾರ ಈ ಸಂಖ್ಯೆ 2,226 ಕ್ಕೇರಿದ್ದು ಹುಲಿ ಸಂತತಿ ಹೆಚ್ಚುತ್ತಿರುವುದು ಹೆಮ್ಮೆಯ ವಿಷಯವೆನ್ನಿಸಿದೆ. ಭಾರತದ ಪಶ್ಚಿಮ ಘಟದ ದಟ್ಟ ಕಾಡಿನಲ್ಲಿ 776 (2014 ರ ಹುಲಿಗಣತಿ ಪ್ರಕಾರ) ಹುಲಿಗಳಿವೆಯಂತೆ! ಪಶ್ಚಿಮ ಘಟ್ಟ ಹಾದು ಹೋಗುವ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಅದೇ ಕಾರಣಕ್ಕಾಗಿಯೇ ಹುಲಿ ಸಂಖ್ಯೆ ಹೆಚ್ಚು.

ರಾಯಲ್ ಬೆಂಗಾಲ್ ಟೈಗರ್

ಹುಲಿಗಳ ಪೈಕಿ ರಾಯಲ್ ಬೆಂಗಾಲ್ ಟೈಗರ್ ವಿಶೇಷದ ಬಗ್ಗೆ ಟ್ವೀಟ್ ಗಳು ಹರಿದಾಡುತ್ತಿವೆ. ಮನುಷ್ಯರ ಪಾದದ ಗುರುತಿನಂತೆ, ಹುಲಿಗಳ ಪಾದದ ಗುರುತು ಕೂಡಾ ವಿಭಿನ್ನವಾಗಿರುತ್ತದೆ. ಒಂದು ಹುಲಿಯ ಪಗ್ ಮಾರ್ಕ್ ಇದ್ದಂತೆ ಮತ್ತೊಂದು ಹುಲಿಯ ಪಗ್ ಮಾರ್ಕ್ ಇರುವುದಿಲ್ಲ.

ಆಸ್ಟ್ರೇಲಿಯಾ ಝೂನಿಂದ ಸಂದೇಶ

ಹುಲಿಗಳ ಸಂರಕ್ಷತೆ ಕುರಿತಂತೆ ಜಗತ್ತಿನೆಲ್ಲೆಡೆಯಿಂದ ಪ್ರಾಣಿ ಸಂಗ್ರಹಾಲಯದ ಟ್ವಿಟ್ಟರ್ ಖಾತೆಯಿಂದ ಸಂದೇಶಗಳು ಬರುತ್ತಿವೆ.

ಹುಲಿಗಳಿಗೆ ಕಾಡಿನಲ್ಲಿ ಮಳೆ, ನೀರು, ಈಜು ಎಂದರೆ ಬಲುಮೋಜು, ದಿನಕ್ಕೆ ಹತ್ತಿಪ್ಪತ್ತು ಕಿ.ಮೀ ತನಕ ಬೇಕಾದರೂ ಹುಲಿ ಈಜಬಲ್ಲುದು.

2226 ಹುಲಿಗಳು ಮಾತ್ರ ಇನ್ನೂ ಉಳಿದಿವೆ

2014 ಸಮೀಕ್ಷೆಯಂತೆ 2226 ಹುಲಿಗಳು ಲೆಕ್ಕಕ್ಕೆ ಸಿಕ್ಕಿವೆ. ಆದರೆ, ಇನ್ನೊಂದು ಮಾಹಿತಿಯಂತೆ ಈ ಸಂಖ್ಯೆ ಈಗ 3,500 ದಾಟಿದೆ ಎಂಬ ಮಾಹಿತಿಯಿದೆ. ಇನ್ನು ವಿಶ್ವದಲ್ಲೇ ಅತ್ಯಧಿಕ ಹುಲಿಗಳನ್ನು ಸಂರಕ್ಷಿಸಿರುವ ದೇಶವೆಂದರೆ ಭಾರತ. ಹುಲಿಗಳ ಆಯಸ್ಸು 25 ವರ್ಷ. ಹುಲಿ ಹುಟ್ಟಿದ ಒಂದು ವಾರಗಳ ಕಾಲ ಸಂಪೂರ್ಣ ಕುರುಡಾಗಿರುತ್ತದೆ. ಹುಲಿ ಮರಿಗಳ ಪೈಕಿ ಅರ್ಧದಷ್ಟು ಮಾತ್ರ ಬದುಕಿ ಬೆಳೆಯುತ್ತವೆ. ಉಳಿದವು ಸಾಯುತ್ತವೆ.

ರಣ್ ಥಂಬೂರ್ ನ ಮಚಲಿ ನೆನಪಲ್ಲಿ

ರಣ್ ಥಂಬೂರ್ ನ ಮಚಲಿ ನೆನಪಲ್ಲಿ ಟ್ವೀಟ್, ವಿಶ್ವ ಪ್ರಸಿದ್ಧ ಮಚಲಿ ಹೆಸರಿನ ಹುಲಿ ಬಗ್ಗೆ ಬಂದ ಸಾಕ್ಷ್ಯಚಿತ್ರ ಜನಪ್ರಿಯಗೊಂಡಿತ್ತು.

ಝೂಗಳಲ್ಲಿ ಹುಲಿ ಇಡಬೇಡಿ

ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಗಳನ್ನು ಇಡಬೇಡಿ ಎಂದ ಪೆಟಾ ಸಂಸ್ಥೆ

English summary
Global Tiger Day, often called International Tiger Day, is celebrated on July 29 to give worldwide awareness on the reservation of tigers. It was first created in 2010 at the Saint Petersburg Tiger Summit and has been celebrated since then. This was initiated because the wild tigers are close to extinction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more