ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿನಂದನ್ಗೆ ಸಂಬಂಧಿಸಿದ ವಿಡಿಯೋ ಡಿಲೀಟ್ ಮಾಡಲು ಯೂಟ್ಯೂಬ್‌ಗೆ ಮನವಿ

|
Google Oneindia Kannada News

ನವದೆಹಲಿ, ಫೆಬ್ರವರಿ 28: ನಿನ್ನೆ ಪಾಕ್ ವಾಯುಪಡೆಯನ್ನು ಹಿಮ್ಮೆಟ್ಟಿಸುವ ಭರದಲ್ಲಿ ಪಾಕಿಸ್ತಾನ ಸೈನಿಕರ ಬಳಿ ಸೆರೆಯಾಗಿದ್ದ ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಲು ಒಪ್ಪಿದೆ. ಆದರೆ ಅಭಿನಂದನ್ ಅವರ ವಿಡಿಯೋ ಬಿಡುಗಡೆ ಮಾಡುವ ಮೂಲಕ ಅದು ಜಿನೆವಾ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ಭಾರತ ಆರೋಪಿಸಿದೆ.

ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ.... ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ....

ಅಭಿನಂದನ್ ಅವರ ಹಲವು ವಿಡಿಯೋಗಳನ್ನು ಪಾಕಿಸ್ತಾನ ಸೇನೆಯು ಬಿಡುಗಡೆ ಮಾಡಿತ್ತು. ಇದರ ವಿರುದ್ಧ ಭಾರತವು ಆಕ್ಷೇಪಣೆ ಎತ್ತಿತ್ತು.

Breaking: ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆBreaking: ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆ

ಪಾಕಿಸ್ತಾನ ಸೇನೆಯು ಬಿಡುಗಡೆ ಮಾಡಿದ್ದ 9 ವಿಡಿಯೋಗಳನ್ನು ಡಿಲೀಟ್ ಮಾಡಬೇಕೆಂದು ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆಯು ಯೂಟ್ಯೂಬ್‌ಗೆ ಮನವಿ ಮಾಡಿದ್ದು, ವಿಡಿಯೋ ಬಿಡುಗಡೆ ಮಾಡಿರುವ ಪಾಕಿಸ್ತಾನದ ಕ್ರಮವನ್ನು ಖಂಡಿಸಿದೆ.

Information department requested Youtube to delete video of Abhinandan

ಅಭಿನಂದನ್ ಅವರನ್ನು ಪಾಕ್ ಆಶ್ರಮಿತ ಕಾಶ್ಮೀರಿಗಳು ಥಳಿಸುತ್ತಿರುವ ವಿಡಿಯೋ, ಅಭಿನಂದನ್ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಅವರನ್ನು ಸೈನಿಕರು ಪ್ರಶ್ನೆ ಮಾಡುತ್ತಿರುವ ವಿಡಿಯೋ, ಅಭಿನಂದನ್ ಅವರು ಟೀ ಕುಡಿಯುತ್ತಾ ಪಾಕ್ ಸೇನೆ ಜನರಲ್ ಅವರ ಜೊತೆ ಮಾತನಾಡುತ್ತಿರುವ ವಿಡಿಯೋ ಇನ್ನೂ ಹಲವು ವಿಡಿಯೋ ಮತ್ತು ಚಿತ್ರಗಳು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ

ಈ ವಿಡಿಯೋಗಳಲ್ಲಿ ಕೆಲವನ್ನು ಪಾಕಿಸ್ತಾನದ ಸೇನೆಯೇ ಬಿಡುಗಡೆ ಮಾಡಿತ್ತು. ಇದು ಜಿನೆವಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ಭಾರತವು ಆಕ್ಷೇಪಣೆ ಸಲ್ಲಿಸಿತ್ತು. ಮತ್ತೆ ಅಭಿನಂದನ್‌ ಮೇಲೆ ಹಲ್ಲೆಗೆ ಅವಕಾಶ ನೀಡಿದ್ದನ್ನು ತೀವ್ರವಾಗಿ ಖಂಡಿಸಿದೆ.

English summary
Information department of India requested youtube to delete video of IAF wing commander Abhinandan's video which released by Pakistan army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X