ವಿಶೇಷ ವರ್ತನೆಯ ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಣೆ: ಇಂಡಿಗೋ ಏರ್‌ಲೈನ್ಸ್‌ಗೆ 5 ಲಕ್ಷ ದಂಡ
ನವದೆಹಲಿ, ಮೇ 28: ಕೆಲ ವಾರಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಇಂಡಿಗೋ ಏರ್ಲೈನ್ಸ್ (IndiGo Airlines) ಸಿಬ್ಬಂದಿಯ ಅನುಚಿತ ವರ್ತನೆಯ ಪ್ರಕರಣದಲ್ಲಿ ಆ ಸಂಸ್ಥೆಗೆ 5 ಲಕ್ಷ ರೂ ದಂಡ ವಿಧಿಸಲಾಗಿದೆ.
ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿ ವಿಶೇಷ ವರ್ತನೆಯ ಬಾಲಕನೊಬ್ಬನಿಗೆ ವಿಮಾನ ಪ್ರಯಾಣದ ಅವಕಾಶ ನಿರಾಕರಿಸಿದ್ದರೆಂಬ ಆರೋಪ ಇರುವ ಪ್ರಕರಣ ಇದಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA- Directorate General of Civial Aviation) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿ ಅತಿರೇಕದ ನಿರ್ಧಾರ ತೆಗೆದುಕೊಳ್ಳುವ ಬದಲು ತಾಳ್ಮೆ ವಹಿಸಬಹುದಿತ್ತು ಎಂದು ಹೇಳಿ 5 ಲಕ್ಷ ರೂ ದಂಡ ವಿಧಿಸುವ ನಿರ್ಧಾರ ಪ್ರಕಟಿಸಿದೆ.
ಈ ಘಟನೆಯ ತನಿಖೆ ನಡೆದಿದ್ದು, ಅದರಲ್ಲಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯ ಗ್ರೌಂಡ್ ಸ್ಟಾಫ್‌ನವರು ಅನುಚಿತ ಮತ್ತು ಅನವಶ್ಯಕ ವರ್ತನೆ ತೋರಿದ ಸಂಗತಿ ಋಜುವಾತಾಗಿತ್ತು.

"ಇಂಡಿಗೋದ ಗ್ರೌಂಡ್ ಸ್ಟಾ್‌ನವರು ವಿಶೇಷ ಮಗುವಿನ ಜೊತೆ ಹೇಗೆ ವರ್ತಿಸಬೇಕೆಂದು ಗೊತ್ತಿಲ್ಲದೆ ಅತಿರೇಕವಾಗಿ ನಡೆದುಕೊಂಡರು. ಹೆಚ್ಚು ತಾಳ್ಮೆಯಿಂದ ಪರಿಸ್ಥಿತಿ ನಿರ್ವಹಿಸಿದ್ದರೆ ಬಾಲಕನನ್ನು ಸಮಾಧಾನಗೊಳಿಸಬಹುದಿತ್ತು" ಎಂದು ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಕೆಲ ವಿಶೇಷ ಪರಿಸ್ಥಿತಿಯಲ್ಲಿ ಅಸಾಧಾರಣ ರೀತಿಯ ಸ್ಪಂದನೆಯ ಅಗತ್ಯತೆ ಇರುತ್ತದೆ. ಆದರೆ, ಇಂಡಿಗೋ ಸಂಸ್ಥೆಯ ನೌಕರರು ಪರಿಸ್ಥಿತಿ ನಿಭಾಯಿಸಲು ವಿಫಲರಾದರು. ವಿಮಾನಯಾನ ನಿಯಮಗಳ ಆಶಯಕ್ಕೆ ತಕ್ಕಂತೆ ಅವರು ನಡೆದುಕೊಳ್ಳಲಿಲ್ಲ" ಎಂದು ಈ ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?
ಮೇ 7ರಂದು ಮನೀಶಾ ಗುಪ್ತ ಎಂಬ ವ್ಯಕ್ತಿಯೊಬ್ಬರು ರಾಂಚಿ-ಹೈದರಾಬಾದ್ ವಿಮಾನದಲ್ಲಿ ನಡೆದಿದ್ದ ಪ್ರಸಂಗವನ್ನು ವಿವರಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದರು. ವಿಮಾನ ನಿಲ್ದಾಣಕ್ಕೆ ಬಂದಿದ್ದ ಒಂದು ಮಗುವಿನ ವಿಚಾರದ ಬಗ್ಗೆ ಇಂಡಿಗೋ ಸಂಸ್ಥೆಯ ಮ್ಯಾನೇಜರ್ ತಾಳ್ಮೆ ಕಳೆದುಕೊಂಡವರಂತೆ ಕಿರಿಚುತ್ತಿದ್ದರೆಂದು ಈಕೆ ತನ್ನ ಪೋಸ್ಟ್‌ನಲ್ಲಿ ವಿವರಿಸಿದ್ದರು.
ಹುಡುಗ ಬಹಳ ರಚ್ಚೆ ಹಿಡಿದಿದ್ದಾನೆ. ನಿಯಂತ್ರಿಸಲು ಆಗುತ್ತಿಲ್ಲ ಎಂದು ಹೇಳಿ ಆ ಬಾಲಕ ಹಾಗೂ ಆತನ ಕುಟುಂಬಕ್ಕೆ ವಿಮಾನ ಹತ್ತಲೂ ಸಿಬ್ಬಂದಿ ಅವಕಾಶ ಕೊಡಲಿಲ್ಲ. ಅದೇ ವಿಮಾನದ ಬೇರೆ ಪ್ರಯಾಣಿಕರು ಮನವಿ ಮಾಡಿಕೊಂಡರೂ ಸಿಬ್ಬಂದಿ ಕಿವಿಗೊಡಲಿಲ್ಲ ಎಂದು ಮನೀಶಾ ಗುಪ್ತ ಬೇಸರ ವ್ಯಕ್ತಪಡಿಸಿದ್ದರು.

ಇಂಡಿಗೋ ಸಂಸ್ಥೆ ಹೇಳುವುದೇನು?
"ಪರಿಸ್ಥಿತಿಯು ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ಚೆಕ್-ಇನ್‌ನಿಂದ ಹಿಡಿದು ಬೋರ್ಡಿಂಗ್ ಪ್ರಕ್ರಿಯೆವರೆಗೂ ನಮಗೆ ಆ ಕುಟುಂಬವನ್ನು ವಿಮಾನ ಹತ್ತಿಸುವ ಉದ್ದೇಶವೇ ಇತ್ತು. ಆದರೆ, ಬೋರ್ಡಿಂಗ್ ಜಾಗದಲ್ಲಿ ಆ ಹುಡುಗ ಬಹಳ ಗಾಬರಿಗೊಂಡಿದ್ದ. ನಮ್ಮ ಪ್ರಯಾಣಿಕರೊಂದಿಗೆ ಬಹಳ ಸೌಜನ್ಯದಿಂದ ನಡೆದುಕೊಳ್ಳುವುದು ನಮಗೆ ಬಹಳ ಮುಖ್ಯವೇನೋ ಹೌದು. ಆದರೆ, ಆ ಪರಿಸ್ಥಿತಿಯಲ್ಲಿ ಸುರಕ್ಷತಾ ದೃಷ್ಟಿಯಿಂದ ಆ ಕುಟುಂಬಕ್ಕೆ ವಿಮಾನ ಹತ್ತಲು ಅವಕಾಶ ಕೊಡದೇ ಇರುವ ಕಠಿಣ ನಿರ್ಧಾರಕ್ಕೆ ಬರಬೇಕಾಯಿತು" ಎಂದು ಇಂಡಿಗೋ ಏರ್‌ಲೈನ್ಸ್ ಸಿಇಒ ರೊಣೊಜೊಯ್ ದತ್ತ (Ronojoy Dutta) ಸ್ಪಷ್ಟನೆ ನೀಡಿದ್ದಾರೆ.
ಒಂದು ವೇಳೆ ವಿಮಾನ ಹತ್ತಿದರೆ ಅಲ್ಲಿ ಆ ಹುಡುಗ ಇನ್ನಷ್ಟು ಗಾಬರಿಗೊಂಡು ಏನಾದರೂ ಹೆಚ್ಚೂಕಡಿಮೆ ಆಗಿಬಿಟ್ಟೀತೆಂಬ ಮುಂಜಾಗ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದಿದ್ದಾರೆ. ಆ ಬಾಲಕ ಮತ್ತವನ ಕುಟುಂಬಕ್ಕೆ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಸಂಸ್ಥೆಯೇ ವ್ಯವಸ್ಥೆ ಮಾಡಿತ್ತು. ಮರುದಿನ ಬೆಳಗ್ಗೆ ಬೇರೆ ವಿಮಾನದಲ್ಲಿ ಆ ಕುಟುಂಬ ತಮ್ಮ ಸ್ಥಳಕ್ಕೆ ಹೋದರೆನ್ನಲಾಗಿದೆ.
ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದ ಬಳಿಕ ಡಿಜಿಸಿಎ ತನಿಖೆ ನಡೆಸಿದೆ. ಅದರಲ್ಲಿ ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿಯಿಂದ ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈಗ ಆ ಸಂಸ್ಥೆಗೆ 5 ಲಕ್ಷ ರೂ ದಂಡ ವಿಧಿಸಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ.
(ಒನ್ಇಂಡಿಯಾ ಸುದ್ದಿ)
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications