Indian Railways: ರೈಲ್ವೆ ಹಳಿ ಮಧ್ಯ ಸೌರವಿದ್ಯುತ್ ಉತ್ಪಾದನೆ! ದೇಶದಲ್ಲೇ ಮೊದಲ ಐತಿಹಾಸಿಕ ಹೆಜ್ಜೆ
ಭಾರತೀಯ ರೈಲ್ವೆ ಇಲಾಖೆಯು ದೇಶಾದ್ಯಂತ ಈಗಾಗಲೇ ವಿದ್ಯುತ್ ಸಹಿತ ರೈಲು ಚಾಲನೆಯೊಂದಿಗೆ ಸೇವೆ ನೀಡುತ್ತಿದೆ. ಬಹುತೇಕ ರೈಲು ಟ್ರ್ಯಾಕ್‌ಗಳು ದ್ವಿಪಥ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಅಗತ್ಯವಾದ ವಿದ್ಯುತ್ ಅನ್ನು ಪ್ರತ್ಯೇಕ ಕಡೆಗಳಲ್ಲಿ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತದೆ. ಇದನ್ನು ಕಡಿಮೆ ಮಾಡಿ, ಸುಸ್ಥಿರ ರೈಲ್ವೆ ಜಾಲ ಸುಧಾರಣೆಗೆ ಭಾರತೀಯ ರೈಲ್ವೆಯು ಮಹತ್ವದ ಹೆಜ್ಜೆ ಇಟ್ಟಿದೆ.
ಭಾರತೀಯ ರೈಲ್ವೆ ಮಟ್ಟಿಗೆ ಇದೊಂದು ಐತಿಹಾಸಿಕ ಹಾಗೂ ಮೊದಲ ಬಾರಿಗೆ ನಡೆಸುತ್ತಿರುವ ಪ್ರಯತ್ನವಾಗಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಭಾರತೀಯ ರೈಲ್ವೆಯ ಉತ್ಪಾದನಾ ಘಟಕವಾದ 'ಬನಾರಸ್ ಲೋಕೋಮೋಟಿವ್ ವರ್ಕ್ಸ್' ರೈಲ್ವೆ ಹಳಿಯಿಂದಲೇ ವಿದ್ಯುತ್ ಉತ್ಪಾದಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇಂತಹ ಪ್ರಯತ್ನ ದೇಶದಲ್ಲೇ ಮೊದಲು ಎನ್ನಬಹುದು. ನೀರು, ಪವನ ಮೂಲಕ ಉತ್ಪಾದಿಸುವ ವಿದ್ಯುತ್ ಅನ್ನು ರೈಲು ಚಲನೆಗೆ ಬಳಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ರೈಲ್ವೆ ಟ್ರ್ಯಾಕ್ ಮೇಲಿನ ಸೋಲಾರ್ ಪ್ಲೇಟ್‌ಗಳಿಂದ ವಿದ್ಯುತ್ ಉತ್ಪಾದಿಸಿ ಅದನ್ನು ರೈಲು ಸೇವೆ ಬಳಸಿಕೊಳ್ಳುವ ಉಪಕ್ರಮ ಇದಾಗಿದೆ.

ರೈಲ್ವೆ ಟ್ರ್ಯಾಕ್ ನಡುವೆ ಸೋಲಾರ್ ಪ್ಯಾನಲ್
ಸದ್ಯ ಈ 'ಬನಾರಸ್ ಲೋಕೋಮೋಟಿವ್ ವರ್ಕ್ಸ್' ವಾರಣಾಸಿಯು ಭಾರತದ ಮೊದಲ 70 ಮೀಟರ್ ತೆಗೆದಿಡಬಹುದಾದ (removable ) ಸೌರ ಫಲಕ ವ್ಯವಸ್ಥೆಯನ್ನು ರೈಲ್ವೆ ಟ್ರ್ಯಾಕ್ ನಡುವೆ ಅಳವಡಿಸಿ ಪರೀಕ್ಷಿಸಿದೆ. ಇಲ್ಲಿ ಅಳವಡಿಸಿರುವ 28 ಫಲಕಗಳು ಒಟ್ಟು ಸುಮಾರು 15 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ರೈಲ್ವೆ ಹಳಿಗಳ ಮಧ್ಯಭಾಗದಲ್ಲಿ ಸರಿಯಾಗಿ ಜೋಡಿಸಿದ ರೀತಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಈ ಸೋಲಾರ್ ಪ್ಯಾನೆಲ್ ಗಳು ಅಂದರೆ ಸೂರ್ಯನ ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಶಕ್ತಿ ಹೊಂದಿವೆ.
ಈ ಹೊಸ ಪ್ರಯತ್ನವು ರೈಲ್ವೆ ಸೇವೆಯನ್ನು ಪರಿಸರ ಸ್ನೇಹಿ ಹಾಗೂ ಸುಸ್ಥಿರ ರೈಲು ಸಾರಿಗೆಯತ್ತ ಪ್ರಮುಖ ಹೆಜ್ಜೆಯಾಗಿದೆ. ಇದು ಆರಂಭಿಕ ಹಂತದ ಪ್ರಯತ್ನವಾಗಿದೆ. ಸಾಧಕ ಬಾದಕ ನೋಡಿಕೊಂಡು ಮುಂದಿನ ದಿನಗಳಲ್ಲಿ ಸೋಲಾರ ಪ್ಯಾನಲ್ ಅಳವಡಿಕೆ ಮಾಡುವ ನಿರೀಕ್ಷೆ ಇದೆ.
ಪ್ರಾಯೋಗಿಕ ಪ್ರಯತ್ನ ಯಶಸ್ವಿಯಾದರೆ ವಿಸ್ತರಣೆ ಗುರಿ
ಟ್ರ್ಯಾಕ್ ಮೇಲೆ ಎರಡು ಹಳಿಗಳ ಮೇಲೆ ರೈಲು ಚಕ್ರ ಚಲಿಸುತ್ತದೆ. ಮಧ್ಯ ಜಲ್ಲಿಕಲ್ಲು ಇರುವ ಭಾಗವನ್ನು ವಿದ್ಯುತ್ ಉತ್ಪಾದಿಸಲು ಹಾಗು ಪ್ಯಾನಲ್ ಅಳವಡಿಕೆ ಬಳಸಲಾಗಿದೆ. ಇದು ಯಶಸ್ವಿಯಾದರೆ ಭವಿಷ್ಯದಲ್ಲಿ ಸೋಲಾರ ವಿದ್ಯುತ್ ಬಳಸಿ ರೈಲು ಸೇವೆ ನೀಡವ, ಇತರ ಮಾರ್ಗಗಳಲ್ಲೂ ಈ ಉಪಕ್ರಮ ವಿಸ್ತರಣೆಯ ನಿರೀಕ್ಷೆ ಇದೆ. ಆಗ ಇತರ ಮೂಲಗಳಿಂದ ವಿದ್ಯುತ್ ಬಳಕೆ ತಪ್ಪಲಿದೆ. ಆ ವಿದ್ಯುತ್ ಅನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಬಹುದು. ಸದ್ಯ ಈ ರೈಲ್ವೆ ಟ್ರ್ಯಾಕ್ ಸೋಲಾರ್ ವ್ಯವಸ್ಥೆಯನ್ನು ಉತ್ತರ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಬಳಸಲಾಗಿದೆ ಎಂದು ಕೇಂದ್ರ ರೈಲ್ವೆ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications