ರೈಲುಗಳಲ್ಲಿ ರಾತ್ರಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಬಂದ್! ಇಲಾಖೆಯಿಂದ ಮಹತ್ವದ ಸೂಚನೆ, ಯಾಕೆ?
ಭಾರತದಲ್ಲಿ ರೈಲ್ವೆ ಜಾಲ ವಿಸ್ತರಿಸುತ್ತಿದ್ದಂತೆ ಪ್ರಯಾಣಿಕರ ದಟ್ಟಣೆ ಸಹ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಅಹಿತಕರ ಘಟನೆಗಳು ಸಂಭವಿಸುತ್ತಿದ್ದು, ಇದರ ಕಡಿವಾಣಕ್ಕೆ ರೈಲ್ವೆ ಇಲಾಖೆ ಮಹತ್ವದ ಪ್ಲ್ಯಾನ್ ಮಾಡಿದೆ. ರಾತ್ರಿ ಸುದೀರ್ಘ ಪ್ರಯಾಣ ಮಾಡುವವರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದ್ದು, ರಾತ್ರಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು ಬಂದ್ ಆಗಲಿವೆ.
ಹೌದು, ರೈಲುಗಳಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ರಾತ್ರಿ 11 ರಿಂದ ಬೆಳಗ್ಗೆ 5 ರತನಕ ಸ್ಥಗಿತಗೊಳಿಸುವಂತೆ ರೈಲ್ವೆ ಮಂಡಳಿ ನಿರ್ಧರಿಸಿದೆ. ರೈಲ್ವೆ ಇಲಾಖೆ ವ್ಯಾಪ್ತಿಯ ಎಲ್ಲಾ ವಲಯಗಳಿಗೆ ಈ ಕ್ರಮ ಜಾರಿಗೊಳಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಯಾಕೆ ಈ ಕ್ರಮ?
ಆಗ್ನೇಯ ರೈಲ್ವೆ ವಲಯ ವ್ಯಾಪ್ತಿಯ ಮುಂಬೈ ಸ್ಥಳೀಯ ರೈಲಿನಲ್ಲಿ ಇತ್ತೀಚೆಗೆ ಮೊಬೈಲ್ ಚಾರ್ಜ್ ಮಾಡುವಾಗ ಪ್ರಯಾಣಿಕರ ಪವರ್ ಬ್ಯಾಂಕ್ ಸ್ಫೋಟಗೊಂಡಿತ್ತು. ಅಷ್ಟು ಮಾತ್ರವಲ್ಲದೇ ಇಡೀ ಬೋಗಿಯಲ್ಲಿ ದಟ್ಟ ಹೊಗೆ ಆವರಿಸಿಕೊಂಡು ಸಮಸ್ಯೆ ಉಂಟು ಮಾಡಿತ್ತು. ಈ ರೀತಿಯ ಘಟನೆಗಳಿಂದ ಇಡೀ ರೈಲ್ವೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಯಾಣಿಕರ ಜೀವ ರಕ್ಷಣೆ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.
ಈ ವಿಚಾರವಾಗಿ ರೈಲ್ವೆ ಮಂಡಳಿ ಅಕ್ಟೋಬರ್ 26 ರಂದು ಎಲ್ಲ ವಲಯಗಳಿಗೆ ಪತ್ರ ಮುಖೇನ ತಿಳಿಸಿದೆ. ಈ ನಿಯಮದಿಂದ ಯಾವುದೇ ವಿನಾಯಿತಿಗಳಿಲ್ಲ ಅಂತಲೂ ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಅಂದಿನ ಮೊಬೈಲ್ ಸ್ಪೋಟ ಘಟನೆಯಲ್ಲಿ ನಿಗದಿತ ಸಮಯದಲ್ಲಿ ಚಾರ್ಜಿಂಗ್ ಪಾಯಿಂಟ್ ಆಫ್ ಮಾಡಲು ಮರೆತಿದ್ದಕ್ಕಾಗಿ ಘಟನೆ ಸಂಭವಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅನಿರೀಕ್ಷಿತ ತಪಾಸಣೆಗೆ ಸೂಚನೆ
ಇಲಾಖೆಯ ಉದ್ದೇಶದಂತೆ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆವರೆಗೆ ಈ ಆರು ಗಂಟೆಗಳ ಅವಧಿಯಲ್ಲಿ ಎಲ್ಲ ರೈಲುಗಳ ಬೋಗಿಗಳಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳು ಸ್ವಿಚ್ ಆಫ್ ಆಗಿದ್ದನ್ನು ಖಚಿತಪಡಿಸಿಕೊಳ್ಳಬೇಕು. ಈ ಕುರಿತು ನಿರಂತರವಾಗಿ ಮೇಲ್ವಿಚಾರಣೆಗೆ ಸೂಚನೆ ನೀಡಲಾಗಿದೆ.
ಆಗಾಗ ರೈಲು ಬೋಗಿಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಆಫ್ ಆಗಿದ್ದರ ಕುರಿತು ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ಅನಿರೀಕ್ಷಿತ ತಪಾಸಣೆ ನಡೆಸಲೇಬೇಕು. ಪ್ರಯಾಣಿಕರಿಗಾಗಿ ಈ ಸುರಕ್ಷತಾ ಕ್ರಮವನ್ನು ಅನುಷ್ಠಾನಗೊಳಿಸಬೇಕು. ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.
2014ರ ಹಳೇಯ ನಿಯಮ ಜಾರಿ!
ರೈಲು ಬೋಗಿಗಳಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಇಂತಿಷ್ಟು ಕಾಲ ನಿರ್ಬಂದಿಸಬೇಕೆಂಬ ನಿಯಮವನ್ನು 2014ರ ಜೂನ್ 19ರಂದು ರೂಪಿಸಲಾಗಿತ್ತು. ಏಕೆಂದರೆ ಅಂದು ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದಕ್ಕೆ ಮೊಬೈಲ್ ಚಾರ್ಜಿಂಗ್ ಕಾರಣೆ ಗೊತ್ತಾದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರ ಶಿಫಾರಸಿನ ಮೇರೆಗೆ ಈ ನಿಯಮ ಜಾರಿಗೆ ತೀರ್ಮಾನಿಸಲಾಯಿತು.
ಪವರ್ ಬ್ಯಾಂಕ್ ಬಳಸಲು ಅಡ್ಡಿ ಇಲ್ಲ!
ಪಶ್ಚಿಮ ರೈಲ್ವೆ ವಲಯವು ಮಾರ್ಚ್ 2021ರಲ್ಲಿ ಮತ್ತಷ್ಟು ನಿಯಮಗಳನ್ನು ಜಾರಿಗೊಳಿಸಿತು. ಆ ವರ್ಷ ಮಾರ್ಚ್ 16 ರಿಂದ ನಿರ್ಬಂಧಿತ ಸಮಯದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳಿಗೆ ವಿದ್ಯುತ್ ಪ್ರವಿಸುವುದನ್ನು ತಡೆಯಲು ಆರಂಭಿಸಿತ್ತು.
ಇಂಥಹ ಅವಘಡಗಳ ಬಳಿಕ ಕಟ್ಟುನಿಟ್ಟಿನ ಜಾರಿಗೆ ತರಲಾಗುತ್ತದೆ. ಆದರೆ ಪ್ರಯಾಣಿಕರು ನಿರ್ಬಂಧಿತ ಅವಧಿಯಲ್ಲಿ ಮೊಬೈಲ್ ಚಾರ್ಜಿಂಗ್ ಹಾಕದೇ ನೀವು ಈಗಾಗಲೇ ಚಾರ್ಜಿಗೆ ಇಟ್ಟುಕೊಂಡ ಪವರ್ ಬ್ಯಾಂಕ್ ಅನ್ನು ಬಳಸಬಹುದು. ಚಾರ್ಜಿಂಗ್ ಪಾಯಿಂಟ್‌ಗಳು ಲಭ್ಯವಿಲ್ಲದ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ನೀವು ಮೊಬೈಲ್‌ಗಳ ಚಾರ್ಜಿಂಗ್‌ಗಾಗಿ ಪವರ್ ಬ್ಯಾಂಕ್ ಒಯ್ಯಬೇಕಿದೆ.


Click it and Unblock the Notifications
