ಭಾರತೀಯ ವಿಜ್ಞಾನಿಗಳಿಂದ ಬೃಹತ್ ನಕ್ಷತ್ರಪುಂಜ ಪತ್ತೆ

Posted By:
Subscribe to Oneindia Kannada

ಪುಣೆ, ಜುಲೈ 14: ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ತಂಡವೊಂದು ಬ್ರಹ್ಮಾಂಡದಲ್ಲಿನ ಬೃಹತ್ ನಕ್ಷತ್ರ ಪುಂಜವೊಂದನ್ನು (ಆಕಾಶ ಗಂಗೆ) ಪತ್ತೆ ಹಚ್ಚಿದ್ದಾರೆ.

ಇದು, ನಮ್ಮ ಭೂಮಿಯ ಸೂರ್ಯನಿಗಿಂತ 20 ಲಕ್ಷ ಪಟ್ಟು ದೊಡ್ಡದಿದೆ ಎಂದು ಪುಣೆಯಲ್ಲಿರುವ ಇಂಟರ್ ಯೂನಿರ್ವರ್ಸಿಟಿ ಸೆಂಟರ್ ಫಾರ್ ಆ್ಯಸ್ಟ್ರಾನಮಿ ಆ್ಯಂಡ್ ಆಸ್ಟ್ರೋ ಫಿಸಿಕ್ಸ್ (ಐಯುಸಿಎಎ) ಹೇಳಿದೆ. ಈ ನಕ್ಷತ್ರಪುಂಜಕ್ಕೆ 'ಸರಸ್ವತಿ' ಎಂದು ನಾಮಕರಣ ಮಾಡಲಾಗಿದೆ.

Indian scientists discover 'Saraswati', a supercluster of galaxies

ಈ ಹೊಸ ತಾರಾಪುಂಜವು ಭೂಮಿಯಿಂದ ಸುಮಾರು 4 ಸಾವಿರ ಮಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರವಿದೆ. ಈ ತಾರಾಪುಂಜ ಕಳೆದ 10 ಬಿಲಿಯನ್ ವರ್ಷಗಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಟಾರ್ಗೆಟ್ ಚೀನಾː ಕ್ಷಿಪಣಿ ತಯಾರಿಕೆಯಲ್ಲಿ ಭಾರತ

ಬಾಹ್ಯಾಕಾಶದಲ್ಲಿ ಈ ತಾರಾಪುಂಜವು 600 ಮಿಲಿಯನ್ ಜ್ಯೋತಿವರ್ಷಗಳಷ್ಟು ದೂರಕ್ಕೆ ಹರಡಿಕೊಂಡಿದೆ ಎಂದು ಐಯುಸಿಎಎ ಹೇಳಿದೆ. ಈ ತಾರಾಪುಂಜದ ಆವಿಷ್ಕಾರದ ಬಗ್ಗೆ ಈಗಾಗಲೇ ಅಮೆರಿಕನ್ ಆ್ಯಸ್ಟ್ರೋನಾಮಿಕಲ್ ಸೊಸೈಟಿಯ ಪ್ರತಿಷ್ಠಿತ ನಿಯತಕಾಲಿಕೆಯಾದ ಆ್ಯಸ್ಟ್ರೋಫಿಸಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿದೆ ಎಂದು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A team of Indian astronomers has discovered an extremely large supercluster of galaxies as big as 20 million billion suns -- which they have named Saraswati, Pune-based Inter University Centre for Astronomy and Astrophysics (IUCAA) said on July 13, 2017.
Please Wait while comments are loading...