Good News: ರೈಲು ಟಿಕೆಟ್ ಬುಕ್ ನಂತರವೂ ಟ್ರಿಪ್ ದಿನಾಂಕ ಪರಿಷ್ಕರಣೆಗೆ ಅವಕಾಶ, ಏನಿದು?
Indian Railways Ticket Rules: ಭಾರತೀಯ ರೈಲ್ವೆಯು ತನ್ನ ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ. ಆದಷ್ಟು ಶೀಘ್ರವೇ ರೈಲ್ವೆ ಪ್ರಯಾಣಿಕರು ಟಿಕೆಟ್ ಬುಕ್ ಆದ ಬಳಿಕ ಅದನ್ನು ರದ್ದು ಮಾಡದೇ ದಿನಾಂಕ ಬದಲಾಯಿಸುವ ಅವಕಾಶ ಜಾರಿಗೆ ತರುವ ಪ್ರಸ್ತಾವನೆ ಇದೆ ಎಂದು ಕೇಂದ್ರ ರೈಲ್ವೆ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
ಜನಸಾಮಾನ್ಯರಿಗೆ ರೈಲಿನ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ. ಭಾರತೀಯ ರೈಲ್ವೆ ತಿಳಿಸಿರುವ ಪ್ರಕಾರ, ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡಿದ ಬಳಿಕವು ಪ್ರಯಾಣದ ದಿನಾಂಕಗಳನ್ನು ಪರಿಷ್ಕರಿಸಲು ಅವಕಾಶ ನೀಡುವ ಈ ಹೊಸ ವ್ಯವಸ್ಥೆ ಜಾರಿಗೆ ತರುತ್ತಿದೆ. ರೈಲ್ವೆ ಅಧಿಕಾರಿಗಳು, ಟಿಕೆಟ್ ಬುಕ್ಕಿಂಗ್ ದೃಢೀಕರಣಗೊಂಡ ಬಳಿಕ ಪ್ರಯಾಣಿಕರಿಗೆ ತಾವು ಸಂಚಾರ ಮಾಡಬೇಕಾದ ದಿನಾಂಕದವನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡುಲಿದೆ. ಈ ಹೊಸ ವ್ಯವಸ್ಥೆ ಸಾಧಕ, ಬಾಧಕ ನೋಡಿಕೊಂಡು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.

ಭಾರತೀಯ ರೈಲ್ವೆ ಇಲಾಖೆಯು 2026ರ ಜನವರಿಯಿಂದ ಈ ಹೊಸ ಮಾರ್ಪಾಡನ್ನು ಜಾರಿಗೆ ತರುವ ನಿರೀಕ್ಷೆಗಳು ಇವೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೋಟ್ಯಾಂತರ ಮಂದಿ ನಿತ್ಯ ರೈಲ್ವೆ ಪ್ರಯಾಣದ ಮೇಲೆ ಅವಲಂಬಿತರಾಗಿದ್ದಾರೆ. ಅವರಿಗೆಲ್ಲ ಈ ಸೇವೆಯ ಮಾರ್ಪಾಡು ಗುಡ್ ನ್ಯೂಸ್ ನೀಡಲಿದೆ.
ಪ್ರಯಾಣದ ದಿನಾಂಕ ಬದಲಾವಣೆಯ ಪ್ರಯೋಜನ?
ಈ ವ್ಯವಸ್ಥೆ ಜಾರಿಗೆ ಬಂದ ಮೇಲೆ ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳನ್ನು ಯಾವುದೋ ಕಾರಣಗಳಿಗೆ ರದ್ದುಗೊಳಿಸುವ ಅಗತ್ಯವಿಲ್ಲ. ಅಂದರೆ ವ್ಯಕ್ತಿಯೊಬ್ಬರು ಟಿಕೆಟ್ ಬುಕ್ ಮಾಡಿದ ಬಳಿಕ ಪ್ರಯಾಣ ದಿನ ಬದಲಾದರೆ, ಅಥವಾ ಬೇರೆ ದಿನ ಪ್ರಯಾಣ ಮಾಡಬೇಕಾಗಿ ಬಂದಲ್ಲಿ ಅವರು ಬುಕ್ ಮಾಡಿದ ಟಿಕೆಟ್ ಅನ್ನು ರದ್ದುಗೊಳಿಸಿ ಮತ್ತೆ ಟಿಕೆಟ್ ಬುಕ್ ಮಾಡಬೇಕಿತ್ತು. ಇದರಿಂದ ಸಮಯ ವ್ಯರ್ಥ, ಹಣ ವ್ಯರ್ಥವಾಗುತ್ತಿತ್ತು. ಆದರೆ ಈ ಹೊಸ ವ್ಯವಸ್ಥೆ ಜಾರಿ ಬಂದ ಬಳಿಕ ಒಮ್ಮೆ ಟಿಕೆಟ್ ಬುಕ್ ಮಾಡಿ ಅದು ದೃಢೀಕರಣಗೊಂಡ ಬಳಿವು ನೀವು ಪ್ರಯಾಣದ ದಿನಾಂಕವನ್ನು ಬದಲಾಯಿಸಬಹದು. ಟಿಕೆಟ್ ರದ್ದು ಮಾಡದೇ ದಿನಾಂಕ ಮಾರ್ಪಾಡಿಗೆ ಅವಕಾಶ ಸಿಗುತ್ತದೆ. ಇದರಿಂದ ಪ್ರಯಾಣಿಕರ ಸಮಯ ಮತ್ತು ಹಣ ಉಳಿಯಲಿದೆ.
ಹಾಲಿ ವ್ಯವಸ್ಥೆಯಲ್ಲಿ ಟಿಕೆಟ್ ರದ್ದು ಮಾಡಿ, ಇಂತಿಷ್ಟು ಕಚೇರಿ ದಿನಗಳಲ್ಲಿ ಟಿಕೆಟ್ ರದ್ದಿನ ಹಣ ಮರಳಿ ಬರುತ್ತಿತ್ತು. ಕೆಲವೊಮ್ಮೆ ಶುಲ್ಕವು ಸೇರಿ ಕಡಿತದ ಮೊತ್ತ ನಿಮಗೆ ಮರುಪಾವತಿ ಆಗುತ್ತದೆ. ಆದರೆ ಹೊಸ ಸೌಲಭ್ಯದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಟಿಕೆಟ್ ರದ್ದು, ಶುಲ್ಕ, ಹಣದ ಕಡಿತದಂತಹ ಗೊಂದಲ ಇರುವುದಿಲ್ಲ. ನಿಮ್ಮ ಪ್ಲಾನ್‌ಗೆ ತಕ್ಕಂತೆ ದಿನಾಂಕ ಬದಲಾಯಿಸಿಕೊಳ್ಳಬಹುದು.
ಈ ಹೊಸ ವ್ಯವಸ್ಥೆಯು ಕೇವಲ ಆನ್‌ಲೈನ್ ಮತ್ತು ಕೌಂಟರ್ ಬುಕಿಂಗ್‌ಗಳಿಗೆ ಅನ್ವಯವಾಗುತ್ತದೆಯೇ? ಕೇವಲ ದಿನಾಂಕ ಮಾತ್ರ ಪರಿಷ್ಕರಿಸಬಹುದಾ ಅಥವಾ ಇತರ ಬದಲಾವಣೆಗೆ ಅವಕಾಶ ನೀಡಬಹುದೇ? ಎಂಬುದರ ಮೇಲೆ ರೈಲ್ವೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲವು ಅಂತಿಮಗೊಂಡ ಬಳಿಕ ಡಿಸೆಂಬರ್ ಹೊತ್ತಿಗೆ ಅಧಿಕೃತ ಮಾಹಿತಿ ಪ್ರಕಟಿಸುವ ನಿರೀಕ್ಷೆ ಇದೆ.
ಟಿಕೆಟ್ ರದ್ದತಿ ಶುಲ್ಕ ಹೇಗಿದೆ?
ನೀವು ರೈಲು ಟಿಕೆಟ್ ರದ್ದುಗೊಳಿಸಬೇಕಾದರೆ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ರೈಲು ಹತ್ತುವ 48 ರಿಂದ 12 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ ಶೇಕಡಾ 25ರಷ್ಟು ಕಡಿತವಾಗುತ್ತದೆ. ರೈಲು ಹತ್ತುವ ಕೇವಲ 4-12 ಗಂಟೆ ಒಳಗೇ ರದ್ದಿಗೆ ಮುಂದಾದರೆ ರದ್ದು ಶುಲ್ಕ ಹೆಚ್ಚಿರುತ್ತದೆ. ಒಂದು ವೇಳೆ ನೀವು ಚಾರ್ಟ್ ತಯಾರಾದ ಬಳಿಕ ರದ್ದು ಮಾಡಿದರೆ ಯಾವ ಹಣ ಸಹ ಮರಳಿ ಬರುವುದಿಲ್ಲ ಎಂದು ರೈಲ್ವೆ ನಿಯಮಗಳು ಹೇಳುತ್ತವೆ.












Click it and Unblock the Notifications