ಯುವತಿ ಬೆತ್ತಲಾಗಿಸಿ, ಖಾಸಗಿ ಭಾಗಕ್ಕೆ ಖಾರದ ಪುಡಿ ಎರಚಿಸಿದ ಪೊಲೀಸರು!
ವಿಚಾರಣೆ ವೇಳೆ ಯುವತಿಯನ್ನು ನಗ್ನವಾಗಿಸಿ, ಆಕೆಯ ಖಾಸಗಿ ಭಾಗಕ್ಕೆ ಬಿಯರ್ ಬಾಟಲಿ ತುರುಕಿದ್ದರು. ಆನಂತರ ಖಾಸಗಿ ಭಾಗಕ್ಕೆ ಖಾರದ ಪುಡಿ ಎರಚಿರುವುದಾಗಿ ದೂರು ನೀಡಿರುವ ಯುವತಿ.
ಶ್ರೀನಗರ, ಮೇ 10: ಕಳ್ಳತನದ ಆರೋಪದ ಮೇರೆಗೆ ಯುವತಿಯೊಬ್ಬಳನ್ನು ವಶಕ್ಕೆ ಪಡೆದುಕೊಂಡಿದ್ದ ಜಮ್ಮು ಹೊರವಲಯದಲ್ಲಿರುವ ಕನಾಚಕ್ ಪೊಲೀಸ್ ಠಾಣೆಯ ಪೊಲೀಸರು ಆಕೆಯೊಂದಿಗೆ ಅಮಾನುಷವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ.
ಶ್ರೀಮಂತರೊಬ್ಬರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ ಆಕೆಯ ಮೇಲೆ ಒಡವೆ ಕಳ್ಳತನದ ದೂರು ಬಂದಿದ್ದರಿಂದಾಗಿ ಆಕೆಯನ್ನು ಏಪ್ರಿಲ್ 30ರಂದು ಪೊಲೀಸರು ಬಂಧಿಸಿದ್ದರು.

ವಿಚಾರಣೆ ವೇಳೆ ಯುವತಿಯನ್ನು ನಗ್ನವಾಗಿಸಿ, ಆಕೆಯ ಖಾಸಗಿ ಭಾಗಕ್ಕೆ ಬಿಯರ್ ಬಾಟಲಿ ತುರುಕಿದ್ದರು. ಆನಂತರ ಖಾಸಗಿ ಭಾಗಕ್ಕೆ ಖಾರದ ಪುಡಿ ಎರಚಿರುವುದಾಗಿ ಆ ಯುವತಿ ದೂರು ನೀಡಿದ್ದಾಳೆ.
ಇದೇ ಪ್ರಕರಣದಲ್ಲಿ ಮೇ 10ರಂದು ಆಕೆಗೆ ಜಾಮೀನು ಸಿಕ್ಕಿದೆ. ನ್ಯಾಯಾಲಯದಿಂದ ಜಾಮೀನು ಪಡೆದ ಕೂಡಲೇ ಆ 28 ವಯಸ್ಸಿನ ಹುಡುಗಿ ಪೊಲೀಸರಿಂದ ತನಗೆ ಚಿತ್ರಹಿಂಸೆಯಾಗಿದೆ ಎಂದು ದೂರು ಸಲ್ಲಿಸಿದ್ದಾಳೆ.
ವಿಪರ್ಯಾಸವೆಂದರೆ, ಪೊಲೀಸರು ಹೀಗೆ ಚಿತ್ರಹಿಂಸೆ ನೀಡುವಾಗ ಮಹಿಳಾ ಪೇದೆಯೊಬ್ಬರೂ ಅದೇ ಪೊಲೀಸರ ಜತೆಯಲ್ಲಿ ಸೇರಿಕೊಂಡಿದ್ದರೆಂದು ಆಕೆ ಅವಲತ್ತುಕೊಂಡಿದ್ದಾಳೆ.












Click it and Unblock the Notifications