Get Updates
Get notified of breaking news, exclusive insights, and must-see stories!

ಭಾರತದ ಹಜ್ ಕೋಟಾ ಎರಡು ಲಕ್ಷಕ್ಕೆ ಏರಿಕೆ; ಅಧಿಕೃತ ಘೋಷಣೆ

ನವದೆಹಲಿ, ಏಪ್ರಿಲ್ 19: ಸೌದಿ ಅರೇಬಿಯಾವು ಭಾರತದ ಹಜ್ ಕೋಟಾವನ್ನು ಎರಡು ಲಕ್ಷಕ್ಕೆ ಏರಿಸಿದ್ದು, ಇದರಿಂದ ದೊಡ್ಡ ರಾಜ್ಯಗಳಾದ ಉತ್ತರಪ್ರದೇಶ, ಪಶ್ಚಿಮ ಬಂಗಾಲ ಮತ್ತು ಬಿಹಾರನಿಂದ ಯಾತ್ರೆ ಕೈಗೊಳ್ಳುವವರಿಗೆ ಅನುಕೂಲ ಆಗಲಿದೆ ಎಂದು ಅಲ್ಪಸಂಖ್ಯಾತ ಸಚಿವಾಲಯದ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾರತ ಹಜ್ ಕೋಟಾ ಹೆಚ್ಚಿಸುವ ಬಗ್ಗೆ ಶುಕ್ರವಾರದಂದು ಸೌದಿ ಅರೇಬಿಯಾ ಸರಕಾರವು ಅಧಿಕೃತವಾದ ಆದೇಶ ಹೊರಡಿಸಿದೆ. ಕಳೆದ ಫೆಬ್ರವರಿಯಲ್ಲಿ ಸೌದಿಯ ರಾಜ ಮೊಹ್ಮದ್ ಬಿನ್ ಸಲ್ಮಾನ್ ಅವರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಹಜ್ ಯಾತ್ರಿಕರ ಕೋಟಾವನ್ನು ಇಪ್ಪತ್ತೈದು ಸಾವಿರದಷ್ಟು ಏರಿಸುವ ಮೂಲಕ ಎರಡು ಲಕ್ಷ ಮಂದಿ ಯಾತ್ರೆ ಕೈಗೊಳ್ಳಲು ಅನುಕೂಲ ಮಾಡಿಕೊಡುವುದಾಗಿ ಹೇಳಲಾಗಿತ್ತು.

ಸಂಖ್ಯೆ ಏರಿಕೆ ಮಾಡಿರುವುದರಿಂದ ಉತ್ತರಪ್ರದೇಶ, ಪಶ್ಚಿಮ ಬಂಗಾಲ, ಅಂಡಮಾನ್ ಮತ್ತು ನಿಕೋಬಾರ್, ದಾದ್ರ ಮತ್ತು ನಗರ್ ಹವೇಲಿ, ಗೋವಾ, ಮಣಿಪುರ, ಲಕ್ಷದ್ವೀಪ, ಒಡಿಶಾ, ಪುದುಚೆರಿ, ಆಂಧ್ರಪ್ರದೇಶ, ಅಸ್ಸಾಮ್, ಬಿಹಾರ, ಚಂಡೀಗಧ, ಡಾಮನ್ ಮತ್ತು ಡಿಯು, ಹಿಮಾಚಲಪ್ರದೇಶ, ಜಾರ್ಖಂಡ್, ಪಂಜಾಬ್, ತ್ರಿಪುರಾದ ಎಲ್ಲ ಅರ್ಜಿದಾರರು ಹಜ್ ಗೆ ತೆರಳಬಹುದು ಎಂದು ಮೂಲಗಳು ತಿಳಿಸಿವೆ.

Indias Haj quota officially increased to 2 lakh

ಈ ವರ್ಷ ದಾಖಲೆಯ ಎರಡು ಲಕ್ಷ ಭಾರತೀಯರು ಯಾವುದೇ ಸಬ್ಸಿಡಿ ಇಲ್ಲದೆ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಈ ವರ್ಷದ ಮತ್ತೊಂದು ಪ್ರಮುಖಾಂಶ ಅಂದರೆ ಎರಡು ಸಾವಿರದ ಮುನ್ನೂರಾ ನಲವತ್ತು ಮಹಿಳೆಯರು ಪುರುಷರ ಜತೆಗೂಡಿ ತೆರಳಲಿದ್ದಾರೆ. ಕೋಟಾ ಹೆಚ್ಚಳ ಮಾಡಿದ್ದರಿಂದ ಹಲವು ರಾಜ್ಯದವರಿಗೆ ಅನುಕೂಲ ಆಗಿದೆ.

2014ರಲ್ಲಿ ಭಾರತದ ಹಜ್ ಕೋಟಾ 1,36,000 ಇತ್ತು. ಕಳೆದ ಐದು ವರ್ಷದಲ್ಲಿ ಆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿ, ಎರಡು ಲಕ್ಷ ತಲುಪಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+