ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಡ್ ಗೇಜ್ ಆಳವಡಿಕೆ: ಬೆಂಗಳೂರು ಸೇರಿ 13 ರಾಜ್ಯದಲ್ಲಿ ರೈಲು ಸಂಚಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಉದಯಪುರ-ಅಹಮದಾಬಾದ್ ನಡುವಿನ ಗೇಜ್ ಪರಿವರ್ತನೆ ಕಾರ್ಯ ಪೂರ್ಣಗೊಂಡ ನಂತರ ಬಹುನಿರೀಕ್ಷಿತ ಉದಯಪುರ ಅಸರ್ವಾ ರೈಲು ಪ್ರಾರಂಭವಾಗುವ ಕಾಯುವಿಕೆ ಕೊನೆಗೂ ಕೊನೆಗೊಂಡಿದೆ.

ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಹಮದಾಬಾದ್‌ನ ಅಸರ್ವಾ (ಶಾಹಿ ಬಾಗ್ ಅಹಮದಾಬಾದ್) ರೈಲು ನಿಲ್ದಾಣದಿಂದ ಅಸರ್ವಾ-ಉದಯಪುರ ರೈಲಿಗೆ ಹಸಿರು ನಿಶಾನೆ ತೋರಿಸುತ್ತಿದ್ದಾರೆ.

Breaking: ಸೇತುವೆ ದುರಂತ: ನಾಳೆ ಮೊರ್ಬಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ Breaking: ಸೇತುವೆ ದುರಂತ: ನಾಳೆ ಮೊರ್ಬಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಗುಜರಾತ್‌ನ ಅಸರ್ವಾ ನಿಲ್ದಾಣದಿಂದ ಉದಯಪುರ-ಅಹಮದಾಬಾದ್ ಬ್ರಾಡ್ ಗೇಜ್ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಬ್ರಾಡ್ ಗೇಜ್ ಲೈನ್ ಉತ್ತರದಿಂದ ದಕ್ಷಿಣ ಭಾರತದವರೆಗೆ 13 ರಾಜ್ಯಗಳನ್ನು ಒಂದುಗೂಡಿಸುತ್ತದೆ. ರಾಜಸ್ಥಾನದಿಂದ-ಗುಜರಾತ್ ಮತ್ತು ದಕ್ಷಿಣ ಭಾರತದ ರಾಜ್ಯಗಳಿಗೆ ಪ್ರಯಾಣ ಸುಲಭವಾಗುತ್ತದೆ.ಜನರ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ. ಉದ್ಯೋಗ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಸಹಾಯಕವಾಗಲಿದೆ.

Indian railways From North To South Broad Gauge Will Unite 13 States Here details

ಉದಯಪುರ-ಅಹಮದಾಬಾದ್ ಬ್ರಾಡ್ ಗೇಜ್‌ ಮಾರ್ಗ; ಉದಯಪುರ-ಅಹಮದಾಬಾದ್ ಬ್ರಾಡ್ ಗೇಜ್‌ನಲ್ಲಿ ರೈಲುಗಳು ಪ್ರಾರಂಭವಾಗುವುದರೊಂದಿಗೆ ಮೇವಾರ್-ವಾಗಡ್ ಜೊತೆಗೆ ರಾಜಸ್ಥಾನ ಮತ್ತು ಉತ್ತರ ಭಾರತದ ಇತರ ರಾಜ್ಯಗಳು ಗುಜರಾತ್ ಮತ್ತು ದಕ್ಷಿಣ ಭಾರತಕ್ಕೆ ನೇರವಾಗಿ ಸಂಪರ್ಕ ಸಾಧಿಸುತ್ತವೆ.

ಈ ಮಾರ್ಗದ ಮೂಲಕ ಅಹಮದಾಬಾದ್, ಸೂರತ್, ಬರೋಡಾ, ಮಹಾರಾಷ್ಟ್ರ ಸೇರಿದಂತೆ ದೇಶದ ದಕ್ಷಿಣ ಭಾಗಗಳಲ್ಲಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಜೊತೆಗೆ ಇತರ ನಿಲ್ದಾಣಗಳಲ್ಲಿ ದೀರ್ಘಾವಧಿಯವರೆಗೆ ನಿಲ್ಲುವ ಅನೇಕ ರೈಲುಗಳನ್ನು ಉದಯಪುರದವರೆಗೆ ವಿಸ್ತರಿಸಬಹುದು.

ಗುಜರಾತ್‌ನ ನಾಥದ್ವಾರದಿಂದ ಓಖಾಗೆ ಹೋಗುವ ರೈಲು ಮಾವ್ಲಿ, ಚಿತ್ತೋರ್‌ಗಢ, ರತ್ಲಂ ಮೂಲಕ 611 ಕಿ. ಮೀ. ರೈಲು ಮಾವಲಿಯಿಂದ ರಾತ್ರಿ 10 ಗಂಟೆಗೆ ಹೊರಡುತ್ತದೆ ಮತ್ತು ಮರುದಿನ ಬೆಳಗ್ಗೆ 9.40ಕ್ಕೆ ಅಹಮದಾಬಾದ್ ತಲುಪುತ್ತದೆ. 12 ಗಂಟೆಗಳ ಕಾಲ ಪ್ರಯಾಣಿಸುತ್ತದೆ. ಈ ರೈಲು ಉದಯಪುರ-ಅಹಮದಾಬಾದ್ ಮಾರ್ಗದಲ್ಲಿ ಸಂಚರಿಸಿದರೆ 7 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳ್ಳಲಿದೆ.

Indian railways From North To South Broad Gauge Will Unite 13 States Here details

ಉದಯಪುರದಿಂದ ಬಾಂದ್ರಾ ರೈಲು ಚಿತ್ತೋರ್‌ಗಢ, ರತ್ಲಂ, ಬರೋಡಾ, ಸೂರತ್ ಮೂಲಕ ಬಾಂದ್ರಾಗೆ ಹೋಗುತ್ತದೆ. ಇದು 17 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ರೈಲನ್ನು ಅಹಮದಾಬಾದ್‌ನಿಂದ ಓಡಿಸಿದರೆ 150 ಕಿ. ಮೀ. ಪ್ರಯಾಣ ಕಡಿಮೆಯಾಗಲಿದ್ದು, 4 ಗಂಟೆ ಉಳಿತಾಯವಾಗಲಿದೆ.

ಪ್ರವಾಸೋದ್ಯಮ ಅಭಿವೃದ್ಧಿ; ಬ್ರಾಡ್ ಗೇಜ್ ಅಳವಡಿಕೆಯೊಂದಿಗೆ ಸೂರತ್, ಅಹಮದಾಬಾದ್, ಬೆಂಗಳೂರು, ಮುಂಬೈ, ಪುನಾ, ಚೆನ್ನೈ, ಹೈದರಾಬಾದ್, ತಿರುವನಂತಪುರ, ಕನ್ಯಾ ಕುಮಾರಿ, ರಾಮೇಶ್ವರಂ, ಸೋಮನಾಥ್, ಸಿಕಂದರಾಬಾದ್, ಕಚ್-ಭುಜ್, ವೆರಾವಲ್ ಮುಂತಾದ ರೈಲುಗಳನ್ನು ಉದಯಪುರದವರೆಗೆ ವಿಸ್ತರಿಸಬಹುದು. ಅಹಮದಾಬಾದ್‌ನಿಂದ ಉದಯಪುರಕ್ಕೆ ವಾರಕ್ಕೊಮ್ಮೆ ರೈಲುಗಳಿವೆ.

ಈ ರೈಲುಗಳ ಪರಿಚಯದೊಂದಿಗೆ ಮೇವಾರ್‌ನಿಂದ ಗುಜರಾತ್‌ಗೆ ಸಂಪರ್ಕವು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಮೇವಾರ್‌ನ ಅನೇಕ ವ್ಯಾಪಾರಿಗಳು ಸಗಟು ಖರೀದಿಗಾಗಿ ಸೂರತ್, ಅಹಮದಾಬಾದ್ ಅವಲಂಬಿಸಿದ್ದಾರೆ. ಈ ಹೊಸ ಮಾರ್ಗದಲ್ಲಿ ರೈಲುಗಳ ಕಾರ್ಯಾಚರಣೆಯಲ್ಲಿ ಸರಕು ಸಾಗಣೆ ಸುಲಭವಾಗುತ್ತದೆ. ಮತ್ತೊಂದೆಡೆ, ಗುಜರಾತಿ ಪ್ರವಾಸಿಗರು ಮೇವಾರಕ್ಕೆ ಸಾಕಷ್ಟು ಸಂಚಾರಿಸುತ್ತಾರೆ. ರೈಲು ಕಾರ್ಯಾಚರಣೆಯೂ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲಿದೆ.

English summary
Indian Railways. From North to South broad gauge will unite 13 states. Here Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X