ಮಾಯಾವತಿಯವರನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ: INLD ಮುಖಂಡ

ಚಂಡಿಗಢ, ಅಕ್ಟೋಬರ್ 08: ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಐಎನ್ ಎಲ್ ಡಿ(ಇಂಡಿಯನ್ ನ್ಯಾಶನಲ್ ಲೋಕ್ ದಳ) ಪಕ್ಷದ ನಾಯಕ ಓಮ್ ಪ್ರಕಾಶ್ ಚೌಟಾಲಾ ಹೇಳಿದರು.

ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, 'ನಾವು ವಿಪಕ್ಷಗಳನ್ನೆಲ್ಲ ಒಂದುಗೂಡಿಸಲು ಹೋರಾಡುತ್ತೇವೆ. ಅದರಿಂದಾಗಿ ಬಿಎಸ್ಪಿ ನಾಯಕಿ ಮಾಯಾವತಿ ಪ್ರಧಾನಿಯಾಗಬಹುದು' ಎಂದರು.

ಈ ದೇಶದ ಜನರಿಗೆ ಸರಿಯಾದ ಆಹಾರ, ಮನೆ, ಶಿಕ್ಷಣ ಕೈಗೆಟಕುವಂತಾಗಬೇಕು ಎಂಬುದೇ ನನ್ನ ಕನಸು ಎಂದು ಅವರು ಹೇಳಿದದರು.

INLD President says he will work to make BSPs Mayawati next PM

ಹರ್ಯಾಣದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಓಮ್ ಪ್ರಕಾಶ್ ಚೌಟಾಲಾ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ನಡೆದ ಭ್ರಷ್ಟಾಚಾರದಿಂದಾಗಿ ಹತ್ತು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು.

ಐಎನ್ ಎಲ್ ಡಿ ಮತ್ತು ಬಿಎಸ್ಪಿ ಕೈಜೋಡಿಸಿದರೆ ಖಂಡಿತ ಅಧಿಕಾರಕ್ಕೆ ಬರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚೆಗಷ್ಟೇ ಕಾಂಗ್ರೆಸ್ ನೊಂದಿಗೆ ಕೈಜೋಡಿಸುವುದಿಲ್ಲ ಎಂದ ಮಾಯಾವತಿ, ನವೆಂಬರ್ -ಡಿಸೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿ ಶಾಕ್ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+