ತತ್ಕಾಲ್ ಟಿಕೆಟ್ ರದ್ದು ಮಾಡಿದ್ರೂ ಹಣ ವಾಪಸ್

ನವದೆಹಲಿ, ಜೂ. 03: ಅಯ್ಯೋ ಅನಿವಾರ್ಯ ಕಾರಣದಿಂದ ಪ್ರಯಾಣ ರದ್ದು ಮಾಡಬೇಕಾಗಿ ಬಂತು. ತತ್ಕಾಲ್ ಟಿಕೆಟ್ ಮಾಡಿಸಿದ್ದೆ, ಆ ಹಣ ಹೋಯ್ತು ಎಂದು ಇನ್ನು ಮುಂದೆ ಕೊರಗುವ ಹಾಗಿಲ್ಲ.

ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ, ಟಿಕೆಟ್‌ ರದ್ದತಿ ಮತ್ತು ಮರುಪಾವತಿ ನಿಯಮವನ್ನು ಪರಿಷ್ಕರಿಸಲು ಮುಂದಾಗಿದೆ. ತತ್ಕಾಲ್‌ ಟಿಕೆಟ್‌ ರದ್ದು ಮಾಡಿದರೆ ಶೇ. 50ರಷ್ಟು ಹಣವನ್ನು ವಾಪಸ್‌ ನೀಡುವ ಯೋಜನೆ ರೂಪಿಸಲಾಗಿದೆ. ಪರಿಷ್ಕೃತ ನಿಯಮಗಳನ್ನು ಜುಲೈ 1 ರಿಂದ ಜಾರಿ ಮಾಡಲಾಗುವುದು ಎಂದು ರೈಲ್ವೆಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

indian railways

ಪ್ರೀಮಿಯಂ ಟಿಕೆಟ್ ಬುಕಿಂಗ್ ಅವಧಿಯನ್ನು ಈಗಿರುವ 15 ದಿನಗಳ ಬದಲಾಗಿ 30 ದಿನಕ್ಕೆ ಏರಿಸಲಾಗುತ್ತಿದೆ. ಪ್ರೀಮಿಯಂ ಟಿಕೆಟ್ ಗಳನ್ನು ಕೌಂಟರ್ ನಲ್ಲಿಯೇ ಪಡೆಯಲು ವ್ಯವಸ್ಥೆ ಮಾಡಲಾಗಿದೆ.[ರೈಲ್ವೆಯಲ್ಲಿ ಟೀ ಮಾರುವವರು ಮೆನು ಕಾರ್ಡ್ ಇಟ್ಕೋಬೇಕು]

ತತ್ಕಾಲ್ ಬುಕಿಂಗ್ ಸಮಯ ಬದಲು
ದೇಶದ ಎಲ್ಲ ಕಡೆ ಒಂದೇ ವೇಳೆಗೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. ಇದರಿಂದ ವೆಬ್ ಸೈಟ್ ಕ್ರ್ಯಾಶ್ ಆಗಿ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯವನ್ನು ದೇಶದ ಪ್ರದೇಶಗಳಿಗೆ ಅನ್ವಯವಾಗುವಂತೆ ಬದಲಾಯಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದರಿಂದ ಅನಗತ್ಯ ಸಮಸ್ಯೆಗಳು ತಪ್ಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+