ಯೋಧನ ದೇಹವನ್ನು ಛಿದ್ರಗೊಳಿಸಿ ಗಡಿಯಲ್ಲಿ ಬಿಸಾಕಿದ ಪಾಕಿಗಳು

Written By:
Subscribe to Oneindia Kannada

ಜಮ್ಮು, ಅ 29: ಪಾಕಿಸ್ತಾನ ಬೆಂಬಲಿತ ಉಗ್ರರು ತಮ್ಮ ಹೇಯ ಕೃತ್ಯಗಳನ್ನು ಮುಂದುವರಿಸಿದ್ದು, ಭಾರತೀಯ ಯೋಧನ ಮೇಲೆ ಗುಂಡು ಹಾರಿಸಿ, ನಂತರ ಯೋಧನತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ.

ಇವರ ಪೈಶಾಚಿಕ ಬುದ್ದಿ ಇಷ್ಟಕ್ಕೆ ಮುಗಿಯದೇ, ಹುತಾತ್ಮನಾದ ಯೋಧನ ದೇಹವನ್ನು ತುಂಡು ತುಂಡಾಗಿಸಿ ಗಡಿ ನಿಯಂತ್ರಣ ರೇಖೆಯಲ್ಲಿ ಬಿಸಾಕಿ ಹೋಗಿದ್ದಾರೆ. (ಪಾಕ್ ಉದ್ದಟತನಕ್ಕೆ ತಕ್ಕ ಉತ್ತರ, 15 ಪಾಕ್ ಸೈನಿಕರ ಹತ್ಯೆ)

ಗಡಿ ನುಸುಳಿ ಗಡಿ ಭದ್ರತಾ ಪಡೆಯ ಯೋಧರನ್ನು ಗುರಿಯಾಗಿಸಿ ಪಾಕ್ ಉಗ್ರರರು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯ ವೇಳೆ ಬಿಎಸ್‍ಎಫ್ ಯೋಧ ಮಂಜೀತ್ ಸಿಗ್ ಹುತಾತ್ಮರಾಗಿದ್ದರು. ಇವರ ಮೃತ ದೇಹವನ್ನು ಹೊತ್ತೊಯ್ದ ಪಾಕಿಗಳು ಇಂತಹ ಹೇಯ ಕೃತ್ಯವನ್ನು ನಡೆಸಿದ್ದಾರೆ.

Indian soldier Manjit Singh body mutilated by Pak terrorists

ಉಗ್ರರ ನಡುವಿನ ಗುಂಡಿನ ಚಕಮಕಿಯ ವೇಳೆ, ಓರ್ವ ಉಗ್ರ ಹತನಾಗಿದ್ದಾನೆ. ತಮ್ಮ ಸೈನಿಕನ ದೇಹವನ್ನು ವಿಕಾರಗೊಳಿಸಿದ ಪಾಕ್ ಉಗ್ರರ ಮೇಲೆ ಪ್ರತೀಕಾರ ತೀರಿಸುಕೊಳ್ಳಿವುದಾಗಿ ಭಾರತೀಯ ಸೇನೆ ಹೇಳಿದೆ.

ಈ ಹಿಂದೆ ಎರಡು ಬಾರಿ (2011 ಮತ್ತು 2013ರಲ್ಲಿ) ಉಗ್ರರು ಯೋಧನ ಶಿರಚ್ಛೇದ ಮಾಡಿದ್ದರು. ಇವರ ಪೈಶಾಚಿಕ ಕೃತ್ಯಕ್ಕೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಬಿಕ್ರಮ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನದ ಹೇಯ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಮುನ್ನಾ ಪುಲ್ವಮಾ ಪ್ರದೇಶದೊಳಗೆ ನುಗ್ಗಿದ ಉಗ್ರನೊಬ್ಬ ಓರ್ವ ಮಹಿಳೆಯನ್ನ ಹತ್ಯೆ ಮಾಡಿದ್ದಾನೆ.

ಜನವರಿ 14, 2013ರಲ್ಲಿ ಹುತಾತ್ಮರಾಗಿದ್ದ ಲ್ಯಾನ್ಸ್ ನಾಯಕ್ ಹೇಮರಾಜ್ ಸಿಂಗ್ ದೇಹವನ್ನು ಪಾಕ್ ಉಗ್ರರು ವಿರೂಪಗೊಳಿಸಿದ್ದರು. ಹೇಮರಾಜ್ ಶಿರ ಸಿಗದಿದ್ದರೆ, ಹತ್ತು ಉಗ್ರರ ತಲೆಯನ್ನು ತರಬೇಕೆಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pak terrorists mutilated the body of Manjit Singh before fleeing back to Pakistan occupied Kashmir under the cover of firing by Pakistan army.
Please Wait while comments are loading...