ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷ್ಕ್ರಿಯ ಪಿಎಫ್ ಖಾತೆಗೆ ಶೇ.8.8 ರಷ್ಟು ಬಡ್ಡಿ!

ಭವಿಷ್ಯನಿಧಿ ಖಾತೆದಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ನಿಷ್ಕ್ರಿಯ ಪಿಎಫ್ ಖಾತೆಗಳಿಗೆ ಜೀವ ತುಂಬಲು ಸರ್ಕಾರ ಮುಂದಾಗಿದೆ.

By Mahesh
|
Google Oneindia Kannada News

ನವದೆಹಲಿ, ನವೆಂಬರ್ 02: ಭವಿಷ್ಯನಿಧಿ ಖಾತೆದಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ನಿಷ್ಕ್ರಿಯ ಪಿಎಫ್ ಖಾತೆಗಳಿಗೆ ಜೀವ ತುಂಬಲು ಸರ್ಕಾರ ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ನಿಷ್ಕ್ರಿಯ ಖಾತೆಗಳಲ್ಲಿರುವ ಠೇವಣಿಗಳಿಗೆ ಶೇ.8.8 ರಷ್ಟು ಬಡ್ಡಿ ನೀಡುವ ಚಿಂತನೆ ಇದೆ. ಶೀಘ್ರವೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. [ಪಿಎಫ್ ವಿಥ್ ಡ್ರಾ ಮಾಡಿದರೆ ಟಿಡಿಎಸ್ ಕಟ್ಟಬೇಕಾಗಿಲ್ಲ!]

Inoperative EPF accounts to fetch 8.8 per cent interest

ಇಪಿಎಫ್ ನಿಷ್ಕ್ರಿಯ ಖಾತೆಗಳಿಗೆ 2011 ರಿಂದ ಬಡ್ಡಿ ನೀಡುತ್ತಿರಲಿಲ್ಲ. ಈಗ ಇಂಥ ಖಾತೆಗಳಿಗೆ ಜೀವ ತುಂಬುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಸೂಚನೆ ಮೇರೆಗೆ, ನಿಷ್ಕ್ರಿಯ ಪಿಎಫ್ ಖಾತೆ ಠೇವಣಿಗೆ ಬಡ್ಡಿ ನೀಡುವ ಮೂಲಕ ಅವುಗಳನ್ನು ಸಕ್ರಿಯಗೊಳಿಸಲಾಗುತ್ತದೆ. ಈ ಬಗ್ಗೆ ಶೀಘ್ರವೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದರು.

ಸರ್ಕಾರದ ಈ ಆಧಿಸೂಚನೆಯಿಂದ ಸುಮಾರು 9.70 ಕೋಟಿ ಕಾರ್ಮಿಕರಿಗೆ ನೆರವಾಗಲಿದೆ.(ಪಿಟಿಐ)

English summary
The government is all set to issue a notification authorising retirement fund body Employees Provident Fund Organisation (EPFO) to pay 8.8 per cent interest on “inoperative” accounts, Union Labour Minister Bandaru Dattatreya said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X