Indian Raiways: ಅಯೋಧ್ಯೆಗೆ ತೆರಳುವವರಿಗಾಗಿ ರೈಲುಗಳ ವೇಳಾಪಟ್ಟಿ ಬದಲು, ಮಾಹಿತಿ

ಬೆಂಗಳೂರು, ಜನವರಿ 14: ಭಾರತೀಯರ ಶತಮಾನಗಳ ಕನಸು ಜನವರಿ 22ರಂದು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಉದ್ಘಾಟನೆ ಮೂಲಕ ನನಸಾಗಲಿದೆ. ಮರ್ಯಾದಾ ಪುರುಷೋತ್ತಮನ ಪ್ರಾಣ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆಗೆ ಆಗಮಿಸುವವರ ಭಕ್ತರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಲಿದ್ದು, ಅವರಿಗೆಲ್ಲ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ.

ಹೌದು, ಜನವರಿ 22 ರ ನಂತರ ಅಯೋಧ್ಯೆ ನಗರಕ್ಕೆ ಭೇಟಿ ನೀಡಲು ಉತ್ಸುಕರಾಗಿರುವ ಭಗವಾನ್ ರಾಮ ಭಕ್ತರ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಭಾರತೀಯ ರೈಲ್ವೇ (Indian Railways) ಅಯೋಧ್ಯೆಗೆ ಹೋಗುವ ಹಲವಾರು ರೈಲುಗಳ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ಮಾಡಿದೆ. ಈ ಮೂಲಕ ರಾಮ ಭಕ್ತರಿಗೆ ಒಂದಷ್ಟು ಅನುಕೂಲಕರ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಜ್ಯ ಸಚಿವ ದರ್ಶನಾ ಜರ್ದೋಶ್ ಮಾಹಿತಿ ನೀಡಿದ್ದಾರೆ.

Indian Railways Schedule of Several Trains for Passengers Visit Ayodhya: Know Routes, Date,

ಸಾಮಾಜಿಕ ಜಾಲತಾಣ x ನಲ್ಲಿ ಅವರ ಹಂಚಿಕೊಂಡ ಮಾಹಿತಿ ಪ್ರಕಾರ, ಬೇಡಿಕೆಗೆ ತಕ್ಕದಂತೆ ದೇಶದ ವಿವಿಧೆಡೆಯಿಂದ ಹೋಗುವ ರೈಲುಗಳ ಪೈಕಿ ಒಂದಷ್ಟು ರೈಲುಗಳಲ್ಲಿ ಬದಲಾವಣೆ ಮಾಡಿ, ಸ್ಥಳ, ದಿನಾಂಕ ಮಾಹಿತಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ನಗರಗಳಿಂದ ಅಯೋಧ್ಯೆಗೆ ಬರುವ ರೈಲು ಪಟ್ಟಿ, ದಿನಾಂಕ

* ಉದ್ನಾ- ಅಯೋಧ್ಯೆ- ಉಧ್ನಾ: ಜನವರಿ 30ರಿಂದ ಫೆಬ್ರುವರಿ 24 ಬದಲಾಯಿಸಿ ವೇಳಾಪಟ್ಟಿಯಂತೆ ರೈಲು ಸಂಚಾರ

* ಇಂದೋರ್- ಅಯೋಧ್ಯೆ - ಇಂದೋರ್: ಫೆಬ್ರವರಿ 10ರಿಂದ ಆರಂಭವಾಗಿ ಫೆಬ್ರುವರಿ 24ರವರೆಗೆ ಓಡಾಡಲಿವೆ.

* ಮಹೇಶನ - ಸಲಾರಪುರ - ಮಹೇಶನ: ಜನವರಿ 30 ಫೆ. 24ರವರೆಗೆ

* ವಾಪಿ - ಅಯೋಧ್ಯೆ - ವಾಪಿ: ಫೆಬ್ರವರಿ 06 ರಿಂದ 24ರವರೆಗೆ

* ವಡೋದರಾ - ಅಯೋಧ್ಯೆ - ವಡೋದರಾ

* ಪಾಲನ್ಪುರ್ - ಸಲಾರ್ಪುರ್ - ಪಾಲನ್ಪುರ್: ಜನವರಿ 31 ರಿಂದ ಫೆಬ್ರವರಿ 24 ರವರೆಗೆ

* ವಲ್ಸಾದ್ - ಅಯೋಧ್ಯೆ - ವಲ್ಸಾದ್: ಫೆಬ್ರವರಿ 02 ರಿಂದ ಆರಂಭ

* ಸಬರಮತಿ - ಸಲಾರಪುರ - ಸಬರಮತಿ

Indian Railways Schedule of Several Trains for Passengers Visit Ayodhya: Know Routes, Date,

ಉತ್ತರ ಪ್ರದೇಶ ಐತಿಹಾಸಿಕ ದಿನಕ್ಕೆ ಸಾಕ್ಷಿ

ಇದೀಗ ಅಯೋಧ್ಯೆಯಲ್ಲಿ ರಾಮ್ ಲಲ್ಲಾನ ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಅಂದರೆ ಜನವರಿ 16 ರಂದು ಆರಂಭಿಸುವುದಾಗಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಮಾಹಿತಿ ನೀಡಿದೆ.

ಅಯೋಧ್ಯೆಯಲ್ಲಿ 'ಕುಂಭ ಮಾದರಿಯ ಸ್ವಚ್ಛತೆ'ಯನ್ನು ಜಾರಿಗೆ ತರುವಂತೆ ಮತ್ತು 'ರಾಮನಗರಿ' ಅತ್ಯಂತ ಸ್ವಚ್ಛ ಮತ್ತು ಸುಂದರ ನಗರವಾಗಿ ಕಾಣಿಸಿಕೊಳ್ಳಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಾರಣಾಸಿಯ ಅರ್ಚಕರಾದ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22 ರಂದು ರಾಮ್ ಲಲ್ಲಾನ ಪ್ರತಿಷ್ಠಾಪನೆಯ ಸಮಾರಂಭದ ಮುಖ್ಯ ವಿಧಿಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯೆಯು ಅಮೃತ ಮಹೋತ್ಸವ, ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ.

ಸದ್ಯ ನಾಡಿದ್ದು ಬುಧವಾರದಿಂದಲೇ ಅಯೋಧ್ಯೆಯಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಇದೇ ವೇಳೆ ಶ್ರಿರಾಮಲಲ್ಲಾ ಮೂರ್ತಿ ಗರ್ಭಗುಡಿ ಪ್ರವೇಶಿಸಲಿದೆ. ಜ.22ರಂದು ಪ್ರಾಣಪ್ರತಿಷ್ಠಾಪನೆಗೊಳ್ಳಲಿದೆ ಎಂದು ಟ್ರಸ್ಟ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+