Railway Rules: ಏರ್‌ಪೊರ್ಟ್‌ಗಳಂತೆ ರೈಲು ನಿಲ್ದಾಣಗಳಲ್ಲಿ ಲಗೇಜ್‌ಗಳಿಗೆ ತೂಕದ ಮಿತಿ, ದಂಡ! ಹೊಸ ನಿಯಮ...
Indian Railway New Rules: ದೇಶವ್ಯಾಪಿ ರೈಲು ಸಾರಿಗೆಯಲ್ಲಿ ಮಹತ್ವದ ಸುಧಾರಣೆಳು, ದ್ವಿಪಥ ಕಾರ್ಯ, ಹೊಸ ಮಾರ್ಗಗಳು ಹೀಗೆ ರೈಲು ಮೂಲಸೌಕರ್ಯ ಅಭಿವೃದ್ಧಿ ಹೊಂದುತ್ತಿವೆ. ರೈಲು ಸಾರಿಗೆ ಮೇಲಿನ ಜನರ ಅವಲಂಬನೆ ಸಹ ಹೆಚ್ಚಾಗುತ್ತಿದೆ. ಇದೆಲ್ಲ ಗಮನಿಸಿ ಕಾಲಕಾಲಕ್ಕೆ ಅಗತ್ಯ ನಿಯಮ ತರುತ್ತಿರುವ ರೈಲ್ವೆ ಅಧಿಕಾರಿಗಳು ಇದೀಗ ಏರ್‌ಪೋರ್ಟ್‌ಗಳಲ್ಲಿರುವಂತೆ ರೈಲ್ವೆ ನಿಲ್ದಾಣಗಳಲ್ಲೂ ಹೊಸ ನಿಯಮ ತರಲು ಮುಂದಾಗಿದೆ.
ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರು ತರುವ ಲಗೇಜ್‌ತೂಕ ಇಂತಿಷ್ಟೇ ಇರಬೇಕು ಎಂಬ ನಿಯಮ ರೂಪಿಸಲಾಗಿದೆ. ಅದಕ್ಕಿಂತ ಹೆಚ್ಚಿನ ತೂಕದ ಬ್ಯಾಗ್ (ಲಗೇಜ್) ವಿಮಾನದೊಳಗೆ ಒಯ್ಯುವಂತಿಲ್ಲ. ಅದೇ ರೀತಿ ರೈಲ್ವೆ ಪ್ರಯಾಣಿಕರಿಗೆ ಅರಾಮದಾಯಕ ಅನುಭವ ನೀಡುವ ಉದ್ದೇಶದಿಂದ ರೈಲ್ವೆ ಪ್ರಯಾಣಿಕರ ಲಗೇಜ್ ಮೇಲೆ ತೂಕದ ಮಿತಿ ನಿಗದಿ ಮಾಡಲಾಗಿದೆ.

ಇನ್ನು ಮುಂದೆ ರೈಲು ನಿಲ್ದಾಣಗಳ ಒಳಗೆ ಹೋಗಬೇಕಾದರೆ ನೀವು ಮೊದಲು ನಿಮ್ಮ ಬ್ಯಾಗ್ ತೂಕ ಪರಿಶೀಲಿಸಬೇಕಾಗುತ್ತದೆ. ಸುರಕ್ಷತೆ ಹಾಗೂ ಪ್ರಯಾಣಿಕರ ಅನುಕೂಲ ಉದ್ದೇಶದಿಂದ ಈ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಒಂದು ವೇಳೆ ನಿಗದಿತ ತೂಕಕ್ಕಿಂತಲೂ ಹೆಚ್ಚಿನ ಭಾರದ ಲಗೇಜ್ ನೀವು ಸಾಗಿಸಬೇಕಾದರೆ ಟಿಕೆಟ್ ಮೇಲೆ ಹೆಚ್ಚುವರಿ ಹಣ ಸಹ ಪಾವತಿಸಬೇಕಾಗುತ್ತದೆ.
ಈ ಹೊಸ ನಿಯಮವನ್ನು ಅಸಲಿಗೆ ಉತ್ತರ ಮಧ್ಯ ರೈಲ್ವೆ ಜಾರಿಗೆ ತರಲು ಹೊರಟಿದೆ. ತನ್ನ ವ್ಯಾಪ್ತಿಯ ರೈಲು ನಿಲ್ದಾಣಗಳಲ್ಲಿ ಈ ಹೊಸ ನಿಯಮ ತರಲಿದೆ. ಸದ್ಯ ಪ್ರಯಾಗ್ ರಾಜ್ ರೈಲು ನಿಲ್ದಾಣದಲ್ಲಿ ಈ ವ್ಯವಸ್ಥೆ ಆರಂಭಿಸಲಾಗುತ್ತದೆ. ಮಾತ್ರವಲ್ಲದೇ ಸುಬೇದಾರ್‌ಗಂಜ್, ಕಾನ್ಪುರ್ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಅಲಿಗಢ ಜಂಕ್ಷನ್, ಗೋವಿಂದಪುರಿ ಮತ್ತು ಇಟಾವಾ ನಿಲ್ದಾಣಗಳಲ್ಲೂ ಸಹ ಲಗೇಜ್‌ಗೆ ಮಿತಿ ಹೇರಲಾಗುತ್ತದೆ. ಈ ನಿಲ್ದಾಣಗಳಲ್ಲಿ ಶೀಘ್ರವೇ ಲಗೇಜ್ ತೂಕ ಪರಿಶೀಲಿಸುವ ಎಲೆಕ್ಟ್ರಿಕ್ ಯಂತ್ರ ಅಳವಡಿಸಲಾಗುತ್ತದೆ.
ದೊಡ್ಡ ದೊಡ್ಡ ಬ್ಯಾಗ ಸಹ ಒಯ್ಯುವಂತಿಲ್ಲ ಎಂಬ ನಿಯಮ ಸಹ ಇದರಲ್ಲಿ ಸೇರ್ಪಡೆಯಾಗಿದೆ. ಸಣ್ಣ ಬ್ಯಾಗ್‌ಗಳು ಇರಬೇಕು. ನಿಗದಿತ ತೂಕದಲ್ಲಿ ಲಗೇಜ್ ಇರಬೇಕು. ದೊಡ್ಡ ದೊಡ್ಡ ಲಗೇಜ್ ಒಯ್ದರೆ ಕೋಚ್ ಒಳಗೆ ಹೆಚ್ಚಿನ ಜಾಗ ಹಿಡಿದು ಕಿರಿಕಿರಿ ಉಂಟು ಮಾಡಬಹುದು. ಹೀಗೇನಾದರೂ ಆದರೆ ದಂಡ ವಿಧಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಲಗೇಜ್ ಮಿತಿ ವಿವರ ಇಲ್ಲಿದೆ
ಭಾರತೀ ರೈಲ್ವೆ ಅಧಿಕಾರಿಗಳ ಪ್ರಕಾರ ಲಗೇಜ್ ಮಿತಿ ನೋಡುವುದಾರೆ, First AC (1A) ನಲ್ಲಿ 70 ಕೆಜಿ ವರೆಗೆ ಲಗೇಜ್ ತೂಕದ ಮಿತಿ, Second AC (2A)-50 ಕೆಜಿ, Third AC (3A)- 40 ಕೆಜಿ ವರೆಗೆ, ಸ್ಲೀಪರ್ ಕ್ಲಾಸ್- 40 ಕೆಜಿ ವರೆಗೆ.
ಸಾಮಾನ್ಯ/ಎರಡನೇ ಸಿಟ್ಟಿಂಗ್ ಪ್ರಯಾಣಿಕರಿಗೆ 35 ಕೆಜಿ ತೂಕದವರೆಗೆ ಲಗೇಜ್ ಒಯ್ಯಲು ಅವಕಾಶ ಇದೆ. ರೈಲ್ವೆ ಟಿಕೆಟ್ ಬುಕ್ ಮಾಡದ ಪ್ರಯಾಣಿಕರು ಮಿತಿಗಿಂತ 10 ಕೆಜಿ ಹಾಗೂ ಅದಕ್ಕಿಂತ ಹೆಚ್ಚಿನ ತೂಕದ ಲಗೇಜ್ ಸಹಿತ ಪ್ರಯಾಣಿಸಬಹುದು. ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ರೈಲ್ವೆ ನಿಲ್ದಾಣಗಳ ಲಗೇಜ್ ಕೌಂಟರ್‌ನಲ್ಲಿ ತೂಕ ಮಾಡಬೇಕೆಂದು ಉತ್ತರ ಮಧ್ಯ ರೈಲ್ವೆ ತಿಳಿಸಿದೆ.
ಟಿಕೆಟ್ ಬುಕ್ ಮಾಡಿ ಲಗೇಜ್ ಸಾಗಿಸುವಾಗ ಅದರ ತೂಕ ಹೆಚ್ಚಿದ್ದರೆ ಹೆಚ್ಚುವರಿ ಹಣ ಪಾವತಿಸಬೇಕು. ಒಂದು ವೇಳೆ ಟಿಕೆಟ್ ಬುಕ್ ಮಾಡದೇ ಹೆಚ್ಚುವರಿ ನಿಗದಿತ ಮಿತಿ ಮೀರಿದ ತೂಕದ ಲಗೇಜ್ ಕಂಡು ಬಂದಲ್ಲಿ ದಂಡದ ಪ್ರಯಾಣ ಹೆಚ್ಚಾಗಬಹುದೆಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಈ ಲಗೇಜ್ ನಿಯಮ ಉತ್ತರ ಪ್ರದೇಶ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ನಿಯಮ ಜಾರಿ ಬಗ್ಗೆ ಅಧೀಕೃತ ಮಾಹಿತಿ ಸಿಗಬೇಕಿದೆ.












Click it and Unblock the Notifications