ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರ್ತು ಪರಿಸ್ಥಿತಿ ಹೇರಿಕೆಗೆ ಸಾಕ್ಷಿಯಾಗಿದ್ದ ಇಂದಿರಾ ಆಪ್ತ ಆರ್‌.ಕೆ. ಧವನ್ ನಿಧನ

|
Google Oneindia Kannada News

ನವದೆಹಲಿ, ಆಗಸ್ಟ್ 6: ತುರ್ತು ಪರಿಸ್ಥಿತಿ ಹಾಗೂ ಇಂದಿರಾಗಾಂಧಿ ಅವರ ಹತ್ಯೆಯ ಸಾಕ್ಷಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಜೇಂದ್ರ ಕುಮಾರ್ ಧವನ್ (81) ಸೋಮವಾರ ಸಂಜೆ ಏಳು ಗಂಟೆ ಸುಮಾರಿಗೆ ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಕಳೆದ ಮಂಗಳವಾರ ಬಿಎಲ್ ಕಪೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

indira gandhi close aide rk dhawan passes away

ಕೇಂದ್ರದ ಮಾಜಿ ಸಚಿವರಾಗಿದ್ದ ಆರ್‌.ಕೆ. ಧವನ್, ಇಂದಿರಾಗಾಂಧಿ ಅವರಿಗೆ ಪರಮಾಪ್ತರಾಗಿದ್ದರು. 1962ರಲ್ಲಿ ಇಂದಿರಾಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಧವನ್, 1984ರಲ್ಲಿ ಇಂದಿರಾ ಹತ್ಯೆಯಾಗುವವರೆಗೂ ಅವರ ಜತೆಗಿದ್ದರು.

1975-77ರ ಅವಧಿಯಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಸರ್ಕಾರ ನಡೆಸುವಲ್ಲಿ ಅಂಬಿಕಾ ಸೋನಿ ಹಾಗೂ ಕಮಲ್ ನಾಥ್ ಅವರೊಂದಿಗೆ ಧವನ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು.

ಈಗ ಪಾಕಿಸ್ತಾನಕ್ಕೆ ಸೇರಿರುವ ಚಿನಿಯೋಟ್‌ನಲ್ಲಿ 1937ರಲ್ಲಿ ಜನಿಸಿದ್ದರು. ಜೀವನದುದ್ದಕ್ಕೂ ಅವಿವಾಹಿತರಾಗಿದ್ದ ಧವನ್ 2012ರ ಜುಲೈ 16ರಂದು 74ನೇ ವಯಸ್ಸಿನಲ್ಲಿ ಅಚಲಾ ಅವರನ್ನು ವಿವಾಹವಾಗಿದ್ದರು.

English summary
senior leader RK Dhawan (81) passed away on Monday due to age related illness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X