• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲುಗಳ ಖಾಸಗೀಕರಣ; ಬಜೆಟ್‌ನಲ್ಲಿ ಹೊಸ ಮಾರ್ಗಗಳ ಘೋಷಣೆ?

|

ಬೆಂಗಳೂರು, ಜನವರಿ 25: ಭಾರತೀಯ ರೈಲ್ವೆ ಖಾಸಗಿ ಸಹಭಾಗಿತ್ವದಲ್ಲಿ ರೈಲುಗಳನ್ನು ಓಡಿಸಲು ಮುಂದಾಗಿದೆ. ಪಿಪಿಪಿ ಮಾದರಿಯಲ್ಲಿ ರೈಲುಗಳ ಖಾಸಗೀಕರಣಕ್ಕೆ ಈಗಾಗಲೇ ಪ್ರಕ್ರಿಯೆ ಜಾರಿಯಲ್ಲಿದೆ. ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ.

ರೈಲ್ವೆ ಖಾಸಗಿ ಸಹಭಾಗಿತ್ವದಲ್ಲಿ ರೈಲು ಓಡಿಸಲು ಅರ್ಜಿ ಕರೆದಿತ್ತು. ಬಂದಿದ್ದ 120 ಅರ್ಜಿಗಳಲ್ಲಿ 102 ಇಲಾಖೆಯ ಮಾರ್ಗಸೂಚಿಯ ಅನ್ವಯವಾಗಿ ಇವೆ. ರೈಲ್ವೆ ಖಾಸಗಿ ಸಹಭಾಗಿತ್ವದಲ್ಲಿ ರೈಲು ಓಡಿಸಲು ಟೆಂಡರ್ ಶೀಘ್ರವೇ ಕರೆಯಲಿದೆ.

ಕರ್ನಾಟಕಕ್ಕೆ ಮೊದಲ ತೇಜಸ್ ರೈಲು; ಮಾರ್ಗ, ವೇಳಾಪಟ್ಟಿ

ಆರ್‌ಎಫ್‌ಪಿ ಹಂತದಲ್ಲಿ ಸ್ವೀಕಾರಗೊಂಡ ಅರ್ಜಿಗಳಲ್ಲಿ ಐಆರ್‌ಸಿಟಿಯ ಅರ್ಜಿಯೂ ಒಂದಾಗಿದೆ. ಒಟ್ಟು 109 ಮಾರ್ಗಗಳನ್ನು ರೈಲ್ವೆ ಗುರುತಿಸಿದೆ. ಈ ಮಾರ್ಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಬೋಗಿಗಳನ್ನು ಹೊಂದಿರುವ ರೈಲು ಸಂಚಾರ ನಡೆಸಲಿದೆ.

ತೇಜಸ್ ಮಾದರಿ ರೈಲಿನ 6 ಕಾರಿಡಾರ್; ಕರ್ನಾಟಕದ ಒಂದು ರೈಲು

ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್‌ನಲ್ಲಿ ರೈಲ್ವೆ ಖಾಸಗೀಕರಣದ ವಿಚಾರದಲ್ಲಿ ಸರ್ಕಾರ ಮತ್ತಷ್ಟು ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್-2021 ನಿರೀಕ್ಷೆ: ರಾಣೇಬೆನ್ನೂರು-ಶಿವಮೊಗ್ಗ ರೈಲು ಯೋಜನೆ ಕಾಮಗಾರಿ ಯಾವಾಗ?

ಪ್ರಮುಖ ಅಂಶಗಳು; ರೈಲುಗಳನ್ನು ಖಾಸಗೀಕರಣಗೊಳಿಸಿದರೆ ಅತ್ಯಾಧುನಿಕ ಬೋಗಿಗಳನ್ನು ಅದಕ್ಕೆ ಅಳವಡಿಕೆ ಮಾಡಲಾಗುತ್ತದೆ. ಗಂಟೆಗೆ 160 ಕಿ. ಮೀ.ಯಲ್ಲಿ ಸಂಚಾರ ನಡೆಸುವ ಸಾಮರ್ಥ್ಯವನ್ನು ಈ ಬೋಗಿಗಳು ಹೊಂದಿರಬೇಕು.

ಪ್ರಯಾಣಿಕರ ಸುರಕ್ಷತೆ, ಆಧುನಿಕ ತಂತ್ರಜ್ಞಾನಗಳನ್ನು ಬೋಗಿಯಲ್ಲಿ ಅಳವಡಿಕೆ ಮಾಡಲಾಗುತ್ತದೆ. ರೈಲು ಓಡಿಸುವ ಟೆಂಡರ್ ಪಡೆದವರು ಮಾರ್ಗಗಳಿಗೆ ಅನುಗುಣವಾಗಿ ದರಗಳನ್ನು ನಿಗದಿ ಮಾಡುತ್ತಾರೆ. ಖಾಸಗಿಯವರು ರೈಲುಗಳನ್ನು ಓಡಿಸುವುದು, ನಿರ್ವಹಣೆ ಮಾಡಲು ಗರಿಷ್ಠ 35 ವರ್ಷಗಳ ತನಕ ಗುತ್ತಿಗೆ ಪಡೆಯಬಹುದಾಗಿದೆ.

2020ರ ಬಜೆಟ್‌ನಲ್ಲಿಯೇ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಮೂರು ವರ್ಷಗಳಲ್ಲಿ 150 ಖಾಸಗಿ ರೈಲುಗಳು ದೇಶದಲ್ಲಿ ಸಂಚಾರ ನಡೆಸಲಿವೆ ಎಂದು ಘೋಷಣೆ ಮಾಡಿದ್ದರು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು 'ತೇಜಸ್' ಮಾದರಿ ರೈಲುಗಳನ್ನು ಹಲವು ಮಾರ್ಗದಲ್ಲಿ ಓಡಿಸುವುದಾಗಿ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.

ಈ ಬಾರಿಯ ಬಜೆಟ್‌ನಲ್ಲಿ ಹೊಸ ಮಾರ್ಗದಲ್ಲಿ 'ತೇಜಸ್' ಎಕ್ಸ್‌ಪ್ರೆಸ್ ರೈಲನ್ನು ಓಡಿಸುವ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ. ರೈಲುಗಳ ಖಾಸಗೀಕರಣಕ್ಕೆ ಯಾವ ಘೋಷಣೆ ಮಾಡಲಾಗುತ್ತದೆ ಎಂದು ಉದ್ಯಮಿಗಳು ಕಾದು ಕುಳಿತಿದ್ದಾರೆ.

English summary
As part of Indian Railways private investment for operating passenger trains finance minister Nirmala Sitharaman may announced new routes in 2021 Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X