ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹ್ಲಿಯ ಭರ್ಜರಿ ತಯಾರಿ, ಹುಬ್ಬಳ್ಳಿಯಲ್ಲಿ ನಿಲ್ಲದ ಪ್ರತಿಭಟನೆ

By Vanitha
|
Google Oneindia Kannada News

ಬೆಂಗಳೂರು,ಮಾರ್ಚ್,15: ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಿಂದಾಗಿ ಸೋಮವಾರ ಮೈಸೂರು ಸಂಪೂರ್ಣ ಸ್ತಬ್ಧವಾಗಿತ್ತು. ಇಂದು ಮೈಸೂರಿನ ವಾತಾವರಣ ಕೊಂಚ ಮಟ್ಟಿಗೆ ತಿಳಿಯಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಇಡೀ ಹುಬ್ಬಳ್ಳಿ ಪ್ರತಿಭಟನಾ ನಿರತ ಜನರಿಂದ ತುಂಬಿ ತುಳುಕುತ್ತಿದೆ. ಎಲ್ಲಾ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಪರ ಊರಿನಿಂದ ಹುಬ್ಬಳ್ಳಿಗೆ ಬಂದ ಜನರ ಸಂಕಟ ಹೇಳತೀರದಾಗಿದೆ.[ಗರಿಗೆದರಿದ ಕಳಸಾ ಹೋರಾಟ : ಹುಬ್ಬಳ್ಳಿಯಲ್ಲಿ ರೈಲು ಬಂದ್]

ಮಾರ್ಚ್ 11ರಿಂದ ಏಪ್ರಿಲ್ 30ರವರೆಗೆ ವಿಶ್ವಕಪ್ ಟಿ20 ನಡೆಯಲಿದ್ದು, ಫೈನಲ್ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡ್ ನಲ್ಲಿ ನಡೆಯಲಿದೆ. ಇದಕ್ಕೆ ಭಾರತ ತಂಡ ಸೇರಿದಂತೆ ಪ್ರತಿಯೊಂದು ತಂಡಗಳು ಭರ್ಜರಿಯಾಗಿಯೇ ಅಭ್ಯಾಸದಲ್ಲಿ ತೊಡಗಿವೆ. ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಹೀಗೆ ನಾನಾ ಸುದ್ದಿಗಳು ಇಲ್ಲಿವೆ ನೋಡಿ.

ರೈಲಿಲ್ಲದೆ ಜನರ ಪರದಾಟ

ರೈಲಿಲ್ಲದೆ ಜನರ ಪರದಾಟ

ಹುಬ್ಬಳ್ಳಿಯಲ್ಲಿ ರೈಲು, ಬಸ್ಸು ಸಂಚಾರವಿಲ್ಲದೇ ಜನರು ಪರದಾಡುತ್ತಿದ್ದು, ರೈಲಿಗಾಗಿ ಜನರು ಕಾಯುತ್ತಾ ಕುಳಿತಿರುವುದು. ಕಳಸಾ ಬಂಡೂರಿ ಸಮನ್ವಯ ಸಮಿತಿಯು ಕಳಸಾ ಬಂಡೂರಿ ಯೋಜನೆ ಆಗ್ರಹಿಸಿ ಇಂದು ರೈಲು ತಡೆ ನಡೆಸಿದ್ದಾರೆ.

ಹುಲಿಗಳ ಆಟ ನೀವು ನೋಡಿ

ಹುಲಿಗಳ ಆಟ ನೀವು ನೋಡಿ

ನವದೆಹಲಿಯಲ್ಲಿರುವ ಮೃಗಾಲಯದಲ್ಲಿ ಎರಡು ಮುದ್ದಾದ ಹುಲಿಮರಿಗಳು ಆಟವಾಡುತ್ತಿರುವುದು ಕ್ಯಾಮರದ ಕಣ್ಣಿಗೆ ಕಂಡದ್ದು ಹೀಗೆ.

ದೆಹಲಿಯಲ್ಲಿ ಪ್ರಶಸ್ತಿ ಸಮಾರಂಭ

ದೆಹಲಿಯಲ್ಲಿ ಪ್ರಶಸ್ತಿ ಸಮಾರಂಭ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜವಾಹರ ಲಾಲ್ ವಿಶ್ವವಿದ್ಯಾನಿಲಯದ ತಂಡಕ್ಕೆ ವಿಸಿಟರ್ಸ್ ಎಂಬ ಪ್ರಶಸ್ತಿ ನೀಡಲಾಗಿದೆ. ಅಲೋಕ್ ಭಟ್ಟಾಚಾರ್ಯ ಈ ಸಂಶೋಧನಾ ತಂಡದ ಮುಖಂಡ. ನವದೆಹಲಿಯಲ್ಲಿ ನಡೆದ ಆರ್ ಬಿಸಿಸಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

ಮೈಸೂರಲ್ಲಿ ಹೊತ್ತಿ ಉರಿದ ವಾಹನಗಳು

ಮೈಸೂರಲ್ಲಿ ಹೊತ್ತಿ ಉರಿದ ವಾಹನಗಳು

ಬಿಜೆಪಿ ಕಾರ್ಯಕರ್ತ ರಾಜುವಿನ ಬರ್ಬರ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿತ್ತು. ಅಲ್ಲದೇ ಈ ಸಮಯದಲ್ಲಿ ಆಟೋ, ಕಾರು ಹೀಗೆ ನಾನಾ ವಾಹನಗಳು ಒಳಗೊಂಡಂತೆ ಸಾರ್ವಜನಿಕ ಆಸ್ತಿಪಾಸ್ತಿ ಹಾಳಾಗಿವೆ.

ಅಭ್ಯಾಸದಲ್ಲಿ ಕೊಹ್ಲಿ

ಅಭ್ಯಾಸದಲ್ಲಿ ಕೊಹ್ಲಿ

ಭಾರತ ತಂಡದ ಆಟಗಾರ ವಿರಾಟ ಕೊಹ್ಲಿ ಮಾರ್ಚ್ 19ರಂದು ಧರ್ಮಶಾಲದಲ್ಲಿ ಪಾಕಿಸ್ತಾನದ ಜೊತೆ ನಡೆಯಲಿರುವ ಐಸಿಸಿ ಟಿ20 ಪಂದ್ಯಕ್ಕೆ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ.

ವಿಶ್ವಕಪ್ ಟಿ20

ವಿಶ್ವಕಪ್ ಟಿ20

ಬಾಂಗ್ಲಾದೇಶದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಜಹನಾರಾ ಆಲಂ ಅವರು ಐಸಿಸಿ ವಿಶ್ವಕಪ್ ಟಿ20 ಪಂದ್ಯದ ಪ್ರಯುಕ್ತ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ ಕೈಗೊಂಡಿದ್ದರು.

English summary
An autorickshaw burns in a stray violence by the BJP workers during a bandh called over the murder of a party leader, in Mysuru, India's Virat Kohli in action during a practice session in Nagpur on Monday ahead of the ICC T20 World cup match.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X