Get Updates
Get notified of breaking news, exclusive insights, and must-see stories!

ಕಾಶ್ಮೀರಕ್ಕೆ ಕನ್ಯಾಕುಮಾರಿ ಬೆಸೆಯುವ NH 44: 3745 ಕಿಮೀ ಉದ್ದದ ಈ ಹೆದ್ದಾರಿ 11 ರಾಜ್ಯಗಳ ಜೀವನಾಡಿ -ಇಲ್ಲಿದೆ ಟ್ರಾವೆಲ್ ಗೈಡ್

National Highway 44: ಹೆದ್ದಾರಿಗಳು ಆ ದೇಶದ ರಸ್ತೆ ಮೂಲ ಸೌಕರ್ಯಗಳ ಸಂಕೇತವಾಗಿವೆ. ಒಂದು ದೇಶದ ಆರ್ಥಿಕ ಪ್ರಗತಿ, ಕೈಗಾರಿಕೆ ಬೆಳವಣಿಗೆ, ಸಾರಿಗೆ ಸೇವೆ ಸುಧಾರಣೆ ಮತ್ತು ಪ್ರವಾಸೋದ್ಯಮ ವೃದ್ಧಿಗೆ ಹೆದ್ದಾರಿಗಳು ಅತಿ ಮುಖ್ಯ. ಈ ವಿಷಯದಲ್ಲಿ ಭಾರತವು ಅತ್ಯುತ್ತಮ ಮತ್ತು ಬೃಹತ್ ರಾಷ್ಟ್ರೀಯ ಹೆದ್ದಾರಿ ಜಾಲವನ್ನು (India's Highway Network) ಹೊಂದಿದೆ. ಈ ಪೈಕಿ ನಾವು ದೇಶ ಮಧ್ಯಭಾಗ ವಿಭಜಿಸಿ ಉತ್ತರ ತುದಿಯಿಂದ ದಕ್ಷಿಣ ಭಾರತದ ತುದಿಯವರೆಗೆ ಸಂಪರ್ಕಿಸುವ ಪ್ರಮುಖ ಹಾಗೂ ರಾಷ್ಟ್ರದ ಅತಿ ಉದ್ದದ ಹೆದ್ದಾರಿ (India's Longest Highway - NH 44) ಕುರಿತು ಈ ಲೇಖನದಲ್ಲಿ ತಿಳಿಯಲಿದ್ದೇವೆ.

ದೇಶದ ಅತಿ ಉದ್ದದ ಈ ರಾಷ್ಟ್ರೀಯ ಹೆದ್ದಾರಿ 44 ಉತ್ತರ ಭಾರತದ ಕಾಶ್ಮೀರದ ಶ್ರೀನಗರದಿಂದ ದಕ್ಷಿಣ ಭಾರತದ ತಮಿಳುನಾಡಿನ ಕನ್ಯಾಕುಮಾರಿವರೆಗೆ ಸಂಚಾರ ಪ್ರಯೋಜನ ಒದಗಿಸುತ್ತಿದೆ. ಈ ಹೆದ್ದಾರಿಯ ಉದ್ದ ಎಷ್ಟು? ಒಟ್ಟು ಎಷ್ಟು ರಾಜ್ಯಗಳಲ್ಲಿ ಸಾಗುತ್ತದೆ? ಯಾವ ಮಹಾನಗರಗಳಲ್ಲಿ ಹಾದು ಹೋಗುತ್ತದೆ? ಕರ್ನಾಟಕವನ್ನು ಸಂಧಿಸುವ ಸ್ಥಳ ಯಾವುದು? ವೈಶಿಷ್ಟ್ಯ ಹಾಗೂ ಒಂದು ತುದಿಯಿಂದ ಇನ್ನೊಂದು ತುದಿಗೆ ಈ ರಸ್ತೆಯಲ್ಲಿ ಸಾಗಲು ಎಷ್ಟು ಸಮಯ ಹಿಡಿಯುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

India s Longest Highway

ವಿಶ್ವದ 22ನೇ ಅತೀ ದೊಡ್ಡ ಹೆದ್ದಾರಿ

ಸುಮಾರು 3745 ಕಿಲೋಮೀಟರ್ (ಸುಮಾರು 2,555 ಮೈಲುಗಳು) ಉದ್ದದ ಈ ರಾಷ್ಟ್ರೀಯ ಹೆದ್ದಾರಿಯನ್ನು ಈಗ NH 44 ಎಂದು ಕರೆಯಲಾಗುತ್ತಿದೆ. ಈ ಮೊದಲು ಇದನ್ನು NH 7 ಎಂದು ಕರೆಯಲಾಗುತ್ತಿತ್ತು. ಇದು ಕೇವಲ ಭಾರತದ ಪ್ರಮುಖ ಮತ್ತು ಅತಿ ಉದ್ದದ ಹೆದ್ದಾರಿ ಮಾತ್ರವಾಗಿರದೇ ವಿಶ್ವದ ಅತಿ ಉದ್ದದ ಹೆದ್ದಾರಿಗಳ ಪಟ್ಟಿಗೂ ಸೇರಿದೆ. ಪ್ರಪಂಚದಲ್ಲಿರುವ ಬೇರೆ ಬೇರೆ ದೇಶಗಳಲ್ಲಿರುವ ಉದ್ದನೆಯ ಹೆದ್ದಾರಿ ರಸ್ತೆಗಳ ಪೈಕಿ ಭಾರತದ ಈ ಹೈವೇ 44 (ಶ್ರೀನಗರ-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿ) 22ನೇ ಸ್ಥಾನ ಪಡೆದುಕೊಂಡಿದೆ.

ರಾಷ್ಟ್ರೀಯ ಹೆದ್ದಾರಿ 44 ರ ಮಹತ್ವವೇನು?

ಪ್ರತಿ ರಸ್ತೆ, ಹೆದ್ದಾರಿಗೆ ಇರುವ ಮಹತ್ವದ ಪಾತ್ರವೇ ಇದಕ್ಕಿದೆ. ಅಂದರೆ ಒಂದು ರಾಷ್ಟ್ರೀಯ ಹೆದ್ದಾರಿಯು ಊರು, ತಾಲೂಕು, ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ. ಆ ರಾಜ್ಯದ ಅನೇಕ ಪ್ರದೇಶಗಳಿಗೆ, ಲಕ್ಷಾಂತರ ಜನರಿಗೆ ದೈನಂದಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಇದರಿಂದ ಆಯಾ ಪ್ರದೇಶಗಳ ಅಭಿವೃದ್ಧಿಯೂ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಅದೇ ರೀತಿ ನಾಲ್ಕು ಪಥ, ಆರು ಮತ್ತು ಎಂಟು ಪಥದ ರಾಷ್ಟ್ರೀಯ ಹೆದ್ದಾರಿಗಳಿವೆ. ಅವುಗಳಲ್ಲಿ ಕೆಲವು ಒಂದು ರಾಜ್ಯಕ್ಕೆ ಸೀಮೀತವಾಗಿರುವುವು ಇವೆ. ಎರಡು- ಮೂರು ರಾಜ್ಯಗಳ ಮೂಲಕ ಹಾದು ಹೋಗುವ ಹೆದ್ದಾರಿಗಳು ಇವೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (NH 4) ಕರ್ನಾಟಕ-ಮಹಾರಾಷ್ಟ್ರದ ನಡುವೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ರೀತಿ NH-44 ಬರೋಬ್ಬರಿ 11 ರಾಜ್ಯಗಳ ಕೋಟ್ಯಂತರ ಜನರಿಗೆ ಸಂಪರ್ಕ ಕೊಂಡಿಯಾಗಿದೆ. ದೇಶದ ಶ್ರೀನಗರ-ಕನ್ಯಾಕುಮಾರಿ ಉದ್ದಕ್ಕೂ ಸುಗಮ ಸಂಪರ್ಕ ಕಲ್ಪಿಸುತ್ತದೆ. ಒಟ್ಟು ಸುಮಾರು 30 ಮಹಾನಗರಗಳಿಗೆ ಇದೊಂದೇ ಹೆದ್ದಾರಿ ಹಾದು ಹೋಗುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ.

ಹೈವೇ 44ರ ಸೇವೆ ಪಡೆಯುವ 11 ರಾಜ್ಯಗಳು

ಉತ್ತರದಲ್ಲಿ ಶ್ರೀನಗರದಿಂದ ಆರಂಭವಾಗುವ ಹೈವೇ ಸುಮಾರು 3745 ಕಿಲೋಮೀಟರ್ (ಸುಮಾರು 2,555 ಮೈಲುಗಳು) ಉದ್ದವಿದೆ. ತಮಿಳನಾಡಿನ ಕನ್ಯಾಕುಮಾರಿಯವರಿಗೆ ವಿಸ್ತರಿಸಿರುವ ಇದನ್ನು ದೇಶದ ಪ್ರಮುಖ ಉತ್ತರ-ದಕ್ಷಿಣ ಕಾರಿಡಾರ್ (North-South Corrridor) ಅಂತಲೂ ಕರೆಯಲಾಗುತ್ತದೆ. ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ (ರಾಯಲಸೀಮಾ) ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಸಾಗಿ ಬರುತ್ತದೆ. ನಿತ್ಯ ಲಕ್ಷಾಂತರ ಜನರ ಸಂಚಾರಕ್ಕೆ ಅನುಕೂಲ ಒದಗಿಸಿದೆ.

ಏಳು ರಾಷ್ಟ್ರೀಯ ಹೆದ್ದಾರಿಗಳ ವಿಲೀನ

ದೇಶದಲ್ಲಿ ಅಸ್ತಿತ್ವದಲ್ಲಿರುವ ಏಳು ರಾಷ್ಟ್ರೀಯ ಹೆದ್ದಾರಿಗಳನ್ನು ವಿಲೀನಗೊಳಿಸುವ ಮೂಲಕ NH 44 ಕಾರ್ಯರೂಪಕ್ಕೆ ಬಂದಿದೆ. ಆ ಮೂಲಕ ಉದ್ದಕ್ಕೂ ಒಂದೇ ಮಾರ್ಗವಾಗಿ ನಿರ್ಮಿಸಲಾಗಿದೆ. ದೇಶದ ಎರಡು ತುದಿಗಳಿಗೆ ನೇರ ಸೇವೆ ಒದಗಿಸುವ ಪ್ರಮುಖ ಹೆದ್ದಾರಿಯು ರಸ್ತೆ ಸಾರಿಗೆ ಸಂಚಾರ, ಸರಕು ಸಾಗಣೆ, ದೇಶದ ಆರ್ಥಿಕ ಪ್ರಗತಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ.

ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಪ್ರಮುಖ ನಗರಗಳು

ಹೈವೇ 44ರ ಮಾರ್ಗದಲ್ಲಿ 'ಜಮ್ಮು, ಪಠಾಣ್‌ಕೋಟ್, ಜಲಂಧರ್, ಲುಧಿಯಾನ, ಅಂಬಾಲ, ಪಾಣಿಪತ್, ದೆಹಲಿ, ಆಗ್ರಾ, ಗ್ವಾಲಿಯರ್, ನಾಗ್ಪುರ, ಹೈದರಾಬಾದ್, ಕರ್ನೂಲ್, ಬೆಂಗಳೂರು, ಸೇಲಂ ಮತ್ತು ಮಧುರೈ' ಸೇರಿ ಒಟ್ಟು 30 ಮಹಾನಗರಗಳು ಬರುತ್ತವೆ. ಈ ಮಹಾನಗರಗಳಿಗೆ ಭಾರತದಾದ್ಯಂತ ವ್ಯಾಪಾರ, ಪ್ರಯಾಣ ಮತ್ತು ಆರ್ಥಿಕ ಸಂಪರ್ಕ ಕಲ್ಪಿಸುವಲ್ಲಿ ಹೆದ್ದಾರಿ ನಿರ್ಣಾಯಕ ಪಾತ್ರ ವಹಿಸಿದೆ. ಈ ಹೆದ್ದಾರಿಯು ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿರುವ ವೈವಿಧ್ಯಮಯ ಪ್ರದೇಶಗಳನ್ನು ಸಂಪರ್ಕಿಸುವುದು ಮತ್ತೊಂದು ವಿಶೇಷ. ಶ್ರೀನಗರದಿಂದ ಕನ್ಯಾಕುಮಾರಿಗೆ ಇರುವ ಈ ಹೆದ್ದಾರಿಯು ಭಾರತದ ರಸ್ತೆ ಮೂಲಸೌಕರ್ಯ ಹಾಗೂ ವಿಶಾಲತೆ ಮತ್ತು ವೈವಿಧ್ಯತೆಯ ಸಂಕೇತವಾಗಿದೆ.

ಶ್ರೀನಗರಿಂದ-ಕನ್ಯಾಕುಮಾರಿವರೆಗಿನ ಸಂಚಾರ ಸಮಯ

ದೆಹಲಿ, ಲಡಾಖ್, ಕಾಶ್ಮೀರದಂತಹ ಪ್ರೇಕ್ಷಣೀಯ ತಾಣಗಳಿಗೆ ಬೈಕ್, ಕಾರು ಮೂಲಕ ತೆರಳುವುದು, ದೇಶ ಪರ್ಯಟನೆ ಮಾಡುವವರು ಇದ್ದಾರೆ. ಇಂತಹ ಪ್ರವಾಸದ ಕ್ರೇಜ್ ಇತ್ತೀಚೆಗೆ ಯುವ ಸಮೂಹದಲ್ಲಿ ಹೆಚ್ಚಾಗುತ್ತಿದೆ. ಅದೇ ರೀತಿ ನೀವು ಈ ಹೆದ್ದಾರಿಯ ಒಂದು ತುದಿಯನ್ನು ಮತ್ತೊಂದು ತುದಿಗೆ ಬೈಕ್ ಅಥವಾ ಕಾರಿನಲ್ಲಿ ತಲುಪಲು ಇಚ್ಛಿಸಿದರೆ ನಿರಂತರ ಪ್ರಯಾಣ ಮಾಡಬೇಕಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಈ ಹೆದ್ದಾರಿಯಲ್ಲಿ ಸಂಚರಿಸಲು ಬರೋಬ್ಬರಿ 57 ಗಂಟೆಗಳು ಬೇಕಾಗುತ್ತದೆ. ರಾತ್ರಿ ತಂಗುವಿಕೆ, ಕೊಂಚ ವಿರಾಮವೂ ಸೇರಿ ಹಗಲಿನಲ್ಲಿ ನಿಲುಗಡೆ ಇಲ್ಲದೆ ವಾಹನ ಓಡಿಸಿದರೆ 3-4 ದಿನಗಳು ಬೇಕಾಗುತ್ತದೆ. ಹೈವೇ ನಗರಗಳನ್ನು ಪ್ರವೇಶಿಸುವ ಹಿನ್ನೆಲೆಯಲ್ಲಿ ಆಯ ಆನಗರಗಳಲ್ಲಿ ದಟ್ಟಣೆಯಲ್ಲಿ ಸಿಲುಕಿದರೆ ಹೆಚ್ಚು ಸಮಯ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.

ಭಾರತದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಬಗ್ಗೆ ನೀವು ತಿಳಿಯಬಯಸುವ ಮಾಹಿತಿ (FAQs)

1. ಭಾರತದ ಅತ್ಯಂತ ಉದ್ದದ ರಾಷ್ಟ್ರೀಯ ಹೆದ್ದಾರಿ ಯಾವುದು?

ರಾಷ್ಟ್ರೀಯ ಹೆದ್ದಾರಿ 44 (NH 44) ಭಾರತದ ಅತ್ಯಂತ ಉದ್ದದ ಹೆದ್ದಾರಿಯಾಗಿದೆ. ಇದು ಸುಮಾರು 4,112 ಕಿಲೋಮೀಟರ್ ಉದ್ದವಿದ್ದು, ದೇಶದ ಉತ್ತರ ತುದಿಯಿಂದ ದಕ್ಷಿಣ ತುದಿಯವರೆಗೆ ಸಂಪರ್ಕ ಕಲ್ಪಿಸುತ್ತದೆ.

2. ಈ ಉದ್ದದ ಹೆದ್ದಾರಿಯು (NH 44) ಎಲ್ಲಿಂದ ಎಲ್ಲಿಯವರೆಗೆ ಸಾಗುತ್ತದೆ?

ಇದು ಉತ್ತರದಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಆರಂಭವಾಗಿ, ದಕ್ಷಿಣದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಸಾಗುತ್ತದೆ.

3. ಎರಡನೇ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಯಾವುದು?

ರಾಷ್ಟ್ರೀಯ ಹೆದ್ದಾರಿ 27 (NH 27) ಭಾರತದ ಎರಡನೇ ಅತಿ ಉದ್ದದ ಹೆದ್ದಾರಿಯಾಗಿದೆ. ಇದು ಗುಜರಾತ್‌ನ ಪೋರಬಂದರ್‌ನಿಂದ ಅಸ್ಸಾಂನ ಸಿಲ್ಚಾರ್‌ವರೆಗೆ ಸುಮಾರು 3,507 ಕಿ.ಮೀ ಉದ್ದವಿದೆ. ಇದು ದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಜೋಡಿಸುತ್ತದೆ.

4. NH 44 ಹೆದ್ದಾರಿಯು ಎಷ್ಟು ರಾಜ್ಯಗಳ ಮೂಲಕ ಹಾದುಹೋಗುತ್ತದೆ?

ಇದು ಒಟ್ಟು 11 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಮೂಲಕ ಹಾದುಹೋಗುತ್ತದೆ. ಅವೆಂದರೆ; ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು.

5. ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ (Expressway) ಯಾವುದು?

ಪ್ರಸ್ತುತ ದಿಲ್ಲಿ-ಮುಂಬೈ ಎಕ್ಸ್‌ಪ್ರೆಸ್‌ವೇ (Delhi-Mumbai Expressway) ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ. ಇದರ ಒಟ್ಟು ಉದ್ದ ಸುಮಾರು 1,386 ಕಿ.ಮೀ.

6. 'ಸುವರ್ಣ ಚತುಷ್ಕೋನ' (Golden Quadrilateral) ಯೋಜನೆ ಎಂದರೇನು?

ಇದು ಭಾರತದ ನಾಲ್ಕು ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳನ್ನು ಸಂಪರ್ಕಿಸುವ ಬೃಹತ್ ಹೆದ್ದಾರಿ ಯೋಜನೆಯಾಗಿದೆ. ಇದು ದೇಶದ ಆರ್ಥಿಕ ಪ್ರಗತಿಗೆ ಬೆನ್ನೆಲುಬಾಗಿದೆ.

7. ಹೆದ್ದಾರಿಗಳ ಅಭಿವೃದ್ಧಿಯಲ್ಲಿ 'ಭಾರತ್‌ಮಾಲಾ ಪರಿಯೋಜನೆ'ಯ ಪಾತ್ರವೇನು?

ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ದೇಶಾದ್ಯಂತ ಹೊಸ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ಮತ್ತು ಆರ್ಥಿಕ ಕಾರಿಡಾರ್‌ಗಳನ್ನು ನಿರ್ಮಿಸುವ ಮೂಲಕ ಸರಕು ಸಾಗಣೆ ಮತ್ತು ಪ್ರಯಾಣದ ವೇಗವನ್ನು ಹೆಚ್ಚಿಸುವ ಗುರಿ ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+